ಉಡುಪಿ:ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು

ಉಡುಪಿ:ಹೀರೋ ಮೋಟೋಕಾರ್ಪ್ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳು ಗ್ರಾಹಕರಿಗಾಗಿ ಕಾಯುತ್ತಿವೆ ಇಂದೇ ನಿಮ್ಮ ಮನೆಗೆ ಕೊಳ್ಳಿರಿ ಹೀರೋ ವಾಹನಗಳನ್ನು. ಹೆಚ್ಚುವರಿ ಬುಕಿಂಗ್ ನ ರಿಯಾಯಿತಿಗಳು ₹1000/- ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ವಿಷೇಶ ಕೊಡುಗೆಗಳು: 15 ಲಕ್ಷ ರೈಡರ್ ವಿಮೆ,O ಶೇಕಡಾವಾರು ಬಡ್ಡಿ ದರ, ₹1000/- ಮೌಲ್ಯದ ಉಚಿತ ಹೆಲ್ಮೆಟ್,ಉಚಿತ ವಾಹನ ಬಾಡಿ ಕವರ್,ಉಚಿತ ಪ್ರಯಾಣ ಬ್ಯಾಗ್,X ಪಲ್ಸ್ 200 ₹5000/- ವರೆಗೆ ನಗದು ರಿಯಾಯಿತಿ,ಪ್ಯಾಶನ್ ಜೊತೆಗೆ […]

ಕುಂದಾಪುರದ ತ್ರಾಸಿ ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ( ಗಗನದಲ್ಲಿ ಊಟ) ತಾಣವಾಗಲಿದೆ

ಕುಂದಾಪುರ:ಪಣಂಬೂರು ಬೀಚ್‌ ಬಳಿಕ ಕುಂದಾಪುರದ ತ್ರಾಸಿಯ ಕಡಲ ಕಿನಾರೆಯು ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ (ಗಗನದಲ್ಲಿ ಊಟ) ತಾಣ ವಾಗಲಿದೆ. ನೆಲ ಮಟ್ಟದಿಂದ ಸುಮಾರು 60-70 ಅಡಿ ಎತ್ತರದಲ್ಲಿ ತ್ರಾಸಿ- ಮರವಂತೆ ಕಡಲು- ಸೌಪರ್ಣಿಕಾ ನದಿ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅತ್ಯದ್ಭುತ ಸೊಬಗನ್ನು ಕಣ್ತುಂಬಿಕೊಳ್ಳುವ ಜತೆಗೆ, ರುಚಿಕರವಾದ ತಿನಿಸುಗಳನ್ನು ಸವಿಯುವ ಅವಕಾಶ ಇದಾಗಿದೆ. ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಯಿಂದ ಕಾರ್ಯಾದೇಶ ನೀಡಲಾಗಿದ್ದು, ಅದಕ್ಕೆ ಬೇಕಾದ ಅನುಮತಿ, ಸುರಕ್ಷೆ ಕ್ರಮಗಳ ಪರಿಶೀಲನೆಯೂ ಆಗಿದೆ. ಇದಕ್ಕೆ […]

ಉಡುಪಿ: ಸೇವೆಗಳನ್ನು ಸ್ಥಗಿತಗೊಳಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ

ಉಡುಪಿ: ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಮೊಬೈಲ್ ಆ್ಯಪ್ ನ ಒತ್ತಡ ನಿಲ್ಲಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಏಳು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು.ಧರಣಿ ಉದ್ದೇಶಿಸಿ ಉಡುಪಿ ಜಿಲ್ಲಾ ಗ್ರಾಮ ಆಡಳಿತ […]

ಹೈಕೋರ್ಟ್ ತೀರ್ಪು “ರಾಜಕೀಯ ಪ್ರೇರಿತ” ಹೇಳಿಕೆ; ಸಚಿವ ಜಮೀರ್ ವಿರುದ್ಧ ಸಂಸದ ಕೋಟ ಆಕ್ರೋಶ

ಉಡುಪಿ: ಸಚಿವ ಜಮೀರ್ ಅಹಮದ್ ಅವರು ಸಿದ್ದರಾಮಯ್ಯ ಅಭಿಯೋಜನೆ ಕುರಿತು ಹೈಕೋರ್ಟ್‌ ನೀಡಿದ ತೀರ್ಪನ್ನು “ರಾಜಕೀಯ ಪ್ರೇರಿತ” ಎಂದು ಹೇಳಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದ ತೀರ್ಪನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆಬಾಗಿ ಸ್ವೀಕಾರ ಮಾಡಬೇಕು. ಅದು ಇಷ್ಟವಿಲ್ಲದಿದ್ದರೆ ಮೇಲ್ಮನವಿ ಸಲ್ಲಿಸಬೇಕು. ಅದು ಬಿಟ್ಟು ಒಬ್ಬ ನ್ಯಾಯಮೂರ್ತಿಯ ತೀರ್ಪನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದು ಹೇಳಿದವರ […]

ಉಡುಪಿ:ಸಮಾಜದಲ್ಲಿನ ಅಸ್ಥಿರತೆಯನ್ನು ಹೋಗಲಾಡಿಸಲು ಯುವಜನತೆ ಶಕ್ತಿವಂತರಾಗಿ: ನ್ಯಾ. ಕಿರಣ್ ಎಸ್ ಗಂಗಣ್ಣವರ್

ಉಡುಪಿ: ಸಮಾಜದಲ್ಲಿನ ಅಸ್ಥಿರತೆಯಿಂದಾಗಿ ಬಾಲ್ಯವಿವಾಹ, ಬಾಲಕಾರ್ಮಿಕ, ದೌರ್ಜನ್ಯ ಸೇರಿದಂತೆ ಮತ್ತಿತರ ಪ್ರಕರಣಗಳು ಕಂಡುಬರುತ್ತಿದ್ದು, ಅವುಗಳನ್ನು ಎದುರಿಸಿ, ಪ್ರಕರಣಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ಯುವಜನತೆ ಶಕ್ತಿವಂತರಾಗಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್ ಗಂಗಣ್ಣವರ್ ಹೇಳಿದರು. ಅವರು ಗುರುವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರಕ್ಷಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ […]