ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ

ಉಡುಪಿ: ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಇಂದು ಬೆಳಿಗ್ಗೆ ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀಗಳನ್ನು ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ, ಗುರುಕಾಣಿಕೆ ಸಮರ್ಪಣೆ ಮಾಡಲಾಯಿತು ಶ್ರೀಗಳು ಭಜನಾ ಮಹೋತ್ಸವದ ದೀಪ ಪ್ರಜ್ವಲಿಸಿ ಆಶೀರ್ವದಿಸಿದರು . ನೂತನ ವರ್ಷದ ಶ್ರೀ ವೀರ ವಿಠಲ ದೇವರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎನ್ ಮಂಜುನಾಥ ಪಿ ನಾಯಕ್ […]

ಬ್ಯಾಂಕ್ ಆಫ್ ಬರೋಡ ವತಿಯಿಂದ ಹಣ್ಣಿನ ಗಿಡ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ

ಮಂಗಳೂರು: ಹಸಿರು ಜಗತ್ತು ಹಾಗೂ ಪ್ರಕಾಶಮಾನ ಭವಿಷ್ಯ ಎಂಬ ಗುರಿಯೊಂದಿಗೆ ಏರುತ್ತಿರುವ ತಾಪಮಾನ ತಡೆಗಟ್ಟಲು, ಹಸಿರು ಪರಿಸರ ಸಂರಕ್ಷಣೆ ಮಾಡುವ ಕಾಳಜಿಯೊಂದಿಗೆ ಬ್ಯಾಂಕ್ ಆಫ್ ಬರೋಡ ಇವರ ವತಿಯಿಂದ ಹಣ್ಣಿನ ಗಿಡಗಳ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ ಮಂಗಳೂರು ಸುತ್ತಮುತ್ತ ಕಾಲೇಜ್, ಶಾಲಾ ಪರಿಸರದಲ್ಲಿ ನಡೆಯಿತು. ಬ್ಯಾಂಕ್ ಆಫ್ ಬರೋಡದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ವಲಯ ಮುಖ್ಯಸ್ಥ ರಮೇಶ್ ಕಾನಡೆ ಹಾಗೂ DGM ಅಶ್ವಿನಿ ಕುಮಾರ್ ಇವರು ಹಣ್ಣಿನ ಗಿಡಗಳನ್ನು ಹಸ್ತಾಂತರ ಮಾಡಿ, ಗಿಡ […]

ಟೆನ್ನಿಕೋಯಿಟ್ ಪಂದ್ಯಾಟ: ಶ್ರೀ ವೆಂಕಟರಮಣ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಕೊಡಗು ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಕೋಯಿಟ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂರ್ವಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟ: ಕೆ.ಬಿ.ಕೆ ಕುರ್ಕಾಲು ತಂಡಕ್ಕೆ 31 ಪ್ರಶಸ್ತಿ

ಹಿರಿಯಡ್ಕ: 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ್ದ ಕೆ.ಬಿ.ಕೆ ಕುರ್ಕಾಲು ತಂಡವು 12 ಪ್ರಥಮ, 11 ದ್ವಿತೀಯ, 8 ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎ ಪೂಜಾರಿ, ಮಾಜಿ ಅಧ್ಯಕ್ಷ ಭುವನೇಶ್ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಾದ ಶರಣ್ಯ, ರೈನಾರ್, ಅಮಯ್, ಅವಿಷ್, ಆದಿತ್ಯ, ಪ್ರೀತಮ್, ನಿಹಾಲ್, ಮನೀಶ್, ಯತಿನ್, ಶ್ರೀವತ್ಸ, ಸೃಜನ್, ಮೋಕ್ಷ,ತನಿಶ್, ನಿಕೊಲ್, ಆತ್ಮೀಕ್, ಐಫಾಜ್, ತಾಹಿರ್, ಫಿಧಾ, ಫಾಹಿಜ್, ಮಣಿಕಂಠ ಹಾಗೂ ಹರ್ಷ ಮನೋಹರ […]

ಕುಂದಾಪುರ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: 2023 ರ ಕಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇನ್ವಿತಾ ಖಾರ್ವಿ ಚಿತ್ರ ಕಲೆಯಲ್ಲಿ, ಧಾರಿಣಿ ಕೆ. ಎಸ್ ಶಾಸ್ತ್ರೀಯ ಸಂಗೀತದಲ್ಲಿ, ಸೃಜನ್ ಎಸ್ ದೇವಾಡಿಗ ಜಾನಪದ ಗೀತೆ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.