ಬೆಳ್ತಂಗಡಿ: ಮನೆ ಅಂಗಳದಲ್ಲಿ ಕಾರಿನಡಿಗೆ ಸಿಲುಕಿ ಬಾಲಕ ಮೃತ್ಯು.

ಬೆಳ್ತಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ಬಾಲಕಆಕಸ್ಮಿಕವಾಗಿ ಕಾರಿನಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಅ.1 ರಂದು ಮಂಗಳವಾರ ನಡೆದಿದೆ. ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ 4ನೇ ತರಗತಿಯ ವಿದ್ಯಾರ್ಥಿ ನವಾಫ್ ಇಸ್ಮಾಯಿಲ್ (10) ಮೃತ ಬಾಲಕ. ಮನೆಯ ಅಂಗಳದಲ್ಲಿದ್ದ ಕಾರನ್ನು ತೆಗೆಯುವ ವೇಳೆ ಆಕಸ್ಮಿಕವಾಗಿ ಬಾಲಕ ಕಾರಿನಡಿಗೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಕುಂದಾಪುರ: ಟಿಪ್ಪ‌ರ್ ಡಿಕ್ಕಿ ಹೊಡೆದು ಬಿಎಸ್ಸಿ ವಿದ್ಯಾರ್ಥಿ ಮೃತ್ಯು.

ಉಡುಪಿ: ಕಾಲೇಜ್ ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪ‌ರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ […]

ಮಂಗಳೂರು: ಫಲ್ಗುಣಿ ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು; ಓರ್ವನ ಮೃತದೇಹ ಪತ್ತೆ.

ಮಂಗಳೂರು: ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ. ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಅನೀಶ್ ಅವರ ಮೃತದೇಹವನ್ನು ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್ (20) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಿನ್ನೆ ಬೆಳಗ್ಗೆ ಬೆಂಗ್ರೆಯಿಂದ ಮುಳುಗು ತಜ್ಞರು ಆಗಮಿಸಿ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಮುಳುಗು ತಜ್ಞರೊಂದಿಗೆ […]

ಮಲ್ಪೆ: ಮಹಿಳೆ ನಾಪತ್ತೆ.

ಮಲ್ಪೆ: ಹುಲ್ಲು ತರುವುದಾಗಿ ಹೇಳಿ ಹೋದ ಮಹಿಳೆ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡವೂರು ಗ್ರಾಮದ ಬೇಬಿ (71) ಅವರು ನಾಪತ್ತೆಯಾಗಿದ್ದು, ಸೆ.29ರಂದು ಸಂಜೆ ಹುಲ್ಲು ತರಲೆಂದು ಹೋಗಿದ್ದರು. ಅವರಿಗೆ ಹೃದಯ ಸಂಬಂಧಿ, ಮಧುಮೇಹ ಖಾಯಿಲೆ ಇತ್ತು ಎನ್ನಲಾಗಿದೆ.ಸಂಬಂಧಪಟ್ಟವರಲ್ಲಿ ವಿಚಾರಿಸಲಾದರೂ, ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.