ಕೊಲ್ಲೂರು-ಹೆಬ್ರಿ ಮಾರ್ಗದಲ್ಲಿಲ್ಲ ಸರಕಾರಿ ಬಸ್ಸು; ವಿದ್ಯಾರ್ಥಿಗಳು-ಗ್ರಾಮಸ್ಥರ ಗೋಳು ಕೇಳುವವರಿಲ್ಲ

ಕೊಲ್ಲೂರು: ಧಾರ್ಮಿಕ ಮಹತ್ವವಿರುವ ಕೊಲ್ಲೂರಿನಿಂದ ಮುಖ್ಯ ಪೇಟೆ ಹೆಬ್ರಿ ತನಕ ಸರಕಾರಿ ಬಸ್ಸುಗಳು ಓಡಾಟ ನಿಲ್ಲಿಸಿದ್ದು, ಇದರಿಂದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿದೆ.ಈ ವರ್ಷದ ಜನವರಿ ಇಂದ ಮೇ ಮಧ್ಯಭಾಗದಲ್ಲಿ ಈ ಮಾರ್ಗದಲ್ಲಿ ಸರಕಾರಿ ಬಸ್ಸುಗಳ ಓಡಾಟವನ್ನು ನಿಲ್ಲಿಸಲಾಗಿದೆ. ಕೊಲ್ಲೂರಿನಿಂದ ಹೆಬ್ರಿಗೆ ಬೆಳಿಗ್ಗೆ 7.30 ಕ್ಕೆ ಬಿಟ್ಟರೆ ಮತ್ತೆ ಮಧ್ಯಾಹ್ನ 2.00 ಗಂಟೆ ತನಕ ಯಾವುದೇ ಬಸ್ಸು ಇರುವುದಿಲ್ಲ. ಇಲ್ಲಿ ಪ್ರತಿ ನಿತ್ಯ ಹಲವಾರು ವಿದ್ಯಾರ್ಥಿಗಳು ಶಂಕರನಾರಾಯಣ ಸರಕಾರಿ ಕಾಲೇಜಿಗೆ ತೆರಳುತ್ತಾರೆ. ಈ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. […]

ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತನೇ ಪ್ರತಿಷ್ಠಾ ಮಹೋತ್ಸವದ ಸಂಭ್ರಮ: 38 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ದಿವ್ಯವಾದ ಸನ್ನಿಧಾನದಿಂದ ಯಶಸ್ವಿಯಾಗಬಹುದು. ಸಾಧನೆ ಮಾಡುತ್ತಾ ಎತ್ತರಕ್ಕೆ ಏರಬಹುದು. ಇತರ ಪ್ರಾಣಿಗಳಿಗೆ ಬುದ್ದಿಶಕ್ತಿ ಸೀಮಿತವಾಗಿದ್ದರೆ, ಭಗವಂತನು ಮನುಷ್ಯನಿಗೆ ಕೊಟ್ಟ ಅಸಾಧಾರಣ ಶಕ್ತಿಯೆಂದರೆ ಕ್ರೀಯಾಶೀಲವಾಗಿರುವ ಕೈಬೆರಳುಗಳು ಮತ್ತು ಅಪೂರ್ವವಾಗಿರುವ ಬುದ್ದಿ ಶಕ್ತಿ. ವಿದ್ಯೆಯ ಜೊತೆಗೆ ಬುದ್ದಿ ಇದ್ದರೆ ಪ್ರಪಂಚಕ್ಕೆ ಪೂರಕವಾಗುತ್ತದೆ. ಬೌದ್ಧಿಕ ಶಕ್ತಿಯನ್ನು, ಮನಶಕ್ತಿಯನ್ನು ಸತ್ಕರ್ಮದಿಂದ ಸದ್ವಿನಿಯೋಗ ಮಾಡಿದಾಗ ಶ್ರೇಷ್ಠವಾಗಿರುವುದನ್ನು ಪ್ರಪಂಚಕ್ಕೆ ನೀಡಬಹುದು ಎಂದು ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮಿಜಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ […]

ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಆರಂಭ

ಬೆಂಗಳೂರು: ಮೇ29 ರಿಂದ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಲಿವೆ. ಈಗಾಗಲೇ ಕೆಲ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಅಧಿಕೃತವಾಗಿ ಮೇ.29ರ ಸೋಮವಾರದ ನಾಳೆಯಿಂದ ಸರ್ಕಾರಿ, ಅನುದಾನಿತ ಶಾಲೆಗಳು ತೆರೆಯಲಿದ್ದೆ. 2023-24ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯು ಮೇ.29ರ ದಿನಾಂಕವನ್ನು ನಿಗದಿ ಪಡಿಸಿತ್ತು. ಅದರಂತೆ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ […]

ಮಾನವೀಯತೆ ಮೆರೆದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ: ರಮೇಶ್ ಕಾಂಚನ್…!!

ಉಡುಪಿ : ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಅಂದಿನ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ನೌಕರಿ ನೀಡಿದ್ದು ಸರಕಾರ ಬದಲಾದ ಹಿನ್ನಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವಾದಿಸುವ ಬಿಜೆಪಿಗರು ಯಾಕೆ ಅವರ ನೌಕರಿಯನ್ನು ಖಾಯಂ ಮಾಡಿರಲಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಶ್ನಿಸಿದ್ದಾರೆ. ಸರಕಾರ ಬದಲಾದ ಬೆನ್ನಲ್ಲೇ ಹಿಂದಿನ ಸರಕಾರ ಮಾಡಿರುವ ಎಲ್ಲ ತಾತ್ಕಾಲಿಕ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ. ನೂತನ ಸರಕಾರದ ಈ […]

ಉಡುಪಿಯ ಅತಿದೊಡ್ಡ ಶಾಪಿಂಗ್ ಮಾಲ್ ಮಾಂಡವಿ ಟೈಮ್ಸ್ ಸ್ಕ್ವೇರ್ ಉದ್ಘಾಟನೆ

ಉಡುಪಿ: ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನಿರ್ಮಾಣದ ಉಡುಪಿ ನಗರದ ಬಹು ನಿರೀಕ್ಷಿತ ಶಾಪಿಂಗ್ ತಾಣವಾದ ಮಾಂಡವಿ ಟೈಮ್ಸ್ ಸ್ಕ್ವೇರ್ ಮಾಲ್ ಮೇ 27 ರಂದು ಉದ್ಘಾಟನೆಗೊಂಡಿತು. ಕಟ್ಟಡವನ್ನು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮದರ್ ಆಫ್ ಸಾರೋಸ್ ಚರ್ಚ್ ನ ಧರ್ಮಗುರು ಫಾದರ್ ಚಾರ್ಲ್ಸ್ ಮೆನೇಜಸ್ ಹಾಗೂ ಉಡುಪಿಯ ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ರಶೀದ್ ಅಹ್ಮದ್ ಉಮ್ರಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ […]