ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಇವರಿಗೆ ಗೌರವಾಭಿನಂದನೆ

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು, ಯಕ್ಷಗಾನ ಕಲಾರಂಗ(ರಿ) ಉಡುಪಿ, ಯಕ್ಷಶಿಕ್ಷಣ ಟ್ರಸ್ಟ್(ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಕಿಶೋರ ಯಕ್ಷಗಾನ ಸಂಭ್ರಮ- 2023 ದ ಕಾರ್ಯಕ್ರಮದ ಸಂದರ್ಭದಲ್ಲಿ, ಯಕ್ಷಶಿಕ್ಷಣ ಟ್ರಸ್ಟ್ ನ ಗೌರವಾಧ್ಯಕ್ಷ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶಿಕ್ಷಣ ಕ್ಷೇತ್ರಕ್ಕೆ ಉದಾರ ದಾನ ನೀಡಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಇವರನ್ನು ಗೌರವಿಸಿ ಅಭಿನಂದಿಸಿದರು. ಸಮಾರಂಭದಲ್ಲಿ ಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ […]
ಕಲ್ಯಾಣಪುರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ

ಕಲ್ಯಾಣಪುರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ 132 ನೇ ವರ್ಷದ ವಾರ್ಷಿಕ ದೀಪೋತ್ಸವವು ಗುರುವಾರದಂದು ಸಂಪನ್ನಗೊಂಡಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ನಾಗರಾಜ್ ಅಡಿಗ ನೆರವೇರಿಸಿದರು. ದೇವಳದ ಮೊಕ್ತೇಸರ ಕೆ. ವಿ. ರಾವ್ ಅವರ ಮಾರ್ಗದರ್ಶನದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು. ಬಳಿಕ ನಾಗರಾಜ್ ಶೇಟ್ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು. ನೂರಾರು ಭಕ್ತರು ದೇವರ ದರ್ಶನ ಪಡೆದರು.
ಡಿ.13 ರಂದು ಬನ್ನಾಡಿ ಬ್ರಹ್ಮ ಬೈದರ್ಕಳ ಕಂಬಳ

ಕುಂದಾಪುರ: ಡಿ.13 ರಂದು ಬನ್ನಾಡಿ ಬ್ರಹ್ಮ ಬೈದರ್ಕಳ ಕಂಬಳವು ಜರಗಲಿದ್ದು, ಬೆಳಿಗ್ಗೆ 10.20 ಕ್ಕೆ ಕಂಬಳ ಮುಹೂರ್ತ ನಡೆಯಲಿದ್ದು, ಮಧ್ಯಾಹ್ನ 2 ರಿಂದ 6 ರವರೆಗೆ ಕೋಣಗಳ ಓಟ ನಡೆಯಲಿದೆ ಎಂದು ಕಂಬಳ ಗದ್ದೆ ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಔದ್ಯೋಗಿಕ ಜೀವನದಲ್ಲಿ ಹೊಂದಾಣಿಕೆಗಾಗಿ ಮೃದು ಕೌಶಲ್ಯ ಅತ್ಯವಶ್ಯಕ: ಡಾ. ಜಿ. ರಾಬರ್ಟ್ ಕ್ಲೈವ್

ಉಡುಪಿ: ಮೃದು ಕೌಶಲ್ಯ(ಸಾಫ್ಟ್ ಸ್ಕಿಲ್) ಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳುವುದರಿಂದ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಕೆಲಸದ ಒತ್ತಡ ಮತ್ತು ಪರಿಸರದಲ್ಲಿ ಹೊಂದಿಕೊಂಡು ಹೋಗಲು ಮೃದು ಕೌಶಲ್ಯಗಳು ಸಹಾಯ ಮಾಡುತ್ತದೆ ಎಂದು ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ಗ್ರಾಮೀಣಾಭಿವೃದ್ಧಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಿ. ರಾಬರ್ಟ್ ಕ್ಲೈವ್ ಹೇಳಿದರು. ನಗರದ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಗ್ರಾಮೀಣ ಅಭಿವೃದ್ಧಿ ವಿಭಾಗ ಮತ್ತು […]
ಇಂದು (ಡಿ.9) ಪೇಜಾವರ ಶ್ರೀ ಷಷ್ಟ್ಯಬ್ದ ಅಭಿವಂದನ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಪೇಜಾವರ ಗುರುವಂದನ ಸಮಿತಿ ಉಡುಪಿ ಇದರ ವತಿಯಿಂದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವ ಸಿದ್ದತಾ ಸಭೆಯು ಡಿ.9 ರಂದು ಸಂಜೆ ರಥಬೀದಿಯ ಪೇಜಾವರ ಮಠದ ಆವರಣದಲ್ಲಿರುವ ರಾಮ ವಿಠಲ ಸಭಾ ಭವನದಲ್ಲಿ ಜರುಗಲಿದ್ದು, ಅಭಿಮಾನಿಗಳು ಭಾಗವಹಿಸುವಂತೆ ಗುರುವಂದನ ಸಮಿತಿ ಪ್ರಕಟಣೆ ತಿಳಿಸಿದೆ.