ಸುರತ್ಕಲ್: ಮಹಿಳೆ ನಾಪತ್ತೆ

ಮಂಗಳೂರು, ನ.9: ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿಕೊಂಡಿದ್ದಾರೆ. ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ ನ.4 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಪುಷ್ಪ ಅವರ ಮಗಳು ಜಯಶ್ರೀ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಅಥವಾ ಇವರನ್ನು ಯಾರಾದರೂ ಕಂಡಲ್ಲಿ ತಕ್ಷಣ ಸುರತ್ಕಲ್ ಠಾಣೆಗೆ ಅಥವಾ 9036056390 ಈ ನಂಬರಿಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ.

ಮಂಗಳೂರು: ಪತ್ನಿ, ಮಗುವನ್ನು ಹತ್ಯೆಗೈದು ಯುವಕ ಆತ್ಮಹತ್ಯೆ.

ಮಂಗಳೂರು: ತನ್ನ ಪತ್ನಿ ಹಾಗೂ 4 ವರ್ಷದ ಮಗುವನ್ನು ಹತ್ಯೆ ಮಾಡಿದ ಯುವಕನೊಬ್ಬ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಘಟನೆ ಮಂಗಳೂರು ನಗರ ಹೊರವಲಯದ ಮುಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಪಕ್ಷಿಕೆರೆಯ ಜಲಜಾಕ್ಷಿ ರೆಸಿಡೆನ್ಸಿ ನಿವಾಸಿ ಕಾರ್ತಿಕ್ ಭಟ್(32) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಪ್ರಿಯಾಂಕಾ(28) ಹಾಗೂ ಹೃದಯ್(4) ಕೊಲೆಯಾದವರು. ಯುವಕನ ಛಿದ್ರಗೊಂಡ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗು ಹತ್ಯೆಯಾಗಿರುವುದು ತಿಳಿದು ಬಂದಿದೆ. ಕಾರ್ತಿಕ್ ಇವರಿಬ್ಬರನ್ನು ಕೊಂದು ತಾನು […]

ಕಾರ್ಕಳ: ಓಮ್ನಿ -ಕಾರು ಮಧ್ಯೆ ಭೀಕರ ಅಪಘಾತ; ಚಾಲಕನಿಗೆ ಗಂಭೀರ ಗಾಯ

ಉಡುಪಿ: ಓಮ್ನಿ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ಗೋಮಟೇಶ್ವರ ಬೆಟ್ಟ ಬಳಿ ಇಂದು ಈ ದುರ್ಘಟನೆ ನಡೆದಿದೆ. ಜೋಡುಕಟ್ಟೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಓಮ್ನಿ ಮತ್ತು ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ಮಧ್ಯೆ ಡಿಕ್ಕಿಯಾಗಿದೆ. ಇದರ ಪರಿಣಾಮ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಒಳಗಡೆ ಲಾಕ್‌ ಆಗಿದ್ದ ಕಾರಣ ಗಾಯಾಳು ಚಾಲಕ ಹೊರಬರಲು ಸಾಧ್ಯವಾಗಿಲ್ಲ. ತಕ್ಷಣವೇ ಸ್ಥಳೀಯರು ಜಮಾಯಿಸಿದ್ದು ಕಾರ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಓಮ್ನಿ ಡೋರ್‌ […]

ಕಿನ್ನಿಮೂಲ್ಕಿಯಲ್ಲಿ ನೇತ್ರಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಭಾರಂಭ.

ಉಡುಪಿ: ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಸೈನ್ಸಸ್ ಕಾಲೇಜು, ನೇತ್ರ ಜ್ಯೋತಿ ಫಿಸಿಯೋಥೆರಪಿ ಕಾಲೇಜು, ನೇತ್ರ ಜ್ಯೋತಿ ಕಾಲೇಜು ವತಿಯಿಂದ 76ಬಡಗಬೆಟ್ಟು ಕಿನ್ನಿಮೂಲ್ಕಿಯಲ್ಲಿ ನೇತ್ರ ಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು. ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನೇತ್ರಜ್ಯೋತಿ ಆಸ್ಪತ್ರೆಯಿಂದ ಸಮಾಜಕ್ಕೆ ಒಳ್ಳೆಯ ಸೇವಾಕಾರ್ಯ ಪ್ರಾಪ್ತಿ ಆಗಲಿ. ದೇವರು ಕರುಣಿಸಿದ ಕಣ್ಣು ಜಗತ್ತಿಗೆ ದಿವ್ಯ ದೃಷ್ಟಿ ನೀಡುವಂತದ್ದು. […]

ಉಡುಪಿ:ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

ಉಡುಪಿ: ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಸಾಮಾನ್ಯ ದರ 2300 ರೂ. ಹಾಗೂ ಭತ್ತ ಗ್ರೇಡ್ ಎ ವಿಧಕ್ಕೆ ದರ 2320 ರೂ. ರಂತೆ ನಿಗದಿಪಡಿಸಲಾಗಿದೆ. ಜಿಲ್ಲೆಯ ರೈತರಿಂದ ಭತ್ತವನ್ನು ನಿಯಮಾನುಸಾರ ಖರೀದಿಸಲು ಮತ್ತು ರೈತರಿಗೆ ನೊಂದಣಿ ಕೇಂದ್ರಗಳನ್ನು ತೆರೆದು ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಭತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಸದರಿ ಖರೀದಿ ಏಜೆನ್ಸಿಯವರು ರೈತರಿಂದ ಭತ್ತದ ನೊಂದಣಿ ಪ್ರಕ್ರಿಯೆಯನ್ನು […]