ನಾಳೆ ಉಡುಪಿ ಜಿಲ್ಲಾ ಹೊಟೇಲ್ ಉದ್ದಿಮೆದಾರರ ಸಹಕಾರಿ ಸಂಘ ನೂತನ ಕಚೇರಿಗೆ ಸ್ಥಳಾಂತರ 

ಉಡುಪಿ: ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ ರಾಜ್ ಟವರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಘವು ಮೇ. 21 (ನಾಳೆ) ಪಿಪಿಸಿ ಕ್ರಾಸ್ ರಸ್ತೆಯ ಆಶಾಚಂದ್ರ ಟ್ರೇಡ್ ಸೆಂಟರ್ ನಲ್ಲಿನ ನೂತನ ಕಚೇರಿಗೆ ಸ್ಥಳಾಂತರಗೊಳ್ಳಲಿದೆ. ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡವರು ಹಾಗೂ ಇತರ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಗೊಂಡ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಗವು ಕಳೆದ ಏಳು ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ತೊಡಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಸವಲತ್ತು […]

ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಹಿರಿಯಡಕ ಇದರ 19ನೇ ವರ್ಷದ ವಾರ್ಷಿಕೋತ್ಸವ

ಉಡುಪಿ: ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಹಿರಿಯಡಕ ಇದರ 19ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶೌರ್ಯ ಪ್ರಶಸ್ತಿ ವಿತರಣಾ ಹಾಗೂ ಸಂಸ್ಮರಣಾ ಕಾರ್ಯಕ್ರಮವು ಮೇ.1 ರಂದು ಬಸ್ತಿ ಕಲ್ಕುಡ ದೇವಸ್ಥಾನ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಈಶ್ವರ್ ಮಲ್ಪೆ ಅವರೆಗೆ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸುಧಾಕರ ಪೂಜಾರಿ ಅಭಿಮಾನಿ ಸಂಘದ ಅಧ್ಯಕ್ಷರು ಉದಯ ಕೆ. ಶೆಟ್ಟಿ ಅರ್ಭಿ , ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ […]

ಸಾಲಿಗ್ರಾಮ ಪ.ಪಂ ನಲ್ಲಿ ಜೂನ್ 5 ರ ವರೆಗೆ RRR ಅಭಿಯಾನ: ಹಳೆ ವಸ್ತುಗಳ ರೆಡ್ಯೂಸ್, ರಿಯೂಸ್ ಹಾಗೂ ರಿಸೈಕಲ್

ಉಡುಪಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನವೀಕರಿಸಿ ಮರು ಬಳಸಬಹುದಾದ ವಸ್ತುಗಳ ಸಂಗ್ರಹ ಮಾಡಲು ಮೇ 20 ರಿಂದ ಜೂನ್ 5 ರ ವರೆಗೆ ರೆಡ್ಯೂಸ್, ರಿಯೂಸ್ ಹಾಗೂ ರಿಸೈಕಲ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮರುಬಳಕೆ ಮತ್ತು ಪುನರ್ಬಳಕೆ ಹಾಗೂ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ನನ್ನ ಜೀವನ-ನನ್ನ ಸ್ವಚ್ಛ ನಗರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ […]

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತೋತ್ಸವ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಸಂತ ಮಾಸದ ಕೊನೆಯ ದಿನ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಲಾಲ್ಕಿ ಉತ್ಸವ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಪ್ರತಿ ವರುಷದಂತೆ ಸ್ವಯಂಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ವಸಂತೋತ್ಸವವು ಸಂಭ್ರಮದಿಂದ ಜರುಗಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕೇಸರ ಪಿ ವಿ ಶೆಣೈ, ವಿಶ್ವನಾಥ ಭಟ್ , […]

ಸತತ 5 ನೇ ಬಾರಿ ಶೇ 100 ಫಲಿತಾಂಶ: ಮರುಮೌಲ್ಯಮಾಪನದಲ್ಲಿ ಶ್ರೀವೆಂಕಟರಮಣ ಕಾಲೇಜಿಗೆ ಒಟ್ಟು 13 ರ‍್ಯಾಂಕ್

ಕುಂದಾಪುರ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ ಫತಾಂಶ ಬಂದಿದ್ದು, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಸತತ 5 ನೇ ಬಾರಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಭಾಗದ ಪ್ರಣಮ್ಯ 590 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್, ಇಂಚರ 589 ಅಂಕ ಪಡೆಯುವ ಮೂಲಕ 8ನೇ ರ‍್ಯಾಂಕ್, ಸಂಜನಾ ಶೆಟ್ಟಿ 587 ಅಂಕಗಳನ್ನು ಪಡೆದು 10 ನೇ ರ‍್ಯಾಂಕ್ ಪಡೆದಿರುತ್ತಾಳೆ. ರಾಜ್ಯಮಟ್ಟದಲ್ಲಿ ಒಟ್ಟು 13 ರ‍್ಯಾಂಕುಗಳನ್ನು […]