MSDC ಯ ಈ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ, ಫಾರ್ಮಾ ವೃತ್ತಿಪರರು ಜನರೇಟಿವ್ ಎಐ ತಂತ್ರಜ್ಞಾನದಲ್ಲಿ ತಜ್ಞರಾಗಬಹುದು!

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ “ಫಾರ್ಮಾ ವೃತ್ತಿಪರರಿಗೆ ಜನರೇಟಿವ್ ಎಐ” ವಿಷಯದ ಮೇಲೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಫೆ. 21 ರಂದು ಆಯೋಜಿಸಲಾಗಿದೆ. ಆರು ಗಂಟೆಗಳ ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವೃತ್ತಿಪರರಿಗೆ ಔಷಧೋದ್ಯಮದಲ್ಲಿ ಜನರೇಟಿವ್ ಎಐ ಅನ್ವಯಿಕೆಗಳ ಕುರಿತು ಪರಿಚಯ ಮತ್ತು ಪ್ರಾಯೋಗಿಕ ಅರಿವು ನೀಡುವ ಉದ್ದೇಶ ಹೊಂದಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಫಾರ್ಮಾ ಕ್ಷೇತ್ರದಲ್ಲಿ ಜನರೇಟಿವ್ ಎಐಯ ಮೂಲಭೂತ ಅಂಶಗಳು, ಉದ್ಯಮದಲ್ಲಿನ GenAI ಆಧಾರಿತ ಉದ್ಯೋಗಾವಕಾಶಗಳು ಹಾಗೂ […]
ಉಡುಪಿ ನಗರಸಭೆ ಆಸ್ತಿತೆರಿಗೆ ಪಾವತಿ ವೇಳೆ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ವಂಚನೆ: ಮಹಿಳೆ ಸಹಿತ ಇಬ್ಬರ ಬಂಧನ

ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ 76 ಬಡಗುಬೆಟ್ಟು ಕಸ್ತೂರ್ಬಾನಗರದ ನಿವಾಸಿ ಸುಪೇಶ್ (25) ಹಾಗೂ ಮೂಡುಅಲೆವೂರಿನ ಕುಂತಲನಗರ ನಿವಾಸಿ ಶಾಂತಾ (43) ಬಂಧಿತ ಆರೋಪಿಗಳು. ಈ ಇಬ್ಬರನ್ನು ಉಡುಪಿ ಕೃಷ್ಣಮಠದ ರಾಜಾಂಗಣ ಬಳಿ ವಶಕ್ಕೆ ಪಡೆದು, ಅವರಿಂದ ವಂಚನೆಗೆ ಬಳಸಿದ ಸೀಲ್ ಮತ್ತು ದಾಖಲೆ ಪತ್ರದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಘಟನೆ ವಿವರ:ನಗರಸಭೆ […]
ಉಡುಪಿ:ಫೆ.19 ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ -2026

ಉಡುಪಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ದಿನಾಂಕ 19/02/2026 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ -2026 ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣ, ಡಯಟ್ ಪಕ್ಕಾ ಉಡುಪಿ ಇಲ್ಲಿ ನಡೆಯಲಿದೆ. ಮಾಹಿತಿಗಾಗಿ ಸಂಪರ್ಕಿಸಿ:ಛತ್ರಪತಿ ಶಿವಾಜಿ ವಿವಿದೊದ್ದೇಶ ಸಹಕಾರ ಸಂಘ ನಿ. ಉಡುಪಿ.📞0820-4295090, 9945624617
ಎಂಐಟಿಕೆನಲ್ಲಿ ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ರೋಬೋಟಿಕ್ಸ್ನ ಸ್ಮಾರ್ಟ್ ಇನೋವೇಶನ್ ಕೇಂದ್ರ ಉದ್ಘಾಟನೆ

ಕುಂದಾಪುರ: ಐ ಎಮ್ಜೆ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಡಿ, ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ಆಧಾರಿತ ನವೀನತೆ ಹಾಗೂ ಜಾಗತಿಕ ಸಹಕಾರಗಳತ್ತ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಮೂಡ್ಲಕಟ್ಟೆ ತಾಂತ್ರಿಕ ಸಂಸ್ಥೆಯ ಸಂಶೋಧನಾ ವಿಭಾಗದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ರೋಬೋಟಿಕ್ಸ್ನ ಸ್ಮಾರ್ಟ್ ಇನೋವೇಶನ್ ಕೇಂದ್ರವನ್ನು ಫೆಬ್ರವರಿ 12, 2026 ರಂದು ಉದ್ಘಾಟಿಸಲಾಯಿತು. ಈ ಕೇಂದ್ರವನ್ನು ಸಂಶೋಧನೆ ಹಾಗೂ ಸಲಹಾ ವಿಭಾಗದ ಡೀನ್ ಆಗಿರುವ ಡಾ. ಇಂದ್ರ ವಿಜಯ್ […]
ಮೂಡುಬಿದಿರೆ: ಕಾರು ಬೈಕಿಗೆ ಡಿಕ್ಕಿ; ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಮೃತ್ಯು

ಮೂಡುಬಿದಿರೆ : ತಾಲೂಕಿನ ಬನ್ನಡ್ಕದಲ್ಲಿ ಗುರುವಾರ ರಾತ್ರಿ ನಡೆದ ಕಾರು–ಬೈಕ್ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋಟರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಸದಾನಂದ ಸುವರ್ಣ–ರಾಜಶ್ರೀ ದಂಪತಿಯ ಪುತ್ರ ಶ್ರವಣ್ ಎಂದು ಗುರುತಿಸಲಾಗಿದೆ. ಕಾಮಗಾರಿ ಹಂತದಲ್ಲಿರುವ ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ದೈವಸ್ಥಾನದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಅವರೊಂದಿಗೆ ಶ್ರವಣ್ ಸಹ ಸವಾರರಾಗಿದ್ದರು ಎನ್ನಲಾಗಿದೆ. ಕಾರ್ಕಳ ಕಡೆಯಿಂದ ವೇಗವಾಗಿ ಬಂದ […]