ಬಿಜೆಪಿಯಿಂದ ದೂರ ಸರಿಯುತ್ತಿರುವ ಶಿಕ್ಷಕರ-ಪದವೀಧರರ ಕ್ಷೇತ್ರಗಳು: ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅವಲೋಕನ

ಉಡುಪಿ: ಒಂದುಕಾಲವಿತ್ತು, ವಿಧಾನಪರಿಷತ್ ನಲ್ಲಿ ಬಹುಮುಖ್ಯವಾಗಿ ಶಿಕ್ಷಕರ ಕ್ಷೇತ್ರ -ಪದವೀಧರರ ಕ್ಷೇತ್ರಗಳೆಂದರೆ ಬಿಜೆಪಿಯೇ ತುಂಬಿ ತುಳುಕುವ ಸದನವಾಗಿತ್ತು. ಬಿಜೆಪಿ ಬಿಟ್ಟರೆ ಜೆಡಿಎಸ್ ಆ ಸ್ಥಾನ ತುಂಬಿಸಿಕೊಳ್ಳುತ್ತಿತು. ಆದರೆ ಇತ್ತೀಚಿನ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದೆ ಮಾತ್ರವಲ್ಲ ಗೆದ್ದು ಬರುವ ಅವಕಾಶ ಹೆಚ್ಚಾಗಿ ವೇದ್ಯವಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ರಾಜ್ಯ ವ್ಯಾಪಿಯಾಗಿ ಬಿಜೆಪಿ-ಜೆಡಿಎಸ್ ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿರುವುದು ಮಾತ್ರವಲ್ಲ ಅವರು ಕಾಂಗ್ರೆಸ್ ಪಕ್ಷವನ್ನೆ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪರಿಸ್ಥಿತಿ ಯಾಕೆ ಬಂದಿದೆ ಅನ್ನುವುದನ್ನು […]

ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಪದಗ್ರಹಣ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮಾ. 30 ರಂದು ಕಾಪು K1 ಹೋಟೆಲಿನಲ್ಲಿ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಾಖಲೆಗಳ ಮತಗಳ ಅಂತರದಲ್ಲಿ ಗೆಲ್ಲಿಸಲು ಕರೆನೀಡಿದರು.

Awesome & Handsome ಫ್ಯಾಮಿಲಿ ಸಲೂನ್ ಆ್ಯಂಡ್ ಬ್ರೈಡಲ್ ಸ್ಟುಡಿಯೋ ಆ್ಯಂಡ್ ಅಕಾಡಮಿ: ರಿಯಾಯತಿ ದರದಲ್ಲಿ ಎಲ್ಲ ರೀತಿಯ ಸೌಂದರ್ಯ ಸೇವೆಗಳು ಲಭ್ಯ

ಉಡುಪಿ: Awesome & Handsome ಪ್ರೊಫೆಶನಲ್ ಫ್ಯಾಮಿಲಿ ಸಲೂನ್ ಆ್ಯಂಡ್ ಬ್ರೈಡಲ್ ಸ್ಟುಡಿಯೋ ಆ್ಯಂಡ್ ಅಕಾಡಮಿಯಲ್ಲಿ ಸೌಂದರ್ಯ ಸೇವೆಗಳ ಮೇಲೆ ರಿಯಾಯತಿ ಲಭ್ಯವಿದೆ. ಪುರುಷರ ರೂ. 1199 ನ ಯಾವುದೇ ಮೂರು ಸೇವೆಗಳ ಮೇಲೆ ಉಚಿತ ಬಿಯರ್ಡ್ ಮತ್ತು ಹೇರ್ ಕಟ್ಟಿಂಗ್. ಮಹಿಳೆಯರ ರೂ.1799 ನ ಯಾವುದೇ 5 ಸೇವೆಗಳ ಮೇಲೆ ಉಚಿತ ಐಬ್ರೋ. ಕೇವಲ 499 ರೂ ಗೆ ಪುರುಷರ ಕಟ್ಟಿಂಗ್, ಶೇವಿಂಗ್, ಕ್ಲೀನಿಂಗ್, ಹೈರ್ ವಾಶ್ ಇತ್ಯಾದಿ. ಮಹಿಳೆಯರ ಹೇರ್ ಸ್ಟ್ರೈಟನಿಂಗ್ ಅಥವಾ ಕರ್ಲಿಂಗ್ […]

ಕೊಲ್ಲೂರು: ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕೊಲ್ಲೂರು: ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿಯಾದ ನರಸಿಂಹ ಅವರ ಪುತ್ರ ಸುದರ್ಶನ್ (18) ಫೆ. 28 ರಂದು ನಾಪತ್ತೆಯಾಗಿದ್ದಾರೆ. ಅಂದು ಬೆಳಿಗ್ಗೆ ಇಲೆಕ್ಟ್ರಿಶಿಯನ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋದವರು ಸಂಜೆಯಾದರೂ ತಿರುಗಿ ಮನೆಗೆ ಬರದ್ದನ್ನು ಕಂಡು ಅಕ್ಕ ಪಕ್ಕದ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಹತ್ತಿರದ ಕೊಲ್ಲೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುನಿಯಾಲು ಉದಯ ಶೆಟ್ಟಿಯವರ ತೇಜೋವಧೆಗೆ ಬಿಜೆಪಿ ವ್ಯರ್ಥ ಪ್ರಯತ್ನ – ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಖಂಡನೆ.

ಕಾರ್ಕಳ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು ಈ ಕ್ಷೇತ್ರದ ಜನಾಕ್ರೋಶಕ್ಕೆ ತುತ್ತಾಗಿದ್ದು, ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ ಶೆಟ್ಟಿ ಅವರ ಮೇಲೆ ಸುಳ್ಳು ದೂರು ದಾಖಲು ಮಾಡಿರುವುದು ಕಾರ್ಕಳ ಬಿಜೆಪಿಗರ ಹತಾಶೆಯ ಪ್ರತೀಕವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಉದಯ ಶೆಟ್ಟಿಯವರ ತೇಜೊವಧೆಗೆ ಬಿಜೆಪಿಯವರು […]