ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಹಾರಾಡಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ

ಹಾರಾಡಿ: ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧೀಶ ಸ್ವಾಮೀಜಿಯವರು ಆದಿತ್ಯವಾರದಂದು ಹಾರಾಡಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನಕ್ಕೆ ಪ್ರಥಮ ಬಾರಿ ಭೇಟಿ ನೀಡಿದರು. ಶ್ರೀಗಳನ್ನು ವಿಧಿವತ್ ಧಾರ್ಮಿಕ ಪೂಜಾ ವಿಧಾನಗಳಿಂದ ಬರಮಾಡಿಕೊಳ್ಳಲಾಯಿತು. ಪ್ರಧಾನ ಅರ್ಚಕ ಮಂಜುನಾಥ ಭಟ್ ದೇವರಿಗೆ ಮಂಗಳಾರತಿ ಬೆಳಗಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಹೆಚ್. ಕೃಷ್ಣ ಗಡಿಯಾರ, ಮಂಡಳಿಯ ಸದಸ್ಯ ಮಾಧವರಾಯ ಪ್ರಭು, ಬಾಬುರಾಯ ಶೆಣೈ , ಶ್ರೀಕಾಂತ್ ಪೈ , ಡಾ. ಸತೀಶ್ ಪೈ , ಲಕ್ಷ್ಮಣ್ ಗಡಿಯಾರ, ಜಿ ಎಸ್ […]

ಭಾಷಣ ಸ್ಪರ್ಧೆ: ಶ್ರೀ ವೆಂ. ಪ. ಪೂ. ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ವತಿಯಿಂದ ಡಿ.10 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದಿವೀಶ್ ಪ್ರಥಮ ಸ್ಥಾನ, ತನುಶ್ರೀ ದ್ವಿತೀಯ ಸ್ಥಾನ ಹಾಗೂ ಭಗವದ್ಗೀತಾ ಕಂಠ ಪಾಠದಲ್ಲಿ ವರ್ಷಾ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮೂಡಬಿದಿರೆ: ಡಿ.14 ರಿಂದ 17 ರವರೆಗೆ ನಡೆಯಲಿದೆ ಆಳ್ವಾಸ್ ವಿರಾಸತ್ 2023

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಕಾರ್ಯಕ್ರಮವು ಡಿ.14 ರಿಂದ 17ರವರೆಗೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ […]

ಉಡುಪಿ ಭಾರತ್‌ ಮಾರ್ಕೆಟಿಂಗ್‌ 16ನೇ ವರ್ಷಕ್ಕೆ ಪಾದಾರ್ಪಣೆ: ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟದಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿದ ಸಂಸ್ಥೆ

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರುವ ಗುಣಮಟ್ಟದ ಅತ್ಯಾಧುನಿಕ ಬೃಹತ್‌ ಸಂಗ್ರಹದ ವಿದ್ಯುತ್‌ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿಎಂ ಬ್ರ್ಯಾಂಡ್‌ ಶೋರೂಂ ‘ಭಾರತ್‌ ಮಾರ್ಕೆಟಿಂಗ್‌’ ಬ್ರ್ಯಾಂಡೆಡ್‌ ಎಲೆಕ್ಟ್ರಿಕಲ್ ಸರಕುಗಳ ಮಾರಾಟದ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ನೂತನ ಮನೆ, ಸಭಾಂಗಣ, ಮಾಲ್, ಮಳಿಗೆ, ಸಮುಚ್ಚಯ ನಿರ್ಮಾಣದಲ್ಲಿ ಬಳಸುವ ಜಿಎಂ, ಹ್ಯಾವೆಲ್, ಫಿನೊಲೆಕ್ಸ್‌, ವಿ-ಗಾರ್ಡ್‌, ಲಿಗ್ರೆಂಡ್‌, ಆರ್‌ಆರ್‌, ಲ್ಯೂಕರ್, ಹಿಲ್ಸ್ ಕ್ಯಾಬ್, ಪ್ಯಾಸೋಲೈಟ್, ಸ್ಟ್ಯಾಂಡರ್ಡ್ ಕಂಪೆನಿಗಳ ಕೇಬಲ್ಸ್, ವಯರ್, ಎಲ್ಇಡಿ ಫಿಟ್ಟಿಂಗ್ಸ್‌, ಹವೆಲ್ಸ್ ಕಂಪೆನಿಯ ಇಲೆಕ್ಟ್ರಿಕಲ್ ಸಾಮಗ್ರಿಗಳಾದ […]

ಹಿರಿಯಡಕ: ಅಕ್ರಮವಾಗಿ ಮರಳು ಸಾಗಾಟ- ಟಿಪ್ಪರ್ ವಶ

ಹೆಬ್ರಿ: ಹಿರಿಯಡಕ ಪೊಲೀಸ್ ಠಾಣಾ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪ ರ್ ವಾಹನದಲ್ಲಿ ಹಿರಿಯಡಕ ಜಂಕ್ಷನ್‌ನಿಂದ ಮಣಿಪಾಲ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿಯಾದ ಘಟನೆ ನಡೆದಿದೆ. ಟಿಪ್ಪ ರ್ ವಾಹನವನ್ನು ಪರಿಶೀಲಿಸಿದಾಗ ಸುಮಾರು 12 ಸಾವಿರ ರೂ. ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ವಾಹನ ಸಹಿತ ವಶಪಡಿಸಿಕೊಂಡು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.