600 ಕೋಟಿ ರೂ. ಭ್ರಷ್ಟಾಚಾರ ಆರೋಪ: ಲಕ್ಷಿ ಹೆಬ್ಬಾಳ್ಕರ್ ವಿರುದ್ದ ತನಿಖೆ ನಡೆಸುವಂತೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸರಕಾರಕ್ಕೆ ದೂರು

ಉಡುಪಿ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅಕ್ರಮದ ಆರೋಪ ಹೊತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತನಿಖೆ ನಡೆಸುವಂತೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾವು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಬಡ ಮಕ್ಕಳ ಅಪೌಷ್ಟಿಕತೆಯ ನಿವಾರಣೆ ಸದುದ್ದೇಶದಿಂದ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಿ ಹಲವಾರು ವರ್ಷಗಳಿಂದ ಜಾರಿ ಮಾಡಿಕೊಂಡು ಬರಲಾಗುತ್ತಿದೆ. ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನ ಟೆಂಡರ್ ನಲ್ಲಿ ಭ್ರಷ್ಟಾಚಾರ ಎಸೆಗಿರುವ ಆರೋಪ ಕೇಳಿ ಬಂದಿದೆ. […]

ಕುಂದಾಪುರ: ಮದ್ಯ ಮಾರಾಟ ನಿಷೇಧ

ಉಡುಪಿ: ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ಕಾರ್ಯಕ್ರಮವು ನವೆಂಬರ್ 26 ರಿಂದ 28 ರ ವರೆಗೆ ನಡೆಯಲಿರುವ ಹಿನ್ನೆಲೆ, ರಥೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಠಿಯಿಂದ, ಕುಂದಾಪುರ ತಾಲೂಕಿನ ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟವನ್ನು ನವೆಂಬರ್ 27 ರ ಬೆಳಗ್ಗೆ 6 ರಿಂದ ನವೆಂಬರ್ 28 ರ […]

ಡಿಸೆಂಬರ್ 10 ಮಂಗಳೂರಿನಲ್ಲಿ ಅಂತರ್‌ ಧರ್ಮೀಯ ಸೌಹಾರ್ದ ಕ್ರೀಡಾಕೂಟ

ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಆಂಜೆಲೊರ್‌ ಘಟಕ ಮತ್ತು ಅಂತರ್‌ಧರ್ಮೀಯ ಸಂವಾದ ಆಯೋಗ, ಆಂಜೆಲೊರ್‌ ಚರ್ಚ್ ವತಿಯಿಂದ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 8.45 ಕ್ಕೆ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಸರ್ವ ಧರ್ಮದವರು ಕಟ್ಟಿ ಬೆಳೆಸಿದ ಮಂಗಳೂರು ಸೌಹಾರ್ದತೆಯಿಂದ ಕೂಡಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಲಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸಲು ಈ ಕ್ರೀಡಾ ಪಂದ್ಯಾವಳಿಯನ್ನು ಕಥೊಲಿಕ್ ಸಭಾ(ರಿ) ಆಂಜೆಲೊರ್‌ ಘಟಕದ […]

ತೆಂಕಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಉಡುಪಿ: ತೆಂಕಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಸಮಾಜ, ಯುವಕ ಹಾಗೂಮಹಿಳಾ ಮಂಡಳಿಯ ಆಶ್ರಯದಲ್ಲಿ, ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಗುರುವಾರ ಭಜನಾ ಕಾರ್ಯಕ್ರಮ ಹಾಗೂ ಶುಕ್ರವಾರ ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪ ದರ್ಶನ ನೆರವೇರಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀರಾಮ ದರ್ಶನ, ವೀರ ವಿಠಲ, ಶ್ರೀ ಕೃಷ್ಣ, ಗಜವದನ, ಈಶ್ವರ, ಮುಖ್ಯಪ್ರಾಣ ಹಾಗೂ ರಂಗೋಲಿಯಲ್ಲಿ ವಿವಿಧ ಬಗೆಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ, […]

ಸಕ್ಷಮ ಪ್ರಾಧಿಕಾರದಲ್ಲಿ ಜನನ-ಮರಣ ನೋಂದಣಿ ಕಡ್ಡಾಯ: ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್

ಉಡುಪಿ: ಪ್ರತಿಯೊಬ್ಬರೂ ಸಕ್ಷಮ ಪ್ರಾಧಿಕಾರದಲ್ಲಿ ಜನನ –ಮರಣ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಗುರುವಾರದಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ-ಮರಣ ಪ್ರಮಾಣ ಪತ್ರವು ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, 20 ದಿನಗಳ ಒಳಗಾಗಿ ನಿಶುಲ್ಕವಾಗಿ ನೋಂದಾಯಿಸಬಹುದಾಗಿದೆ. 21 ದಿನದ ನಂತರ 30 ದಿನದ […]