ಕಾರ್ಕಳ: ಸ್ವಚ್ಛಗೊಳಿಸುತ್ತಿದ್ದ ವೇಳೆ ಬಾವಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಮನೆಯ ‌ಬಾವಿಯ ಆವರಣ ಸ್ವಚ್ಛಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ‌ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮೃತರನ್ನು ಬೆಳುವಾಯಿ ನಿವಾಸಿ ರಾಜು‌ ಶೆಟ್ಟಿ‌(65) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ‌ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ಹರಿಪ್ರಸಾದ್‌ ಶೆಟ್ಟಿಗಾರ್, ಗಣೇಶ್‌ ಆಚಾರ್, ಸಂಜಯ್,  ಭೀಮಪ್ಪ‌, ಬಸವರಾಜ್‌ ಅವರ ತಂಡ‌ವು ಕಾರ್ಯಾಚರಣೆ ನಡೆಸಿ‌ ಮೃತದೇಹವನ್ನು ಮೇಲೆತ್ತಿದರು.

ಬ್ರಹ್ಮಾವರ: ಮುಂಬೈಯಿಂದ ತರಿಸಿಕೊಂಡಿದ್ದ ನಿಷೇಧಿತ ಗಾಂಜಾ ಸಾಗಾಟಕ್ಕೆ ಯತ್ನ; ಮೂವರ ಬಂಧನ

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆಜಿ ರೋಡ್‌ ಕ್ರಾಸ್‌ ಬಳಿ ನಡೆದಿದೆ. ಉಪ್ಪೂರು ನಿವಾಸಿಗಳಾದ ಸತ್ಯರಾಜ್‌ (32),ಕೃಷ್ಣ (43) ಹಾಗೂ ಶಕಿಲೇಶ್‌(25) ಬಂಧಿತ ಆರೋಪಿಗಳು. ಇವರು ಕೆಜಿ ರೋಡ್ ಕ್ರಾಸ್ ಬಳಿ ಮುಂಬೈಯಿಂದ ತರಿಸಿಕೊಂಡಿದ್ದ ಗಾಂಜಾವನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8,11,040 ಮೌಲ್ಯದ 10 ಕೆ.ಜಿ 138 ಗ್ರಾಂ […]

ಬೈಂದೂರು: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ; ಆರೋಪಿ ಪರಾರಿ

ಉಡುಪಿ: ಮೀನು ಸಾಗಿಸುವ ಇನ್ಸುಲೇಟ‌ರ್ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಘಟನೆ ಶಿರೂರು ಕರಿಕಟ್ಟೆ ಬಳಿ ನಡೆದಿದೆ. ಇನ್ಸುಲೇಟರ್ ವಾಹನ ಪಲ್ಟಿಯಾದ ಪರಿಣಾಮ ಈ ಘಟನೆ ಬೆಳಕಿಗೆ ಬಂದಿದೆ. ಮೀನು ಬಾಕ್ಸ್‌ಗಳ ಜೊತೆಗೆ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿ ಹೊತ್ತು ಮಿನಿ ಇನ್ಸುಲೇಟರ್ ವಾಹನದೊಳಗೆ ಮೀನು ತುಂಬಿರುವ ಟ್ರೇಗಳನ್ನು ಇರಿಸಿಕೊಂಡು ಮದ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್‌ ಹತ್ತಿರ ಪಲ್ಟಿಯಾಗಿದೆ. ಕೂಡಲೇ ಚಾಲಕ […]

ಮೂಡುಬಿದಿರೆ: ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ-ಆಳ್ವಾಸ್‌ಗೆ 19ನೇ ಬಾರಿಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ತಂಡವನ್ನು 35-20, 35-5 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು […]

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ‘ಆವಿಷ್ಕಾರ ಬಿಸಿನೆಸ್ ಡೇ’

ಕುಂದಾಪುರ ನ.14:ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮಲ್ಲಿ ನಕರಾತ್ಮಕ ಯೋಚನೆಗಳು ಬರಬಾರದು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಇವತ್ತು ಬಹುತೇಕ ಅವಘಡಗಳಿಗೆ ಮೊಬೈಲ್ ಬಳಕೆಯೇ ನೆಪವಾಗುತ್ತಿದೆ. ಆತ್ಮಹತ್ಯೆ ಯಂತಹ ನಕರಾತ್ಮಕ ಯೋಚನೆಗಳು ಮನಸಿನಲ್ಲಿ ಮೂಡಬಾರದು ಎಂದು ಪ್ರಸಿದ್ಧ ಮುಳುಗುತಜ್ಞ ಈಶ್ವರ ಮಲ್ಪೆ ಹೇಳಿದರು. ನ.12ರಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ ಬ್ಯುಸಿನೆಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಸೇವಕ ರವಿ ಕಟಪಾಡಿ, ಬದುಕು ನಾವು ಭಾವಿಸಿದಂತೆ ಇರುವುದಿಲ್ಲ ನಾವು ಏನೆಂಬುದನ್ನು […]