ಉಡುಪಿ: ಮಹಿಳೆ ನಾಪತ್ತೆ

ಉಡುಪಿ, ಫೆ.16: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮ ಚೋರಾಡಿ ನಿವಾಸಿ ರತಿ (37) ಎಂಬ ಮಹಿಳೆಯು ಜನವರಿ 31 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ದಪ್ಪ ಶರೀರ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ವಿದ್ಯಾರ್ಥಿ ಬಂಧನ

ಉಡುಪಿ: ಕುಡಿದ ಮತ್ತಿನಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ಮಣಿಪಾಲದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಮನ್ಯು ನೇಗಿ ಬಂಧಿತ ವಿದ್ಯಾರ್ಥಿ. ಈತ ತಡರಾತ್ರಿ ಪ್ರೆಸ್ ಯುನಿಟ್ 4 ಬಳಿ ಸಾಲಾಗಿ ನಿಲ್ಲಿಸಿದ್ದ 7 ದ್ವಿಚಕ್ರ ವಾಹನಗಳಿಗೆ ಹಾನಿ ಉಂಟುಮಾಡಿದ್ದಾನೆ. ಈ ವೇಳೆ ಎದುರಿನಿಂದ ಆಗಮಿಸುತ್ತಿದ್ದ ಆಟೋ ಚಾಲಕ 76 ಬಡಗಬೆಟ್ಟು ನಿವಾಸಿ ಶಿವಪ್ರಸಾದ್ ಅವರಿಗೂ ಕಾರು ಡಿಕ್ಕಿ ಹೊಡೆದಿದ್ದು, ಅವರ ತಲೆಗೆ ಗಾಯವಾಗಿದೆ. ಹರಿಯಾಣ ನೋಂದಣಿ ಹೊಂದಿರುವ ರಿಟ್ಝ್ ಕಾರಿನಲ್ಲಿ ಈತ ಈ […]

ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ; ಸಹ ಸಂಚಾಲಕರಾಗಿ ಗಣೇಶ್ ಕಲ್ಯಾಣಪುರ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025–28ನೇ ಸಾಲಿನ ನೂತನ ಸಂಚಾಲಕರಾಗಿ ಚಾನೆಲ್ 9 ವಾಹಿನಿಯ ಅಂಕಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ವಾರ್ತಾಧಿಕಾರಿ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ಉದಯವಾಣಿಯ ಗಣೇಶ್ ಕಲ್ಯಾಣಪುರ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಮ್ಮ ಟಿವಿಯ ರಾಜೇಶ್ ಶೆಟ್ಟಿ, ಉದಯವಾಣಿಯ ರಾಜು ಖಾರ್ವಿ, ಪುನೀತ್ ಸಾಲ್ಯಾನ್, ಎಸ್.ಜಿ. ನಾಯ್ಕ್, […]

ಕಾರ್ಕಳ–ಮೂಡುಬಿದ್ರೆ: ‘ಪುಸ್ತಕ ಮನೆ’ಯಲ್ಲಿ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ

ಕಾರ್ಕಳ :’ಪುಸ್ತಕ ಮನೆ’ ವತಿಯಿಂದ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಸೌಲಭ್ಯಗಳು: 🔹ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಹಾಗೂ ರೆಸಿಡೆನ್ಷಿಯಲ್ ಅಭ್ಯರ್ಥಿಗಳಿಗೆ ಆದ್ಯತೆ. 🔹ಉತ್ತಮ ವೇತನ,ಉಚಿತ ಊಟ ಮತ್ತು ವಸತಿ ಪದವಿ ಹಾಗೂ ಸಂಬಂಧಿತ ಅನುಭವ ಅಗತ್ಯ. 📩[email protected] ಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗೆ: 📞9606997391

ಶಿವಮೊಗ್ಗದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ನಲ್ಲಿ ರಿಸೆಪ್ಷನಿಸ್ಟ್ ಹುದ್ದೆಗೆ ನೇಮಕಾತಿ

ಕಾರ್ಕಳ:ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್‌ ಕಾರ್ಕಳ ವತಿಯಿಂದ ರಿಸೆಪ್ಷನಿಸ್ಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆ ಮಹಿಳಾ ಅಭ್ಯರ್ಥಿಗಳಿಗೆ (ರೆಸಿಡೆನ್ಷಿಯಲ್ ಸ್ಟಾಫ್) ಮೀಸಲಾಗಿದ್ದು, ಉತ್ತಮ ವೇತನದ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಪದವಿ ಪೂರ್ಣಗೊಳಿಸಿರುವವರು ಹಾಗೂ ಸಂಬಂಧಿತ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. 📍: Shivamoggaಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು [email protected] ಗೆ ಇಮೇಲ್ ಮೂಲಕ ಕಳುಹಿಸಬಹುದು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:📞 9606997391