ಸರಕಾರದ ಯೋಜನೆಗಳನ್ನು ನಾಗರಿಕರಿಗೆ ತಲುಪಿಸುವಲ್ಲಿ ಗ್ರಾಮ ಒನ್ ಕೇಂದ್ರಗಳ ಪಾತ್ರ ಮಹತ್ವ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಸರಕಾರದಿಂದ ಅನುಷ್ಠಾನಗೊಳಿಸಲಾಗುವ ಹೊಸ ಯೋಜನೆಗಳನ್ನು ನಾಗರಿಕರಿಗೆ ಉತ್ತಮ ರೀತಿಯಲ್ಲಿ ತಲುಪಿಸುವಲ್ಲಿ ಗ್ರಾಮ ಒನ್ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.   ಅವರು ಶನಿವಾರ ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಸೇವಾಸಿಂಧು / ಗ್ರಾಮ ಒನ್ ಜಿಲ್ಲಾಧಿಕಾರಿಗಳ ಕಚೇರಿ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಜಿಲ್ಲೆಯ  ಗ್ರಾಮ ಒನ್ ಕೇಂದ್ರದ ನಿರ್ವಾಹಕರಿಗೆ ನಡೆದ ಜಿಲ್ಲಾಮಟ್ಟದ ಕ್ರೀಡೋತ್ಸವ “ಗ್ರಾಮ ಒನ್ ಕ್ರೀಡಾ ಹಬ್ಬ – 2023” ರ ಕಾರ್ಯಕ್ರಮ […]

ನಾಳೆ (ಡಿ.22) ಮಣಿಪಾಲದಲ್ಲಿ‌ “ಬೇಕ್ ಲೈನ್” ಕೇಕ್ ಶಾಪ್ ಶುಭಾರಂಭ; ಇನ್ಮುಂದೆ ಸ್ವಾದಿಷ್ಟಕರ ವೆರೈಟಿ ಫ್ರೆಶ್ ಕೇಕ್ ಗಳು‌ ನಿಮ್ಮ ಮನೆ ಬಾಗಿಲಿಗೆ ಬರಲಿವೆ.

ಮಣಿಪಾಲ: ಇಲ್ಲಿನ ಅನಂತ ನಗರದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್ಸ್ಟಿ ಟ್ಯೂಶನ್ಸ್ ನ ಬಳಿ ಇರುವ ಅವಂತಿ ಕಾರ್ನರಿನಲ್ಲಿ ಡಿ.22 ರಂದು ಹೊಸದಾದ ಕೇಕ್ ಶಾಪ್ ‘ಬೇಕ್ ಲೈನ್’ ಇದರ ಉದ್ಘಾಟನ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ನಿಮ್ಮ ಸಂತೋಷದ ಕ್ಷಣಗಳನ್ನು ಸಿಹಿಯೊಂದಿಗೆ ಆಚರಿಸಲು ಬೇಕ್ ಲೈನ್ ಫ್ರೆಶ್ ಕೇಕ್ ಹಾಗೂ ಕನ್ಫೆಕ್ಷನರಿಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. ಬೇಕ್ ಲೈನ್ ಶಾಖೆಗಳು ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆ, ಕಾರ್ಕಳ, ಕೆಮ್ಮಣ್ಣು, ಶಿರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೀಗ […]

ರಾಮಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಲು ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿಗೆ ಆಹ್ವಾನ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಂಗಳವಾರದಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪರವಾಗಿ ನಿಯೋಗದಿಂದ ಆಹ್ವಾನವನ್ನು ಕಳುಹಿಸಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ಆದರೆ ಅನಾರೋಗ್ಯ ನಿಮಿತ್ತ ಅವರು ಪಾಲ್ಗೊಳ್ಳಲಾಗುವುದಿಲ್ಲ. ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್‌ನ ಪದನಿಮಿತ್ತ ಸದಸ್ಯ, ಆರ್‌ಎಸ್‌ಎಸ್ ಅಖಿಲ […]

ಪುತ್ತಿಗೆ ಪರ್ಯಾಯ: ಚಪ್ಪರ ಮುಹೂರ್ತ ಸಂಪನ್ನ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಚಪ್ಪರ ಮುಹೂರ್ತವು ಬುಧವಾರ ನಡೆಯಿತು. ರಾಘವೇಂದ್ರ ಕೊಡಂಚ ಅವರ ಪೌರೋಹಿತ್ಯದಲ್ಲಿ, ಚಪ್ಪರ ನಿರ್ವಹಣೆಯ ರಾಜೇಶ್ , ಮುಚ್ಚೂರು ರಾಮಚಂದ್ರ ಭಟ್, ನಾಗರಾಜ್‌ ಉಪಾಧ್ಯ, ಮಠದ ಮೇಸ್ತ್ರಿ ಪದ್ಮನಾಭ ಇವರಿಗೆ ಮುಹೂರ್ತ ಪ್ರಸಾದ ನೀಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಪರ್ಯಾಯ ಪ್ರಚಾರ ವಾಹನದ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಿದರು. ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ್ , ಕಾರ್ಯದರ್ಶಿ ರಾಘವೇಂದ್ರ […]

ಉಜ್ವಲ ಗ್ಯಾಸ್ ಇದ್ದವರಿಗೆ ಮಾತ್ರ ಆಧಾರ್ ದೃಢೀಕರಣ ಕಡ್ಡಾಯ.

ಉಡುಪಿ: ಅಡುಗೆ ಅನಿಲ ಸಂಪರ್ಕ ಇರುವವರು ಡಿ.31ರೊಳಗೆ ಗ್ಯಾಸ್ ಏಜೆನ್ಸಿಗೆ ಹೋಗಿ ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯ. ಉಳಿದವರಿಗೆ ಗ್ಯಾಸ್ ಸಬ್ಸಿಡಿ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.