ಬ್ರಹ್ಮಾವರ: ಮಹಿಳೆ ನಾಪತ್ತೆ
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ ಹಾಳೆಯಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಇಂತಿ ನಿಮ್ಮ ಚಿನ್ನು ಎಂದು ಬರೆದಿಟ್ಟ ಚೀಟಿ ಸಿಕ್ಕಿದೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಲಂಗಾಣದಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳು ಮೃತ

ಹೊಸದಿಲ್ಲಿ: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಅಪಘಾತದ ಕಾರಣವನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಅಪಘಾತ ಸಂಭವಿಸಿದಾಗ ವಿಮಾನವು ವಾಡಿಕೆಯ ತರಬೇತಿಗಾಗಿ ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (ಎಎಫ್‌ಎ) ಹೊರಟಿತ್ತು ಎಂದು ವಾಯುಪಡೆ ತಿಳಿಸಿದೆ. ವಿಮಾನ ಪತನಗೊಂಡಾಗ ಒಬ್ಬ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ವಿಮಾನದೊಳಗಿದ್ದರು ಮತ್ತು ಇಬ್ಬರೂ ಸಾವನ್ನಪ್ಪಿದ್ದಾರೆ. Pilatus PC 7 Mk II ವಿಮಾನವು ಏಕ-ಎಂಜಿನ್ ವಿಮಾನವಾಗಿದ್ದು, IAF ಪೈಲಟ್‌ಗಳು […]
ಮಿಜೋರಾಂ ಚುನಾವಣಾ ಫಲಿತಾಂಶ: ಆರಂಭಿಕ ಎಣಿಕೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಮುನ್ನಡೆ

ಐಜ್ವಾಲ್: ನವೆಂಬರ್ 7 ರಂದು ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತಎಣಿಕೆಯ ಫಲಿತಾಂಶಗಳಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 27 ಸೀಟುಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಮಿಜೋ ನ್ಯಾಷನಲ್ ಫ್ರಂಟ್ (MNF) 10 ಸೀಟುಗಳಲ್ಲಿದ್ದರೆ ಬಿಜೆಪಿ 2 ಸೀಟು ಪಡೆದಿದೆ. 2023 ರ ಮಿಜೋರಾಂ ಚುನಾವಣೆಯು ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಸದ್ಯದ ಸ್ಥಿತಿಯಲ್ಲಿ ಹಿನ್ನಡೆಯುತ್ತಿದೆ.
ಹಿರಿಯಡ್ಕ: ವ್ಯಕ್ತಿ ನಾಪತ್ತೆ

ಹಿರಿಯಡ್ಕ: ಅಂಜಾರು ಗ್ರಾಮದ ಆಳುಗ್ಗೇಲು ಮನೆ ನಿವಾಸಿ ಸಂದೇಶ್ ರಾವ್ (45) ಎಂಬ ವ್ಯಕ್ತಿಯು ನವೆಂಬರ್ 29 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಉಪ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ
ಜ.5 ಮತ್ತು 6 ರಂದು KUPMA ವತಿಯಿಂದ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ

ಮಂಗಳೂರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (KUPMA) ವತಿಯಿಂದ ರಾಜ್ಯಮಟ್ಟದ ‘ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2024’ವು ಜನವರಿ 05 ಶುಕ್ರವಾರ ಮತ್ತು 06 ಶನಿವಾರ 2024 ರಂದು ಆಳ್ವಾಸ್ ಕಾಲೇಜು, ವಿದ್ಯಾಗಿರಿ ಮೂಡುಬಿದಿರೆ ಇಲ್ಲಿ ನಡೆಯಲಿದೆ. ಜ. 05 ಶುಕ್ರವಾರ ಬೆಳಿಗ್ಗೆ 11.30 ರಿಂದ 12.30 ರವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 02.00 ರ ವರೆಗೆ ಊಟ ಮತ್ತು ನೆಟ್‌ವರ್ಕಿಂಗ್, ಮಧ್ಯಾಹ್ನ 02.00 ರಿಂದ 04.00 ರವರೆಗೆ ಉದ್ಘಾಟನಾ […]