ಯತ್ನಾಳ್ ಅವರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಉಡುಪಿ: ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ. ಯಾರಿಗೂ ಅನ್ಯಾಯ ಮಾಡಲ್ಲ. ಎಲ್ಲರನ್ನು ಸಮಾನರಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣಗೊಳಿಸಿ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು. […]

ಉಡುಪಿಯಲ್ಲಿ ಗಮನ ಸೆಳೆದ ಹೊಸ‌ ಟೀಶರ್ಟ್ , ಚಡ್ಡಿ‌ ಧರಿಸಿದ ಬೀದಿ ಶ್ವಾನ

ಉಡುಪಿ: ಹೊಸ‌ ಟಿಶರ್ಟ್‌‌, ಚಡ್ಡಿ‌ ಧರಿಸಿರುವ ಬೀದಿ ಶ್ವಾನವೊಂದು‌ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವುದು ಗಮನಸೆಳೆಯಿತು. ಒಂದಿಷ್ಟು ಜನರು ಫೋಟೋ ಕ್ಲಿಕ್ಕಿಸಿದರು. ಕೆಲವರಂತೂ ಮುಸಿ ಮುಸಿ ನಕ್ಕರು. ನಿಜ ಸಂಗತಿ‌ ತಿಳಿದುಬಂದಾಗ ಎಲ್ಲರೂ ವಿಸ್ಮಿತರಾದರು.‌ ಪ್ರಾಣಿಪ್ರಿಯ ನಿತ್ಯಾನಂದ ಒಳಕಾಡು ಅವರು ನಾಯಿಗೆ ಸ್ನಾನಮಾಡಿಸಿ ಹೊಸ‌ಬಟ್ಟೆ ಉಡಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದರು. ಈ ಬೀದಿ‌ನಾಯಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಅಪಘಾತದಿಂದ ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿತ್ತು. ಒಳಕಾಡುವರು ರಕ್ಷಿಸಿ ಚಿಕಿತ್ಸೆಗೆ ಒಳಪಡಿಸಿದ್ದರು. ಅಲ್ಲಿಂದ‌ ಆ ನಾಯಿಗೆ ಆಹಾರ […]

ಉಡುಪಿ: ಆತ್ರಾಡಿಯಲ್ಲಿ “ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್” ಮಳಿಗೆ ಶುಭಾರಂಭ

ಉಡುಪಿ: ತಾಲೂಕಿನ ಆತ್ರಾಡಿಯಲ್ಲಿ ಶ್ರೀ ಗುರು ಹೋಟೆಲ್ ಎದುರು, ಮುಖ್ಯರಸ್ತೆಯ ಬಳಿ ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆ ಶುಭಾರಂಭಗೊಂಡಿದೆ. ಉದ್ಘಾಟನೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಗ್ರಾಹಕರ ಪ್ರತಿ ರೂ.999 ಖರೀದಿಗೆ ಒಂದು ಉಚಿತ ಕೂಪನ್ ನೀಡಲಾಗುವುದು. ಈ ಕೂಪನ್ನಲ್ಲಿ ◼️ಮೊದಲನೇ ಬಹುಮಾನ 32inch TV.◼️ಎರಡನೇ ಬಹುಮಾನ Glasstop 3 Burnal Stove.◼️ಮೂರನೇ ಬಹುಮಾನ Grinder◼️ ಹಾಗೂ ಐದು ಸಮಾಧಾನಕರ ಬಹುಮಾನ ನೀಡಲಾಗುವುದು. ಇಲ್ಲಿ […]

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ; ಧ್ವಜಾರೋಹಣ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲದಲ್ಲಿ ಗೌರವ ವಂದನೆ ಸ್ವೀಕರಿಸಿದರು.ಈ ವೇಳೆ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ […]

ಖ್ಯಾತ ನಟ ರಜನೀಕಾಂತ್ ಅವರಿಗೆ ಪುತ್ತಿಗೆ ಪರ್ಯಾಯ ಕಾರ್ಯಕ್ರಮಗಳಿಗೆ ಆಹ್ವಾನ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಉಡುಪಿ ಶ್ರೀಕೃಷ್ಣನ ಭಕ್ತರಾದ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನೀಕಾಂತ್ ಅವರನ್ನು ಪರ್ಯಾಯದ ಕಾರ್ಯಕ್ರಮಗಳಿಗೆ ಆಮಂತ್ರಿಸಲಾಯಿತು. ಮಠದ ವತಿಯಿಂದ ಹರೀಶ್ ಭಟ್ ಅವರು ರಜನೀಕಾಂತ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ರಜನೀಕಾಂತ್ ಅವರು ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಖುದ್ದಾಗಿ ಮಾಹಿತಿ ಪಡೆದುಕೊಂಡು ಸಂತೋಷಪಟ್ಟು, ಸದ್ಯದಲ್ಲಿಯೇ ಭೇಟಿ ನೀಡುವುದಾಗಿ ತಿಳಿಸಿದರು.