ಉಡುಪಿ: ಜೂನ್ 15 ರಂದು ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಔಷಧೀಯ ಸಸ್ಯಗಳ ವಿತರಣೆ

ಉಡುಪಿ: ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎನ್ನಲಾದ ಔಷಧೀಯ ಗುಣವುಳ್ಳ ಲಕ್ಷಣ ಫಲ ಹಾಗೂ ಇನ್ನಿತರ ಔಷಧೀಯ ಸಸ್ಯಗಳನ್ನು ಇಲ್ಲಿನ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಜೂನ್ 15 ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಭುಜಂಗ ಪಾರ್ಕಿನಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.  

ಐಸಿಐಸಿಐಯಿಂದ 1200 ಕೋಟಿ ಆರ್ಥಿಕ ನೆರವು ಟಾಟಾ ಸ್ಮಾರಕ ಕೇಂದ್ರದ ಮಡಿಲಿಗೆ

ಮುಂಬೈ: ಟಾಟಾ ಸ್ಮಾರಕ ಕೇಂದ್ರಕ್ಕೆ ಐಸಿಐಸಿಐ 1200 ಕೋಟಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಟಾಟಾ ಸ್ಮಾರಕ ಕೇಂದ್ರಕ್ಕೆ (ಟಿಎಂಸಿ) 1,200 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಐಸಿಐಸಿಐ ಬ್ಯಾಂಕ್ ಘೋಷಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಸೇರಿದಂತೆ ಮೂರು ಪ್ರದೇಶಗಳಲ್ಲಿ ಟಿಎಂಸಿಯ ಕ್ಯಾನ್ಸರ್ ಆಸ್ಪತ್ರೆಗಳ ವಿಸ್ತರಣೆಗೆ ಈ ಹಣವನ್ನು ನೀಡುವುದಾಗಿ ಅದರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಇಲಾಖೆ ಹೇಳಿದೆ. ವಿಸ್ತರಣೆಯು ನವಿ ಮುಂಬೈನ ಖಾರ್ಘರ್‌ನಲ್ಲಿರುವ ಕ್ಯಾನ್ಸರ್‌ನಲ್ಲಿನ ಚಿಕಿತ್ಸೆ […]

Udupi:ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://g.co/kgs/dW2VsH https://instagram.com/ange_lsfitness?igshid=MzRlODBiNWFlZA==

ಮನೆಯ ಕೈತೋಟದಲ್ಲಿ ಬೆಳೆಯುವ ಚೆಂಗುಲಾಬಿ ಹೂವಿನಲ್ಲಿದೆ ಸ್ವಸ್ಥ ಮೈನಸ್ಸು ಮತ್ತು ಸೌಂದರ್ಯದ ಗುಟ್ಟು!

ಗುಲಾಬಿ ಹೂವು ನೀವು ಎಂದೂ ಯೋಚಿಸಿರದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೆ? ಮನೆಯ ಹೂದೋಟಗಳಲ್ಲಿ ತಣ್ಣನೆ ನಸುನಗುತ್ತಾ ನಿಂತಿರುವ ಈ ಹೂವು ನಿಮ್ಮ ದೇಹ, ಮನಸ್ಸು ಮತ್ತು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸೌಂದರ್ಯಪ್ರಸಾಧನಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಗುಲಾಬಿಯು ತಾನು ಎಷ್ಟು ಚೆಲುವುಳ್ಳ ಹೂವಾಗಿದೆಯೋ ಅದನ್ನು ತಲೆಯಲ್ಲಿ ಮುಡಿಯುವುದರಿಂದ ಹೆಂಗಳೆಯರ ಚೆಲುವು ಹೇಗೆ ಇಮ್ಮಡಿಸುತ್ತದೋ ಅಂತೆಯೆ ಗುಲಾಬಿಯನ್ನು ನಿಯಮಿತವಾಗಿ ಮತ್ತು ಹಿತಮಿತವಾಗಿ ಬಳಸಿದಲ್ಲಿ ದೇಹ ಮತ್ತು […]

ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್‌, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]