ಮಂಗಳೂರು: ಪಿಲಿಕುಳ ಕಂಬಳೋತ್ಸವ ಮುಂದೂಡಿಕೆ.
ಮಂಗಳೂರು: ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಇದೇ 17ಮತ್ತು 18ರಂದು ಆಯೋಜಿಸಲು ಉದ್ದೇಶಿಸಿದ್ದ ಪಿಲಿಕುಳ ಕಂಬಳೋತ್ಸವವನ್ನು ಗ್ರಾಮ ಪಂಚಾಯಿತಿ ಉಪಚುನಾವಣೆಯ ಕಾರಣಕ್ಕಾಗಿ ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯ ಸ್ಥಾನಗಳ ಭರ್ತಿಗೆ ಉಪ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗವು ಘೋಷಿಸಿದೆ. ಈ ಉಪ ಚುನಾವಣಣೆಯ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇದೇ 16ರಿಂದ 26ರವರೆಗೆ ಜಾರಿಯಲ್ಲಿರುತ್ತದೆ. ಮೂಡುಶೆಡ್ಡೆ ಗ್ರಾಮ ಪಂಚಾಯಿತಿ […]
ಉಡುಪಿ:ಗ್ರಾಮ ಪಂಚಾಯತ್ ಉಪಚುನಾವಣೆ : ಸಂತೆ, ಜಾತ್ರೆ ನಿಷೇದ
ಉಡುಪಿ: ಜಿಲ್ಲೆಯ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ 13-ಕೊಡಿಬೆಟ್ಟು, ಕುಂದಾಪುರ ತಾಲೂಕಿನ 35-ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ ಹಾಗೂ ಕಾರ್ಕಳ ತಾಲೂಕಿನ ಈದು, ನಲ್ಲೂರು, ನಿಟ್ಟೆ, ನೀರೆ, 5-ಕೆರ್ವಾಶೆ ಹಾಗೂ ಕಡ್ತಲ ಗ್ರಾಮ ಪಂಚಾಯತಿಗಳ ಉಪಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 23 ರಂದು ಮತದಾನ ನಡೆಯಲಿದೆ. ಮತದಾನದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ಮತ ಹಾಕಲು ಅನುಕೂಲ ವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 36 […]
ಶೀರೂರು ಮಠದ ಬಾಳೆ ಮುಹೂರ್ತ: ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ
ಶೀರೂರು: ಶೀರೂರು ಮೂಲಮಠದಲ್ಲಿ ಡಿ.14 ಮತ್ತು 15 ರಂದು ನಡೆಯಲಿರುವ ಶ್ರೀರಾಮ ತಾರಕಮಹಾಮಂಡಲ ಪೂಜೆ, ರಾಮತಾರಕ ಯಾಗ, ಮನ್ಯುಸೂಕ್ತ ಯಾಗ, ವಾಯುಸ್ತುತಿ ಯಾಗ, ದತ್ತಾತ್ರೇಯ ಯಾಗ ಹಾಗೂ ಡಿ. 6 ರಂದು ನಡೆಲಿರುವ ಶೀರೂರು ಮಠದ ಬಾಳೆ ಮುಹೂರ್ತದ ಆಹ್ವಾನ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಪ್ರೀತಿಯಿಂದ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯದಾರರಾದ ಶ್ರೀಶ ಭಟ್, ಸಮಿತಿಯ ಕಾರ್ಯಾಧ್ಯಕ್ಷರೂ ಉಡುಪಿಯ ಶಾಸಕರೂ ಆದ ಯಶ್ ಪಾಲ್ […]
ಗೋಳಿಕಟ್ಟೆ, ಹಾವಂಜೆಯಲ್ಲಿ ಪರಿವರ್ತಿತ ಜಾಗಗಳು ಮಾರಾಟಕ್ಕಿದೆ
ಉಡುಪಿ : ಗೋಳಿಕಟ್ಟೆ ಹಾವಂಜೆಯ ಮುಖ್ಯ ರಸ್ತೆಯಿಂದ 300 ಮೀಟರ್ ದೂರದಲ್ಲಿ ಪರಿವರ್ತಿತ 3 ಸೆಂಟ್ಸ್ ಮತ್ತು ನಾಲ್ಕು ಸೆಂಟ್ಸ್ ಜಾಗ ಮಾರಾಟಕ್ಕಿದೆ. ಒಂದು ಸೆಂಟ್ಸ್ ದರ 2.50 ಲಕ್ಷ, 40 ಅಡಿ ರಸ್ತೆ, ವಿದ್ಯುತ್ ಸೌಲಭ್ಯ ಹಾಗೂ ನೀರಿನ ವ್ಯವಸ್ಥೆ ಒದಗಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8197035017
ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ: ಪ್ರವಚನ ಸಂಪನ್ನ
ಉಡುಪಿ: ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು. 7 ದಿನಗಳ ಪರ್ಯಂತ ಭಾಗವತ ಸಪ್ತಾಹ (ದಶಮ ಸ್ಕಂದ) ಪ್ರವಚನವನ್ನು ನಡೆಸಿ ಕೊಟ್ಟ ಉಡುಪಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ಶ್ರೀಪಾದರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವಾಸ್ತು ತಜ್ಞ ಶ್ರೀ ಸುಬ್ರಮಣ್ಯ ಭಟ್ ಗುಂಡಿಬೈಲ್ ಕಾರ್ತೀಕ ಮಾಸ ಜ್ಞಾನ ದೀಪೋತ್ಸವದ ಮಹತ್ವವನ್ನು ತಿಳಿಸಿದರು. ಉಡುಪಿ ಪುತ್ತಿಗೆ […]