ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟ: ಕೆ.ಬಿ.ಕೆ ಕುರ್ಕಾಲು ತಂಡಕ್ಕೆ 31 ಪ್ರಶಸ್ತಿ

ಹಿರಿಯಡ್ಕ: 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ್ದ ಕೆ.ಬಿ.ಕೆ ಕುರ್ಕಾಲು ತಂಡವು 12 ಪ್ರಥಮ, 11 ದ್ವಿತೀಯ, 8 ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎ ಪೂಜಾರಿ, ಮಾಜಿ ಅಧ್ಯಕ್ಷ ಭುವನೇಶ್ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಾದ ಶರಣ್ಯ, ರೈನಾರ್, ಅಮಯ್, ಅವಿಷ್, ಆದಿತ್ಯ, ಪ್ರೀತಮ್, ನಿಹಾಲ್, ಮನೀಶ್, ಯತಿನ್, ಶ್ರೀವತ್ಸ, ಸೃಜನ್, ಮೋಕ್ಷ,ತನಿಶ್, ನಿಕೊಲ್, ಆತ್ಮೀಕ್, ಐಫಾಜ್, ತಾಹಿರ್, ಫಿಧಾ, ಫಾಹಿಜ್, ಮಣಿಕಂಠ ಹಾಗೂ ಹರ್ಷ ಮನೋಹರ […]

ಕುಂದಾಪುರ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: 2023 ರ ಕಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇನ್ವಿತಾ ಖಾರ್ವಿ ಚಿತ್ರ ಕಲೆಯಲ್ಲಿ, ಧಾರಿಣಿ ಕೆ. ಎಸ್ ಶಾಸ್ತ್ರೀಯ ಸಂಗೀತದಲ್ಲಿ, ಸೃಜನ್ ಎಸ್ ದೇವಾಡಿಗ ಜಾನಪದ ಗೀತೆ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕುಂದಾಪುರ: ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಲೋತ್ಸವ ಸ್ಪರ್ಧೆಗೆ ಹೆಮ್ಮಾಡಿ ಜನತಾ ಕಾಲೇಜಿನ ಕೇದಾರ ಮರವಂತೆ ಆಯ್ಕೆ.

ಕುಂದಾಪುರ: ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಮಾಧ್ಯಮಿಕ ಶಿಕ್ಷಣ ವಿಭಾಗವು ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆಸುವ ರಾಷ್ಟ್ರ ಮಟ್ಟದ ಕಲಾ ಉತ್ಸವದಲ್ಲಿ ಭಾಗವಹಿಸಲು ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೇದಾರ ಮರವಂತೆ ಆಯ್ಕೆಯಾಗಿದ್ದು, ಶಾಸ್ತ್ರೀಯ ಗಾಯನ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಕೇದಾರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಗ್ವಾಲಿಯರ್ – ಪಾಟಿಯಾಲ – ಕಿರಾಣಾ ಘರಾಣೆಯ ಗಾಯಕ, ಗೋಪಾಡಿಯಲ್ಲಿ ನೆಲಸಿರುವ […]

ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಇದರ 10 ನೇ ಶಾಖೆ ಉದ್ಘಾಟನೆ; ಸಾಧಕರಿಗೆ ಸನ್ಮಾನ

ಉಡುಪಿ: ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ನೂತನ ವಾಣಿಜ್ಯ ಸಂಕೀರ್ಣ “ಸಹಕಾರ ಸಿಂಧು” ಹಾಗೂ ಹಂಪನಕಟ್ಟೆ-ಕೆಮ್ಮಣ್ಣಿನಲ್ಲಿ 10ನೇ ಶಾಖೆಯ ಉದ್ಘಾಟನಾ ಸಮಾರಂಭವು ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸ್ಥಳೀಯ ಮಹನಿಯರನ್ನು ಗುರುತಿಸಿ ಗೌರವಿಸಿ, ಅಭಿನಂದಿಸಲಾಯಿತು. ಬಡ ರೋಗಿಗಳ ಪಾಲಿಗೆ ದೇವರಾದ “ಇಪ್ಪತ್ತು ರೂಪಾಯಿ ಡಾಕ್ಟರ್” ಎಂದೇ ಪ್ರಸಿದ್ಧಿ ಪಡೆದ ಡಾ. ಅಶ್ವಿನಿ ಕುಮಾರ್, ಸರ್ಪ ಸುತ್ತು ಕಾಯಿಲೆಗೆ ಔಷಧಿಯನ್ನು ನೀಡುತ್ತಾ ಸಾವಿರಾರು ಮಂದಿಯನ್ನು ಗುಣ ಪಡಿಸಿದ ವನಜಾ ಆಚಾರ್ಯ, […]

ಶಿರಸಿ ಹೆದ್ದಾರಿಯಲ್ಲಿ ಬಸ್ ಮತ್ತು ಕಾರು ಢಿಕ್ಕಿ: ಮದುವೆ ಸಂಭ್ರಮದಲ್ಲಿದ್ದ ಒಂದೇ ಮನೆಯ ಐವರು ಸದಸ್ಯರ ದಾರುಣ ಸಾವು

ಶಿರಸಿ: ಕುಮಟಾ ಶಿರಸಿ ಹೆದ್ದಾರಿಯ ಶಿರಸಿಯ ಬಂಡಲ ಬಳಿ ಶುಕ್ರವಾರ ಸರಕಾರಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಕಂಬಳದ ಐವರು ಸಾವನ್ನಪ್ಪಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಕಿನ್ನಿಕಂಬಳದ ಪಿ.ರಾಮಕೃಷ್ಣ ರಾವ್ (69), ಪತ್ನಿ ವಿದ್ಯಾಲಕ್ಷ್ಮೀ ರಾವ್ (64), ರಾಮಕೃಷ್ಣ ರಾವ್ ಅವರ ತಮ್ಮನ ಪತ್ನಿ ಪುಷ್ಪಾ ಎಂ.ರಾವ್ (57), ಅವರ ತಮ್ಮನ ಮಗ ಸುಹಾಸ್ (30), ಭಾವ ಅರವಿಂದಾಕ್ಷ (27) ಶಿರಸಿಯ ರಾಘವೇಂದ್ರ […]