ಯೂನಿಟಿ ಆಸ್ಪತ್ರೆಯಲ್ಲಿ ಅಪರೂಪದ ದೈತ್ಯ ಥೈಮಸ್ ಗೆಡ್ಡೆಯ ಯಶಸ್ವಿ ಶಸ್ತ್ರಕ್ರಿಯೆ ನಡೆಸಿದ ವೈದ್ಯರ ತಂಡ

ಮಂಗಳೂರು: ವೈದ್ಯಕೀಯ ಪರಿಣತಿ ಮತ್ತು ಗಮನಾರ್ಹ ಸಾಧನೆಯಲ್ಲಿ, ಪ್ರಸಿದ್ಧ ಹಿರಿಯ ಸಲಹೆಗಾರ ಕಾರ್ಡಿಯೋ ಥೊರಾಸಿಕ್ ಸರ್ಜನ್ ಡಾ. ಮೂಸಾ ಕುನ್ಹಿ ನೇತೃತ್ವದ ವೈದ್ಯರ ತಂಡವು ಯೂನಿಟಿ ಆಸ್ಪತ್ರೆಯ 37 ವರ್ಷದ ರೋಗಿಯಿಂದ ದೈತ್ಯ ಥೈಮಸ್ ಗೆಡ್ಡೆಯನ್ನು (ಥೈಮೋಮಾ) ಯಶಸ್ವಿಯಾಗಿ ತೆಗೆದುಹಾಕಿದೆ. ಹಲವಾರು ವರ್ಷಗಳಿಂದ ರೋಗಿಯ ಎದೆಯೊಳಗೆ ಗೆಡ್ಡೆ ಬೆಳೆದಿದ್ದು ಪ್ರಮುಖ ಅಪಧಮನಿಗಳು, ವಿಂಡ್ ಪೈಪ್ ಮತ್ತು ಆಹಾರ ಪೈಪ್‌ಗಳನ್ನು ಸಂಕುಚಿತಗೊಳಿಸಿತ್ತು. ರೋಗಿಗೆ ಉಸಿರಾಡಲು, ನುಂಗಲು ಮತ್ತು ಸರಿಯಾಗಿ ಮಲಗಲು ಕಷ್ಟವಾಗುತ್ತಿತ್ತು. ರೋಗಿಯ ಹೃದಯ ಮತ್ತು ಎದೆಯ ಕುಹರದ […]

ಮೇ 20 ರಂದು ಅಮೇಝಿಂಗ್ ಡ್ಯಾನ್ಸ್ ಕ್ರೂ ಸಂತೆಕಟ್ಟೆ ಇದರ 15 ನೇ ವರ್ಷದ ವಾರ್ಷಿಕೋತ್ಸವ

ಉಡುಪಿ: ಸಂತೆಕಟ್ಟೆಯಲ್ಲಿರುವ ಅಮೇಝಿಂಗ್ ಡ್ಯಾನ್ಸ್ ಕ್ರೂ ಇದರ 15 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮೇ 20 ರಂದು ಸಂತೆಕಟ್ಟೆಯ ನಾಗಪ್ಪ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಸಂಜೆ 6.30 ರ ಬಳಿಕ ವಾರ್ಷಿಕೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ನೃತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೋರಿಕೊಂಡಿದ್ದಾರೆ.

ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ..

ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.

ಚುನಾವಣಾ ರಾಜಕೀಯದಿಂದ ನಿವೃತ್ತಿ, ಪಕ್ಷ ಕೆಲಸದಲ್ಲಿ ಸಕ್ರಿಯನಾಗಿರುತ್ತೇನೆ: ಬಿ.ರಮಾನಾಥ್ ರೈ

ಮಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿರುವುದಾಗಿ ಬಂಟ್ವಾಳದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಘೋಷಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ರಾಜಕೀಯದಿಂದ ನಿವೃತ್ತನಾದರೂ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿರುತ್ತೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ಸೋತರೂ ಗೆದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾದರೂ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವೆ. ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷ ನನಗೆ ಸರ್ವಶ್ರೇಷ್ಠವಾಗಿದೆ, ಪಕ್ಷವು ನಾನು ಏನು ಮಾಡಬೇಕೆಂದು ಬಯಸುತ್ತದೋ […]

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವು 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. 2024ರ ಚುನಾವಣಾ ಕದನದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಸಂಭಾವ್ಯ ಕಾರ್ಯತಂತ್ರದ ಕುರಿತು ತೃಣಮೂಲ ಕಾಂಗ್ರೆಸ್‌ನ ನಿಲುವಿನ ಬಗ್ಗೆ ಬ್ಯಾನರ್ಜಿ ಅವರು ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದಾರೆ. ನಾನು ಮಾಂತ್ರಿಕಳೂ ಅಲ್ಲ, ಜ್ಯೋತಿಷಿಯೂ ಅಲ್ಲ, ಭವಿಷ್ಯದಲ್ಲಿ ಏನಾಗುತ್ತದೆ? ಇದನ್ನು ಹೇಳಲು ಸಾಧ್ಯವಿಲ್ಲ ಆದರೆ ನಾನು ಒಂದು ಮಾತನ್ನು ಹೇಳಬಲ್ಲೆ, ಎಲ್ಲಿ ಪ್ರಾದೇಶಿಕ ರಾಜಕೀಯ […]