ಪರ್ಯಾಯ ಶ್ರೀಪಾದರಿಂದ “ಕೋಟಿ ತುಳಸಿ ಅರ್ಚನೆ” ಯ ಕರಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಅನುಜ್ಞೆಯ ಮೇರೆಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ಉಡುಪಿಯ ರಾಜಾಂಗಣದಲ್ಲಿ ಡಿ.31 ರವಿವಾರದಂದು ನಡೆಯಲಿರುವ ಋಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ “ಕೋಟಿ ತುಳಸಿ ಅರ್ಚನೆ”ಯ ಆಮಂತ್ರಣ ಪತ್ರಿಕೆ ಹಾಗೂ ಈ ಬಗ್ಗೆ ಶ್ರೀಮಠದಿಂದ ಪ್ರಕಟಿತ ಮನವಿಯ ಕರಪತ್ರವನ್ನು ಪರ್ಯಾಯ ಮಠದ ಪರಮ […]
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಸಪ್ತಾಹಕ್ಕೆ ಚಾಲನೆ

ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ಇಂದಿನಿಂದ ಡಿಸೆ೦ಬರ್ 24 ರ ವರೆಗೆ ಅಹೋರಾತ್ರಿ ನಡೆಯಲಿದೆ. 7 ದಿನಗಳ ಪರ್ಯ೦ತ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವದಲ್ಲಿ ಅರ್ಚಕ ಕೆ. ಜಯದೇವ್ ಭಟ್ ಹಾಗೂ ಗಣಪತಿ ಭಟ್ ದೇವರಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಮಂಗಳಾರತಿ ಬೆಳಗಿಸಿ 95 ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ ನೀಡಿದರು. ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭ ರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಯಲ್ಲಿರಿಸಿ ಮಹಾ ಮಂಗಳಾರತಿ […]
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕನಿಗೆ ಬೇಕಾಗಿದೆ ದಾನಿಗಳ ನೆರವು…

ಪುತ್ತೂರು: ಪುತ್ತೂರು ತಾಲೂಕಿನ ಕಡಬ ನಿವಾಸಿ ಆಕಾಶ್ ಎಂಬ ಬಾಲಕನು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಳೆದ ಹಲವು ಸಮಯಗಳಿಂದ ಚಿಕಿತ್ಸೆಗೊಳಗಾಗುತ್ತಿದ್ದಾನೆ. ಈತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಆರ್ಥಿಕವಾಗಿ ಬಡವರಾಗಿರುವ ಈತನ ಕುಟುಂಬಿಕರು ಆತನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತಿಲ್ಲ. ಆಕಾಶ್ ಶಾಲೆಗೆ ಹೋಗಲು ಬಯಸುತ್ತಿದ್ದು, ಈತನ ಚಿಕಿತ್ಸೆಯ ಖರ್ಚು ವೆಚ್ಚದ ಜೊತೆ ಆತನ ಶಾಲೆಯ ಖರ್ಚು ವೆಚ್ಚವನ್ನು ತೂಗಿಸಲು ಸಾಧ್ಯವಿಲ್ಲದ ಈತನ ಕುಟುಂಬವು ದಾನಿಗಳ ನಿರೀಕ್ಷೆಯಲ್ಲಿದೆ. ಈತನಿಗೆ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ […]
ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳ ಷಷ್ಠ್ಯಬ್ಧ ಪ್ರಯುಕ್ತ ಅಭಿವಂದನಾ ಸಮಾರಂಭ

ಉಡುಪಿ: ಉಡುಪಿ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಷಷ್ಠ್ಯಬ್ಧ ಪ್ರಯುಕ್ತ ಉಡುಪಿಯ ಅಭಿಮಾನಿಗಳಿಂದ ನಡೆದ ಅಭಿವಂದನಾ ಸಮಾರಂಭವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರೊಂದಿಗೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು. ಷಷ್ಠ್ಯಬ್ಧ ಪ್ರಯುಕ್ತ ಲಕ್ಷ ಕೃಷ್ಣ ಮಂತ್ರ ಜಪ ಸಹಿತ ಯಾಗ, ಮತ್ತು ಗೋಸೂಕ್ತ ಯಾಗವು ಪೇಜಾವರ ಮಠಾಧೀಶರೊಂದಿಗೆ ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ನಡೆಸಿಕೊಟ್ಟರು. ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನಪರಿಷತ್ ಸದಸ್ಯ […]
ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಿವಕುಮಾರ್ (35) ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸೆಂಬರ್ 11 ರಂದು ಆಸ್ಪತ್ರೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಬಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ