ವಡಭಾಂಡ ಬಲರಾಮನಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ

ಮಲ್ಪೆ: ನೂರಾರು ವರ್ಷ ಇತಿಹಾಸ ಹೊಂದಿರುವ ವಡಭಾಂಡೇಶ್ವರ ಬಲರರಾಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ದೇಗುಲದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿದಿ ವಿಧಾನಗಳು ಜರಗಿತು. ಬೆಳಗ್ಗೆ 6.45ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಡೆಯಲಿರುವುದು. ಬಳಿಕ ನ್ಯಾಸಪೂಜೆ ಪ್ರಸನ್ನಪೂಜೆ ಅವಸೃತಬಲಿ, ಮಹಾ ಮಂತ್ರಕ್ಷತೆ, ಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ ಪಲ್ಲಪೂಜೆಯಾಗಿ ಮಹಾಅನ್ನಸಂತರ್ಪಣೆ ನಡೆಯಿತು. ಸುಮಾರು ೧೫ ಸಾವಿರ ಮಂದಿ […]
ನೀರಿನ ಸಮಸ್ಯೆ ತಡೆಗಟ್ಟಲು ಗಿಡ ಮರಗಳನ್ನು ನೆಟ್ಟು ಪೋಷಿಸಿ: ಶರ್ಮಿಳಾ ಎಸ್

ಉಡುಪಿ: ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಇತ್ತೀಚಿನ ವರುಷಗಳಲ್ಲಿ ಮಳೆಯಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಭವಿಷ್ಯದಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು. ಅವರು ಇತ್ತೀಚೆಗೆ ನಗರದ ಪೂರ್ಣ ಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೂರ್ಣ ಪ್ರಜ್ಞ ಕಾಲೇಜು ಉಡುಪಿ ಇವರ […]
ಉಡುಪಿ: ಯುವತಿ ನಾಪತ್ತೆ

ಉಡುಪಿ: ಹನುಮಂತನಗರ ನಿವಾಸಿ ಕಾಶಿಬಾಯಿ(20) ಎಂಬ ಯುವತಿಯು ಮಾರ್ಚ್ 3 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. 122 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಉಡುಪಿ ಜಿಲ್ಲೆಯ ನಿವಾಸಿ ಕೃಷ್ಣ ಪೂಜಾರಿ (57) ಎಂಬ ವ್ಯಕ್ತಿಯು ಮಾರ್ಚ್ 20 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. ಕಪ್ಪು ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ ದೂ.ನಂ: 0820-2537999, ಮಲ್ಪೆ ಪಿ.ಎಸ್.ಐ ಮೊ.ನಂ:9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ […]
ಕುಂದಾಪುರ: ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಕುಂದಾಪುರ: ಇಲ್ಲಿನ ಅಪಾರ್ಟಮೆಂಟ್ ಒಂದರ ಐದನೇ ಮಹಡಿಯಿಂದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ. ಮೃತ ಮಹಿಳೆಯನ್ನು ಲಕ್ಷ್ಮೀ ಪ್ರತಾಪ್ ನಾಯಕ್ (41) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ನೆಲದ ಮೇಲೆ ಬಿದ್ದಿದ್ದಾರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ […]