ಟೇಕ್ ಆಪ್ ವೇಳೆ ಖಾಸಗಿ ಜೆಟ್ ಅಪಘಾತ; ಏಳು ಮಂದಿ ಮೃತ್ಯು; ಓರ್ವನಿಗೆ ಗಾಯ!

ವಾಷಿಂಗ್ಟನ್: ಅಮೆರಿಕಾದ ಮೈನೆ ರಾಜ್ಯದಲ್ಲಿ ಭಾರಿ ಹಿಮಪಾತದಿಂದ ಖಾಸಗಿ ಜೆಟ್ವೊಂದು ಟೇಕ್ ಆಫ್ ಆಗುವ ವೇಳೆ ಪತನಗೊಂಡಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ(ಜ. 26) ವರದಿಯಾಗಿದೆ. ಮೈನೆ ರಾಜ್ಯದ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ವಿಮಾನ ನಿಲ್ದಾಣದಿಂದ ಹೊರಡುವಾಗ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ […]
ಉಡುಪಿ: ಕೋಟ ಮೂಲದ ಡಾ. ಎಚ್.ವಿ. ಹಂದೆಗೆ ‘ಪದ್ಮಶ್ರೀ’ ಪುರಸ್ಕಾರ

ಉಡುಪಿ: ಕೋಟ ಹಂದಟ್ಟಿನ ಪ್ರಸಿದ್ಧ ಹಂದೆ ಮನೆತನದ 99ರ ಪ್ರಾಯದ ಹಿರಿಯ ವೈದ್ಯ ಡಾ. ಎಚ್.ವಿ. ಹಂದೆ ಅವರಿಗೆ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ 2026ರ ಪ್ರತಿಷ್ಠಿತ ‘ಪದ್ಮಶ್ರೀ’ ಪುರಸ್ಕಾರ ಲಭಿಸಿದೆ. ವೃತ್ತಿಯಲ್ಲಿ ವಕೀಲರಾಗಿದ್ದು, ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ಕೋಟದ ಮಾದಪ್ಪ ಹಂದೆ ಪುತ್ರರಾದ ಅವರು, ವೈದ್ಯಕೀಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದವರಾಗಿದ್ದಾರೆ. ಮಂಗಳೂರು, ಚೆನ್ನೈ, ಕೊಯಮುತ್ತೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ತಮಿಳುನಾಡಿನ ಚೆನ್ನೈನಲ್ಲಿಯೇ ಹಂದೆ ಹಾಸ್ಪಿಟಲ್ ಸ್ಥಾಪಿಸಿ, ವೈದ್ಯರಾಗಿ ಸೇವೆ ಸಲ್ಲಿಸಿದರು. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ […]
ಬ್ರಹ್ಮಾವರ:ಜಿ.ಎಂ.ವಿದ್ಯಾನಿಕೇತನ 77ನೇ ಗಣರಾಜ್ಯೋತ್ಸವ ಸಂಭ್ರಮ

ಬ್ರಹ್ಮಾವರ :”ವಿಶ್ವದಲ್ಲಿಯೇ ಅತೀ ದೊಡ್ಡ ಹಾಗೂ ಪರಿಪಕ್ವ ಪ್ರಜಾಪ್ರಭುತ್ವ ವ್ಯವಸ್ಥೆ ಮೈಗೂಡಿಸಿಕೊಂಡು ಬೆಳೆಯುತ್ತಿರುವ ದೇಶ ಅನ್ನುವ ಹೆಗ್ಗಳಿಕೆ ಭಾರತಕ್ಕಿದೆ.ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿ ನಿಂತಿರುವ ಲಿಖಿತ ಸಂವಿಧಾನ.ಭಾರತೀಯ ಸಂವಿಧಾನದ ಮೂಲ ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸ ಬೇಕಾದ ಅನಿವಾರ್ಯತೆ ಇದೆ. ವಿವಿಧತೆಯಲ್ಲಿಯೇ ಏಕತೆಯ ಬದುಕನ್ನು ಮೈಗೂಡಿಸಿಕೊಂಡು ಸಹಭಾಗಿತ್ವದಲ್ಲಿ ಬದುಕುವುದೆ ನಮ್ಮ ಅತಿ ದೊಡ್ಡ ಶಕ್ತಿ ಅನ್ನುವುದನ್ನು ನಾವು ಖಂಡಿತವಾಗಿಯೂ ಮರೆಯುವಂತಿಲ್ಲ” ಎಂದು ಎಂಜಿಎಂ. ಕಾಲೇಜು ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ […]
ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಯೋಧನಿಗೆ ಅವಮಾನ ವಿಚಾರ- ಕ್ಷಮೆಯಾಚಿಸಿದ ಟೋಲ್ ಸಿಬ್ಬಂದಿ!

ಉಡುಪಿ: ದೇಶಕ್ಕಾಗಿ ಹೋರಾಡಿದ ನಿವೃತ್ತ ಸೈನಿಕನಿಗೆ ಭಾನುವಾರ ರಾತ್ರಿ ಬ್ರಹ್ಮಾವರ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅವಮಾನಪಡಿಸಿದ ಘಟನೆ ನಡೆದಿತ್ತು. ಇದೀಗ ತಮ್ಮ ತಪ್ಪಿನಿಂದ ಎಚ್ಚೆತ್ತುಕೊಂಡ ಟೋಲ್ ಸಿಬ್ಬಂದಿ ನಿವೃತ್ತ ಯೋಧನ ಕ್ಷಮೆಯಾಚಿಸಿದ್ದಾರೆ.ಸಾಸ್ತಾನ ಟೋಲ್ ಪ್ಲಾಜಾದ ಸಿಬ್ಬಂದಿಗಳಾದ ಶೀನ ಹಾಗೂ ಸುರೇಶ್ ವಿಡಿಯೋ ಮೂಲಕ ಕ್ಷಮಾಪಣೆ ಕೇಳಿದ್ದಾರೆ. ನಿವೃತ್ತ ಸೈನಿಕ ಶ್ಯಾಮರಾಜ್ ಅವರು ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ವತಃ ನಿವೃತ್ತ ಸೈನಿಕ ಶ್ಯಾಮರಾಜ್ ಅವರು ವಿಡಿಯೋ ದಾಖಲಿಸಿ […]
ಜ.26 ರಿಂದ ಜ.30: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್!

ಮಣಿಪಾಲ: (MSDC) ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ ಜ.30 ರ ವರೆಗೆ ಉಗುರುಗಳು, ಕೂದಲು, ಚರ್ಮ, ಮೇಕ್ಅಪ್ ಹಾಗೂ ಕಾಸ್ಮೆಟಾಲಜಿ’ಗೆ ವೀಶೆಷ ಕೊಡುಗೆಯನ್ನು ಆಯೋಜಿಸಿದೆ. ಜ.26 ರಿಂದ ಭೇಟಿ ನೀಡಿ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯಿರಿ. ನಿಮ್ಮ ಉತ್ಸಾಹವನ್ನು ವೃತ್ತಿಜೀವನಕ್ಕೆ ಬದಲಾಯಿಸಿ, ನಮ್ಮ ಕಾಸ್ಮೆಟಾಲಜಿ ಕೋರ್ಸ್ಗೆ ಸೇರಿಕೊಳ್ಳಬಹುದು. ಬೆಳಿಗ್ಗೆ 10:00 ರಿಂದ ಸಂಜೆ 04:00 ರವರೆಗೆ. ಕೋರ್ಸ್ಗಳು: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸ್ಥಳ: ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, […]