ಹಿರಿಯಡಕ: ಅಕ್ರಮವಾಗಿ ಮರಳು ಸಾಗಾಟ- ಟಿಪ್ಪರ್ ವಶ

ಹೆಬ್ರಿ: ಹಿರಿಯಡಕ ಪೊಲೀಸ್ ಠಾಣಾ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪ ರ್ ವಾಹನದಲ್ಲಿ ಹಿರಿಯಡಕ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿಯಾದ ಘಟನೆ ನಡೆದಿದೆ. ಟಿಪ್ಪ ರ್ ವಾಹನವನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ರೂ. ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ವಾಹನ ಸಹಿತ ವಶಪಡಿಸಿಕೊಂಡು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಧ್ಯಕ್ಷ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಫಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಮತ್ತು ಶ್ರೀ ಮಠದ ಪಿ ಆರ್ ಓ ಆದ ಕಡೆಕಾರು ಶ್ರೀಶ ಭಟ್, ಶ್ರೀಗಳ ಆಪ್ತರಾದ ಕೆ.ಗಿರೀಶ್ ಉಪಾಧ್ಯಾಯ, ಮತ್ತಿತರು ಉಪಸ್ಥಿತರಿದ್ದರು.
ಮಾಹೆ: ವೆಲ್‌ಕಮ್‌ಗ್ರೂಪ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಎಡ್ಮಿನಿಸ್ಟ್ರೇಶನ್ ಇದರ ವಾರ್ಷಿಕೋತ್ಸವ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಪ್ರತಿಷ್ಠಿತ ಘಟಕವಾಗಿರುವ ದ ವೆಲ್‌ಕಮ್ ಗ್ರೂಪ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಎಡ್ಮಿನಿಸ್ಟ್ರೇಶನ್ ನ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 7 ರಂದು ಮಣಿಪಾಲ್ ಫಾರ್ಚೂನ್ ಇನ್ನ್ ವ್ಯಾಲಿವ್ಯೂನ ಸಭಾಂಗಣದಲ್ಲಿ ಜರಗಿತು. ‘ಸುಸ್ಥಿರ ಅಭಿವೃದ್ಧಿಯ ಗುರಿಯತ್ತ ಕೇಂದ್ರೀಕರಿಸಿರುವ ಭಾರತದ ಕಿರು ಅಡುಗೆಪದ್ಧತಿಗಳು’ ಎಂಬುದು ಕಾರ್ಯಕ್ರಮದ ಮುಖ್ಯ ಆಶಯವಾಗಿತ್ತು. ಈ ಆಶಯವು ಸುಸ್ಥಿರ ಅಭಿವೃದ್ಧಿಯ ಗುರಿ ಮತ್ತು ಬಿಕಾನೇರ್, ಇಂದೋರ್ ಹಾಗೂ ಭುವನೇಶ್ವರಗಳ ಹೆಚ್ಚಿನ ಪ್ರಸಿದ್ಧವಲ್ಲದ […]
ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಹಾಗೂ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಅಂಬಾಗಿಲು ವಲಯ ಉಡುಪಿ ಹಾಗೂ ಶ್ರೀ ಆದಿ ಶಕ್ತಿ ವೀರಭದ್ರ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಕಲ್ಯಾಣಪುರ ಸಂತೆಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಯಣ ಪೂಜೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ […]
ಕಾರ್ಕಳ- ಪಡುಬಿದ್ರಿ ಮಾರ್ಗದಲ್ಲಿ ಭೀಕರ ಅಪಘಾತ: ಓರ್ವ ಮೃತ್ಯು, ಹಲರಿಗೆ ಗಾಯ

ಕಾರ್ಕಳ: ನಿಟ್ಟೆ ಮಂಜರಪಲ್ಕೆ ಎಂಬಲ್ಲಿ ಖಾಸಗಿ ಬಸ್ ಹಾಗೂ ಜೀಪು ಡಿಕ್ಕಿ ಹೊಡೆದು ಭೀಕರ ಅಪಘಾತದಲ್ಲಿ ಹಲವು ಗಂಭೀರವಾಗಿ ಗಾಯಗೊಂಡು, ಓರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಕಾರ್ಕಳದಿಂದ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಜಯಪುರ ನಿವಾಸಿ 48 ವರ್ಷದ ಶಿವಪ್ಪ ಸ್ಥಳದಲ್ಲೇ ಮೃತಪಟ್ಟರೆ, 45 ವರ್ಷದ ಮಂಜು, 28 ವರ್ಷದ ಸುಜಯರವರ ಸ್ಥಿತಿ ಗಂಭೀರ ವಾಗಿದ್ದು […]