ಮೊಗವೀರ ಸಮಾಜದ ಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ

ಉಚ್ಚಿಲ: ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಉಚ್ಚಿಲ ಮೊಗವೀರ ಭವನದಲ್ಲಿ ಇಂದು ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರು ನೂತನ ಪುತ್ಥಳಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು. ಮೊದಲಿಗೆ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯರವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ […]

ಮಂಗಳೂರು ವಿಭಾಗ ನೈರುತ್ಯ ವಲಯಕ್ಕೆ ಸೇರ್ಪಡೆ: ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ

ಉಡುಪಿ: ಕೋಟ ಶ್ರೀನಿವಾಸ್ ಪೂಜಾರಿಯವರು ಸಂಸದರಾದ ಬಳಿಕ ಕರಾವಳಿ ಭಾಗದ ರೈಲ್ವೆ ಸಂಚಾರ ಸಂಬಂಧಿತ ಅಭಿವೃದ್ಧಿಯು ತೀವ್ರ ಗತಿಯಿಂದ ಸಾಗುತ್ತಿದ್ದು ಇತ್ತೀಚಿಗೆ ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಹಾಗೂ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇಂದ್ರಾಳಿ ರೈಲ್ವೆ ಸೇತುವೆ ಲೋಕಾರ್ಪಣೆ ಗೊಂಡಿದೆ. ಇವೆಲ್ಲ ಕಾರ್ಯಗಳನ್ನು ಗುರುತಿಸಿ ಉಡುಪಿ ರೈಲ್ವೆ […]

ಮಂಗಳೂರಿನಲ್ಲಿ ಸೆ.25ರಿಂದ `BIG BRANDS EXPO – 2026

ಮಂಗಳೂರಿನಲ್ಲಿ ಬಿಎನ್‌ಐ (BNI ಮಂಗಳೂರು-ಉಡುಪಿ) ವತಿಯಿಂದ ಆಯೋಜಿಸಲಾಗಿರುವ ‘ಬಿಗ್ ಬ್ರಾಂಡ್ಸ್ ಎಕ್ಸ್ಪೋ – 2026’ (BIG BRANDS EXPO 2026) ಕಾರ್ಯಕ್ರಮವು ಸೆಪ್ಟೆಂಬರ್ 25 ರಿಂದ 27 ರವರೆಗೆ ಡಾ. ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ನಡೆಯಲಿದೆ . 

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ 15 ದಿನದ ಹಸುಗೂಸಿನಲ್ಲಿದ್ದ ಬೃಹತ್ ಮೆದುಳಿನ ಗೆಡ್ಡೆ ಹೊರತೆಗೆದು ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಮಣಿಪಾಲ, ಸೆ.24: ಕೇವಲ 15 ದಿನಗಳ ಪ್ರಾಯದಲ್ಲಿದ್ದಾಗ ಮೆದುಳಿನ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವೊಂದು ಇಂದು ಆರೋಗ್ಯವಂತ ಹಾಗೂ ಉತ್ಸಾಹಭರಿತ ಮೂರು ವರ್ಷದ ಬಾಲಕನಾಗಿ ಬೆಳೆದಿದ್ದು, ಶಾಲಾ ಪೂರ್ವ ಶಿಕ್ಷಣವನ್ನು (ಪ್ರಿಸ್ಕೂಲ್) ಪ್ರಾರಂಭಿಸಲು ಸಿದ್ಧನಾಗಿದ್ದಾನೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಆರಂಭಿಕ ಹಂತದ ಚಿಕಿತ್ಸೆ, ವಿಶೇಷ ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ವಿವಿಧ ವಿಭಾಗಗಳ ಸಮನ್ವಯದೊಂದಿಗೆ ನೀಡಲಾದ ಆರೈಕೆಯ ಫಲವಾಗಿ ಇದು ಸಾಧ್ಯವಾಗಿದೆ. ತಲೆಯ ಗಾತ್ರವು ಗಮನಾರ್ಹವಾಗಿ ದೊಡ್ಡದಾಗಿದ್ದ ಸ್ಥಿತಿಯಲ್ಲಿ 15 ದಿನಗಳ ಪ್ರಾಯದ ಶಿಶುವನ್ನು ಆಸ್ಪತ್ರೆಗೆ ಕರೆತರಲಾಯಿತು. ಇದು […]

ಸೌಜನ್ಯ ಪ್ರಕರಣ ಮರುತನಿಖೆಗೆ ಶಶಿಕುಮಾರ್ ಐಪಿಎಸ್ ನೇತೃತ್ವದ SIT ರಚನೆ

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂಕೋರ್ಟ್‌ ಸೂಚನೆಯಂತೆ ರಾಜ್ಯ ಸರಕಾರ ಎಸ್.ಐ.ಟಿ ಯನ್ನು ರಚಿಸಿದ್ದು ಪೊಲೀಸ್ ಮಹಾ ನಿರೀಕ್ಷಕರಾದ ಎನ್. ಶಶಿಕುಮಾರ್ ಐಪಿಎಸ್ ಅವರನ್ನು ಎಸ್.ಐ.ಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ಮಂಗಳೂರು ಪೊಲೀಸ್ ಕಮಿಷನರ್ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್. ರಾಜ್ಯ ಗುಪ್ತವಾರ್ತೆಯ ಪೊಲೀಸ್‌ ಅಧೀಕ್ಷಕರಾದ ನಿಶಾ ಜೇಮ್ಸ್ ಐಪಿಎಸ್, ಬೆಂಗಳೂರು ಸಿಐಡಿ ಪೊಲೀಸ್‌ ಅಧೀಕ್ಷಕರಾದ ಲೋಕೇಶ್ ಜಲಸಾಗ‌ರ್ ಐ.ಪಿ.ಎಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ ಅವರನ್ನು ಎಸ್.ಐ.ಟಿ […]