ಕಾರ್ಕಳ: ಪತಿಯ ಅಗಲುವಿಕೆಯಿಂದ ಮನನೊಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆತ್ಮಹತ್ಯೆ

ಉಡುಪಿ: ಪತಿಯ ಅಗಲುವಿಕೆಯಿಂದ ಮನನೊಂದ ಅಂಗನವಾಡಿ ಟೀಚರ್ ಒಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರು ಅಂಗನವಾಡಿ ಕಾರ್ಯಕರ್ತೆ ಸೌಮ್ಯ (40) ಆತ್ಮಹತ್ಯೆ ಮಾಡಿಕೊಂಡವರು. ಇವರು ಇಂದು ಬೆಳಿಗ್ಗೆ ಮಿಯ್ಯಾರಿನ ತನ್ನ ಮನೆಯ ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಮಿಯ್ಯಾರು ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು.ಸೌಮ್ಯ ಅವರ ಪತಿ ಸಂತೋಷ್‌ ಪೂಜಾರಿ ಅವರು ಎರಡು ತಿಂಗಳ ಹಿಂದೆ […]

ಉಡುಪಿ:ಮಕ್ಕಳ ದಿನಾಚರಣೆಯ ಪ್ರಯುಕ್ತ ಕಿಡ್ಜೀ ಮಣಿಪಾಲ ಪ್ರಿಸ್ಕೂಲ್ ವಿದ್ಯಾರ್ಥಿಗಳಿಂದ ರ್ಯಾಲಿ ಕಾರ್ಯಕ್ರಮ

ಮಣಿಪಾಲ:ನಮಗೆ ಪರ್ಯಾವರಣದ ಮಹತ್ವವನ್ನು ಅರಿಸುವುದಕ್ಕಾಗಿ, ನ.14 ಮಕ್ಕಳ ದಿನಾಚರಣೆಯ ಪ್ರಯುಕ್ತ ಕಿಡ್ಜೀ ಮಣಿಪಾಲ ಪ್ರೀಸ್ಕೂಲ್ ವಿದ್ಯಾರ್ಥಿಗಳು “ಮರವನ್ನು ಉಳಿಸಿ, ಪ್ಲಾನೆಟ್‌ನ್ನು ಉಳಿಸಿ” ಎಂಬ ಸಂದೇಶವನ್ನು ಹರಡುವ ರ್ಯಾಲಿ (rallies)ಯಲ್ಲಿ ಪಾಲ್ಗೊಂಡಿದ್ದಾರೆ. ಈ ರ್ಯಾಲಿ (rallies) ನಲ್ಲಿ, ಮಣಿಪಾಲದ ಟೈಗರ್ ಸರ್ಕಲ್ ಇಂದ ಮಣಿಪಾಲ ಪೊಲೀಸ್ ಸ್ಟೇಷನ್ ವರೆಗೆ ಮಕ್ಕಳು ನಡೆದಾಡಿದರು. ಈ ಕಾರ್ಯಕ್ರಮವು ಮರ ಕಡಿಯುವ ನಮ್ಮ ಆಯ್ಕೆಗಳ ಕುರಿತು ಚಿಂತನೆಗೆ ಪ್ರೇರೇಪಿಸುತ್ತದೆ, ಹಾಗು ಪರಿಸರ ಸಂರಕ್ಷಣೆಯ ಅವಶ್ಯಕತೆಯನ್ನು ತಿಳಿಸುತ್ತದೆ.

ಸಂತೆಕಟ್ಟೆ ಮಾರುಕಟ್ಟೆ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ, ಪರಿಶೀಲನೆ

ಉಡುಪಿ: ಸಂತೆಕಟ್ಟೆ ಮಾರುಕಟ್ಟೆ ಪ್ರದೇಶಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾನುವಾರ ಸಂತೆಯ ದಿನ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಹಿನ್ನಲೆಯಲ್ಲಿ ರಸ್ತೆಯ ಇಕ್ಕೆಲಗಳನ್ನು ಸಮತಟ್ಟು ಮಾಡಿ ಪಾರ್ಕಿಂಗ್ ವ್ಯವಸ್ಥೆ, ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದಲ್ಲಿ ಇಂಟರ್ ಲಾಕ್ ಅಳವಡಿಕೆ ಮಾಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು, ಒಣ ಮೀನು ಮಾರಾಟಗಾರರಿಗೆ ಸೂಕ್ತ ಶೆಡ್ ನಿರ್ಮಾಣ, ಅಪಾಯಕಾರಿ ಮರಗಳ ತೆರವು, ಮಾರುಕಟ್ಟೆ ಪರಿಸರದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ಶೀಘ್ರದಲ್ಲಿ ಪ್ರಾರಂಭಗೊಳ್ಳಲಿರುವ ಸಂತೆ ಮಾರುಕಟ್ಟೆಯಿಂದ […]

ಉಡುಪಿ: ರಾಜ್ಯದ ಮೂವರು ಸಾಧಕರಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024 ಪ್ರದಾನ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024 ಕಾರ್ಯಕ್ರಮ ನವೆಂಬರ್ 14 ಗುರುವಾರ ಉಡುಪಿಯ ಕಿದಿಯೂರು ಹೋಟೆಲ್’ ನ ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ನಡೆಯಿತು.​ರಾಜ್ಯದ ಮೂವರು ಹಿರಿಯ ಸಾಹಿತಿಗಳಾದ​ ಶಿವಮೊಗ್ಗದ ಅಂಬ್ರಯ್ಯ ಮಠ ( ಇತಿಹಾಸ ಸಂಶೋಧನೆ ), ಚಿಕ್ಕಮಂಗಳೂರಿನ ಡಾ. ಎಚ್. ಎಸ್. ಸತ್ಯನಾರಾಯಣ.( ವಿಮಶೆ೯), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ […]

ಉಡುಪಿ:ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ : ಅರ್ಜಿ ಆಹ್ವಾನ

ಉಡುಪಿ: ಹಿಂದುಳಿದ ವರ್ಗಗಳ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ವ್ಯಾಸಾಂಗ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3 ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾವೆಬ್‌ಸೈಟ್ https://bcwd.karnataka.gov.in/ ಸಹಾಯವಾಣಿ ಸಂಖ್ಯೆ: 8050770004ಅನ್ನು […]