ಕರಾವಳಿ ಸಾಹಿತಿಗಳು – ಕಲಾವಿದರು – ಲೇಖಕರು – ಕವಿಗಳು – ಚುಟುಕು ಬರಹಗಾರರ ಸಮ್ಮೇಳನ ಆಯೋಜನೆ

ಉಡುಪಿ: ಭಾರತೀಯರಾಗಿ ನಾವು ಒಗ್ಗಟ್ಟಾಗಿರಬೇಕು. ಪ್ರತಿಯೊಬ್ಬ ಭಾರತೀಯರು ಕನ್ನಡಿಗರಲ್ಲ. ಆದರೆ ಪ್ರತಿಯೊಬ್ಬ ಕನ್ನಡಿಗರು ಭಾರತೀಯರು. ಈ ಚಿಂತನೆ ನಮ್ಮಲ್ಲಿ ಬೆಳೆಯಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಕುಂಜಿಬೆಟ್ಟು ಶಾರಾದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಕರಾವಳಿ ಸಾಹಿತಿಗಳು – ಕಲಾವಿದರು – ಲೇಖಕರು – ಕವಿಗಳು – ಚುಟುಕು ಬರಹಗಾರರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಭಾರತಕ್ಕೆ ಗೌರವ ಕೊಡುತ್ತಾ ನಮ್ಮ ಕನ್ನಡ ಪರಂಪರೆಯನ್ನು ಮುಂದುವರಿಸಬೇಕು. […]
ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವವಿಭಾಗದ ಕುಸ್ತಿ ಪಂದ್ಯಾಟ ಸಂಪನ್ನ.

ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರಕುಸ್ತಿ ಪಂದ್ಯಾಟ ಜನತಾ ಕ್ರೀಡಾಂಗಣ ಹೆಮ್ಮಾಡಿಯಲಿ ಅದ್ದೂರಿಯಾಗಿ ನಡೆಯಿತು. ಅಂತಾರಾಷ್ಟ್ರೀಯ ಕಿವುಡರ ಟಿ-20 ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದ ಭಾರತ ತಂಡದ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರು […]
ನೃತ್ಯ ಶಂಕರ ಸರಣಿ 65ರ ಪ್ರಸ್ತುತಿ ಕು|ಶ್ರೇಯಾ ಶ್ಯಾನುಬಾಗ್

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 65ರ ಪ್ರಸ್ತುತಿ ಕು|ಶ್ರೇಯಾ ಶ್ಯಾನುಬಾಗ್. ಕಾರ್ಯಕ್ರಮವು ದಿನಾಂಕ 30-09-24 ಸೋಮವಾರ ಸಮಯ: ಸಂಜೆ 6.25 ರಿಂದ 7.25 ರವರೆಗೆ ನಡೆಯಲಿರುವುದು. ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.
ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗುವ ನಾಲ್ವರ ಸ್ಪರ್ಧಿಗಳ ಹೆಸರು ಅಧಿಕೃತವಾಗಿದೆ. ಇಂದು ಸಂಜೆ (ಸೆ.29ರಂದು) ಉಳಿದ ಸ್ಪರ್ಧಿಗಳು ದೊಡ್ಮನೆ ಆಟಕ್ಕೆ ಪ್ರವೇಶ ಮಾಡಲಿದ್ದಾರೆ. ಒಟ್ಟು 16 ಅಥವಾ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಸ್ವರ್ಗ – ನರಕದ ಮನೆಗೆ ಈ ಸ್ಪರ್ಧಿಗಳು ಹೋಗಲಿದ್ದಾರೆ. ನಾಲ್ವರು ಸ್ಪರ್ಧಿಗಳು ಯಾರು..? ಬಿಗ್ ಬಾಸ್ ಮನೆಗೆ ಹೋಗುವ ನಾಲ್ವರ ಹೆಸರನ್ನು ಈಗಾಗಲೇ ರಿವೀಲ್ ಮಾಡಲಾಗಿದೆ. ʼಸತ್ಯʼ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ (Gautami Jadhav), ಎರಡನೇ ಸ್ಪರ್ಧಿಯಾಗಿ […]
ಭಾವನೆಗೆ ಧಕ್ಕೆ ಆಗದಂತೆ ಮಹಿಷಾ ದಸರಾ ಆಚರಣೆ ಮಾಡಿದರೆ ಸಂತೋಷ

ಉಡುಪಿ: ಚಾಮುಂಡಿ ಬೆಟ್ಟ ಧಾರ್ಮಿಕ ಪ್ರದೇಶವಾಗಿದ್ದು, ಚಾಮುಂಡೇಶ್ವರಿ ತಾಯಿಯನ್ನು ಮಹಿಷಾಸುರ ಮರ್ದಿನಿ ಎಂದು ನಾವು ನಂಬುತ್ತೇವೆ. ಹೀಗಾಗಿ ಈ ಭಾವನೆಗೆ ಧಕ್ಕೆ ಆಗದಂತೆ ಮಹಿಷಾ ದಸರಾ ಆಚರಣೆ ಮಾಡಿದರೆ ನಮಗೆ ಸಂತೋಷ ಎಂದು ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮೈಸೂರು ಮಹಿಷಾ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಉತ್ತರಿಸಿದ ಅವರು, ನಾನೊಬ್ಬ ಜವಾಬ್ದಾರಿಯುತ ಪ್ರತಿನಿಧಿ. ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ. ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. […]