ಕುಂದಾಪುರ: ಮೂಡಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಕ್ಕೆ ಪ್ರಶಸ್ತಿ.

ಕುಂದಾಪುರ: ಮೂಡಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ತಂಡವು ಸ್ಥಳೀಯ ನಾವಿಕ್ ನ್ಯಾವಿಗೇಷನ್ ಅಪ್ಲಿಕೇಶನ್ನೊಂದಿಗೆ ನಿಟ್ಟೆ ಯುವ ಉದ್ಯಮಿಗಳ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ ಸ್ಥಳೀಯ ನಾವಿಕ್ ಉಪಗ್ರಹ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ವಿದೇಶಿ ನ್ಯಾವಿಗೇಷನ್ ನೆಟ್ವರ್ಕ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನವೀನ ನ್ಯಾವಿಗೇಷನ್ ಅಪ್ಲಿಕೇಶನ್ಗಾಗಿ ಈ ಪ್ರಶಸ್ತಿ ಲಭಿಸಿದೆ. ಡಾ. ಜೆ. ಪ್ರಕಾಶ್ ಮತ್ತು ಶ್ರೀ ಗಗನ್ ಬಂಗೇರ ಬಿ. ಟಿ ಅವರ ಮಾರ್ಗದರ್ಶನದಲ್ಲಿ ನವೀನ್ ಪಾಟೀಲ್, ಶಶಾಂಕ್ ಎಸ್. ಎನ್, ಮೇಘಶ್ರೀ ಮತ್ತು […]

ಮೂಡ್ಲಕಟ್ಟೆ: ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 4 ಫೆಬ್ರವರಿ 2026ರಂದು ಕಾರ್ಪೊರೇಟ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ ಎಂಬ ವಿಷಯದ ಬಗ್ಗೆ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಸೆಲ್ ಮತ್ತು ಡಿಪಾರ್ಟ್ಮೆಂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಜೊತೆಗೂಡಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ಕೈಗೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಬಿ. ದಯಾನಂದ್ ಶೆಟ್ಟಿ , ಡೈರೆಕ್ಟರ್ ಅಂಡ್ ಸೀನಿಯರ್ ಕನ್ಸಲ್ಟೆಂಟ್ ಪ್ರೊಜಿನ್ ಟೆಕ್ಸ್ ಇವರು ಆಗಮಿಸಿ ಹೇಗೆ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಕಾರ್ಯಕ್ಷಮತೆಯನ್ನು […]

ಇಂಗ್ಲೆಂಡ್‌ ವಿರುದ್ಧ ವೈಭವ್‌ ಸೂರ್ಯವಂಶಿ ಸ್ಫೋಟಕ ಶತಕ.!

ಹರಾರೆ: ಐಸಿಸಿ ಅಂಡರ್‌ 19 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ವೈಭವ್‌ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇಂದಿನ ಪಂದ್ಯದಲ್ಲಿ ಸೂರ್ಯವಂಶಿ 175 ರನ್‌ ಹೊಡೆದಿದ್ದಾರೆ. ಈ ಮೂಲಕ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಪುರುಷರ ಅಥವಾ ಮಹಿಳೆಯರ ವಿಭಾಗ ಮತ್ತು ವಯೋಮಾನದ ಎಲ್ಲಾ ವಿಭಾಗಗಳಲ್ಲಿ ದಾಖಲಾದ ಅತ್ಯಧಿಕ ಸ್ಕೋರ್‌ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 2023 ರಲ್ಲಿ ಸೌತಾಂಪ್ಟನ್‌ನಲ್ಲಿ ಭಾರತ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ […]

ದಾವಣಗೆರೆ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಸನ್ಯಾಸತ್ವ ಸ್ವೀಕಾರ.!

ದಾವಣಗೆರೆ: ನಗರದ ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ ಕಡೆ ವಾಲಿದ್ದರು. ಸಂಸಾರ ಸುಖಃ ಜೀವನಕ್ಕಿಂತ ಸನ್ಯಾಸತ್ವದ […]

ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನ: 21ನೇ ವರ್ಧಂತಿ ಮಹೋತ್ಸವ ಸಂಪನ್ನ

ಉಡುಪಿ: ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ 21ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು. ವೇದಮೂರ್ತಿ ಅಲೆವೂರು ಮೋಹನ ತಂತ್ರಿಗಳ ನೇತೃತ್ವದಲ್ಲಿ ಆಶ್ಲೇಷಬಲಿ, ನವಕ ಪ್ರದಾನ ಹೋಮ, ಕಳಶಾಭಿಷೇಕ ಪ್ರಸನ್ನ ಪೂಜೆ ನೆರವೇರಿತು. ಸಾವಿರಾರು ಮಂದಿ ಸನ್ನಿಧಾನಕ್ಕೆ ಆಗಮಿಸಿ ನಾಗದೇವರ ದರ್ಶನ ಪಡೆದರು. ಬಳಿಕ ಭೋಜನ ಪ್ರಸಾದ ಸ್ವೀಕರಿಸಿದರು.ಮೂರು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಸ್ಥಳೀಯರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕಾತಿಕ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮ, ಭಕ್ತಿ ಸಂಗೀತ ರಸಮಂಜರಿ, ಕುಣಿತ ಭಜನೆ ಹಾಗೂ […]