ಪರ್ಯಾಯ ಶ್ರೀಪಾದರಿಂದ “ಕೋಟಿ ತುಳಸಿ ಅರ್ಚನೆ” ಯ ಕರಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಅನುಜ್ಞೆಯ ಮೇರೆಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ಉಡುಪಿಯ ರಾಜಾಂಗಣದಲ್ಲಿ ಡಿ.31 ರವಿವಾರದಂದು ನಡೆಯಲಿರುವ ಋಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ “ಕೋಟಿ ತುಳಸಿ ಅರ್ಚನೆ”ಯ ಆಮಂತ್ರಣ ಪತ್ರಿಕೆ ಹಾಗೂ ಈ ಬಗ್ಗೆ ಶ್ರೀಮಠದಿಂದ ಪ್ರಕಟಿತ ಮನವಿಯ ಕರಪತ್ರವನ್ನು ಪರ್ಯಾಯ ಮಠದ ಪರಮ […]

ನಾಳೆ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಅನ್ನಸಂತರ್ಪಣೆ

ಕಾಪು: ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಜರಗುವ ಚಂಡಿಕಾಯಾಗ ಪೂರ್ಣಾಹುತಿಯು ಅ. 31ರಂದು ನಡೆಯಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಪ್ರಾರ್ಥನೆ, 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, ಮಧ್ಯಾಹ್ನ 12ಗಂಟೆಗೆ ಅನ್ನಸಂತರ್ಪಣೆ, ಸಂಜೆ 3ಗಂಟೆಗೆ ದರ್ಶನ ಸೇವೆ ನಡೆಯಲಿದೆ ಎಂದು ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್‌ ಜಿ. ಶೆಣೈ ಮತ್ತು ಕಾಪು ಪೇಟೆಯ ಹತ್ತು ಸಮಸ್ತರ ಜಂಟಿ ಪ್ರಕಟನೆ ತಿಳಿಸಿದೆ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ದಸರಾ ವೈಭವದ ಶೋಭಾಯಾತ್ರೆ: ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಜರಗಿದ ವೈಭವದ ಶೋಭಾ ಯಾತ್ರೆಗೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮಂಗಳವಾರ ಸಂಜೆ ಗಣ್ಯರ ಜೊತೆಗೂಡಿ ಚಾಲನೆ ನೀಡಿದರು. ಪ್ರಧಾನ ಅರ್ಚಕ ವೇ| ಮೂ|ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾ ಮಂಗಳಾರತಿ ಬೆಳಗಿ, ವಿಸರ್ಜನಾ ಪೂಜೆ ನಡೆಸಿದರು. ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ […]

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.24ರಂದು ವಿಜಯದಶಮಿ ಆಚರಣೆ.

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿ, ದೇವರ ಪ್ರಸಾದವನ್ನು ಪಡೆದರು. ಶ್ರೀ ಕ್ಷೇತ್ರದಲ್ಲಿ ಅ.23ರಂದು ರಾತ್ರಿ ಶಾರದಾ ವಿಸರ್ಜನೆ, ಕನ್ನಿಕಾ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಅ.24ರಂದು ವಿಜಯದಶಮಿ ಆಚರಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ಕಟ್ಟೆರವಿರಾಜ ವಿ. ಆಚಾರ್ಯ ತಿಳಿಸಿದ್ದಾರೆ.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಪೂಜೆ

ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಪೂಜಾ ಸಮಾರಂಭವು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಅ.24ರ ವರೆಗೆ ನಡೆಯಲಿದೆ. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಅಮ್ಮನವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಗೋವಿಂದರಾಜು ಎಸ್. ಕಾರ್ಯನಿರ್ವಹಣಾಧಿಕಾರಿ, ಹೆಚ್.ಧನಂಜಯ ಶೆಟ್ಟಿ ಅಧ್ಯಕ್ಷರು ಹೆಚ್.ಸುರೇಂದ್ರ ಶೆಟ್ಟಿ ಅನುವಂಶಿಕ ಮುಕ್ತೇಸರ, ಹೆಚ್. ಪ್ರಭಾಕರ ಶೆಟ್ಟಿ ಅನುವಂಶಿಕ ಮುಕ್ತೇಸರ, ಹೆಚ್.ಶಂಭು ಶೆಟ್ಟಿ ಅನುವಂಶಿಕ ಮುಕ್ತೇಸರ,‌ ಆರ್. ಶ್ರೀನಿವಾಸ ಶೆಟ್ಟಿ ಅನುವಂಶಿಕ […]