ಧಾರ್ಮಿಕ ತಳಹದಿ ಭದ್ರಗೊಂಡರೆ ಜಗತ್ತಿಗೆ ಶಾಂತಿ: ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ವಿಶ್ವವಲ್ಲಭ ಶ್ರೀಗಳ ಆಶಯ

ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮೇ.22 ರಂದು ಬ್ರಹ್ಮಕುಂಭಾಭಿಷೇಕ ರಾಶಿ ಪೂಜೆ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು. ದೇವಾಲಯಗಳ ಸಾನ್ನಿಧ್ಯ ಶಕ್ತಿಯ ಚೈತನ್ಯ ವೃದ್ಧಿಯಿಂದ ಧಾರ್ಮಿಕ ತಳಹದಿ ಭದ್ರಗೊಂಡಲ್ಲಿ ದೇಶ ಮತ್ತು ಜಗತ್ತು ಶಾಂತಿ ಸುಭೀಕ್ಷೆಯಿಂದ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು. ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಮಾತನಾಡಿ, ಶ್ರೀ ಕ್ಷೇತ್ರದ ಸಾನಿಧ್ಯ ಚೈತನ್ಯ ಬೆಳಗುವಲ್ಲಿ […]

ಅಧಿಕಾರಕ್ಕಾಗಿ ಲಾಭಿ‌ ಮಾಡಿದವನಲ್ಲ: ಮಂಜುನಾಥ ಭಂಡಾರಿ

ಉಡುಪಿ: ಅಧಿಕಾರಕ್ಕಾಗಿ ನಾನು ಈ ಹಿಂದೆಯೂ ಯಾವುದೇ ಲಾಭಿ ಮಾಡಿದವನಲ್ಲ ಹಾಗೂ ಇನ್ನು ಮುಂದೆಯೂ ಯಾವುದೇ ಲಾಭಿ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ಸಚಿವ ಸ್ಥಾನದ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು, ಅಧಿಕಾರ ಬಂದಾಗ ಹಿಗ್ಗದೇ ಅಧಿಕಾರ ಇಲ್ಲದಿದ್ದಾಗ ಕುಗ್ಗದೇ ನಡೆದುಕೊಂಡು ಬಂದಿದ್ದೇನೆ. ಹೀಗಾಗಿ ಸಚಿವ ಸ್ಥಾನದ ಬಗ್ಗೆ ಲಾಭಿ ಮಾಡುವ ಪ್ರಮೇಯ ಬರುವುದಿಲ್ಲ ಎಂದು ವಿನಯರ್ಪೂರ್ವಕವಾಗಿ ಉತ್ತರಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈಸಿ ಲೈಫ್ ನೂತನ ಶಾಖೆಗಳ ಉದ್ಘಾಟನೆ

ಶಿವಮೊಗ್ಗ: ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಇದೀಗ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಜಿಲ್ಲಾದ್ಯಂತ ಗ್ರಾಹಕರ ಸೇವೆಗೆ ಸನ್ನದ್ಧವಾಗಿದೆ. ಕೊಡಚಾದ್ರಿ ಕಾಲೇಜು ಎದುರು, ಶಿವಮೊಗ್ಗ ರೋಡ್, ಹೊಸನಗರದಲ್ಲಿ ನೂತನ ಶಾಖೆ  ಮೇ 22 ರಂದು    ಶುಭಾರಂಭಗೊಂಡಿದ್ದು, ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು. ಸಂಜೆ 4 ಗಂಟೆಗೆ ಶಿವಮೊಗ್ಗ ರೋಡ್ , ಬೇಳಲ್ಮಕ್ಕಿ ಸಾಗರದಲ್ಲಿ ನೂತನ ಶಾಖೆ ಶುಭಾರಂಭಗೊಂಡಿದ್ದು, ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ […]

ಮ‌ಲ್ಪೆ : ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 7 ಮಂದಿ ಮೀನುಗಾರರ ರಕ್ಷಣೆ

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಬೋಟಿನವರು ರಕ್ಷಿಸಿದ್ದಾರೆ. ಉದ್ಯಾವರ ಸಂಪಿಗೆ ನಗರದ ರಾಹಿಲ್‌ ಅವರಿಗೆ ಸೇರಿದ ಸೀ ಬರ್ಡ್‌ ಬೋಟ್‌ ಮೇ 21ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಗಾಳಿ-ಮಳೆ ಆರಂಭವಾಗಿದ್ದು, ಪರಿಣಾಮ ನಾವಿಕನ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಬಡಿದಿದೆ. ಈ ವೇಳೆ ನೀರು ಒಳಗೆ […]

ಮರು ಮೌಲ್ಯಮಾಪನ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೊರಡಿಸಿದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್‌ನಲ್ಲಿ 2, ಕನ್ನಡದಲ್ಲಿ1 ಹೆಚ್ಚುವರಿ ಅಂಕ ಪಡೆದು ಒಟ್ಟು 594 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಆಕಾಶ್ ಪೈ ಇಂಗ್ಲೀಷ್‌ನಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2 ಅಂಕಗಳನ್ನು ಹೆಚ್ಚುವರಿ ಪಡೆದು ಒಟ್ಟು 593 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರೋಹಿತ್ ಹೆಗ್ಡೆ […]