ಸೆ.29: ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ; ಭೋಜನ ಶಾಲೆ ಉದ್ಘಾಟನೆ

ಉಡುಪಿ: ಜಿಲ್ಲೆಯ ಪ್ರಸಿದ್ದ ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸೆ. 29ರಂದು ಭೋಜನ ಶಾಲೆ ಉದ್ಘಾಟನೆ ಮತ್ತು ಸಮಗ್ರ ಜೀರ್ಣೋದಾರಕ್ಕೆ ದಾರು ಹಾಗೂ ಶಿಲಾ ಮುಹೂರ್ತ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜನಪ್ರತಿನಿಧಿಗಳು, ಹಾಗೂ‌ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಶರನವರಾತ್ರಿ ಮಹೋತ್ಸವ: ಶ್ರೀ ಕ್ಷೇತ್ರದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 8 ರವರೆಗೆ ಶರನವರಾತ್ರಿ ಮಹೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಗಳು ಪ್ರತಿನಿತ್ಯ […]

ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ.29-ಅ8ರ ವರೆಗೆ ಸಂಭ್ರಮದ ನವರಾತ್ರಿ ಉತ್ಸವ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ನವರಾತ್ರಿ ಉತ್ಸವವು ಶ್ರೀವಿಕಾರಿ ನಾಮಸಂವತ್ಸರದ ಅಶ್ವಯುಜ ಶುದ್ಧ ಪ್ರತಿಪದಿ ಸೆಪ್ಟೆಂಬರ್ 29ರಿಂದ ಪ್ರಾರಂಭಗೊಂಡು ಅಶ್ವಯುಜ ಶುದ್ಧ ದಶಮಿ ಅಕ್ಟೋಬರ್ 8ರವರೆಗೆ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನವರಾತ್ರಿಯ ಪ್ರಯುಕ್ಯ ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಸುತ್ತುಬಲಿ ನಡೆಯುತ್ತದೆ. ಅ.5ರಂದು ರಾತ್ರಿ ಶಾರದಾ ದೇವಿಯ ಪ್ರತಿಷ್ಠಾಪನಾ ಕಾರ್ಯ ಹಾಗೂ ವಿಶೇಷ ಪೂಜಾ ಕೈಂಕರ್ಯಗಳಿವೆ. ಅ. […]

ಶ್ರೀ ಕೃಷ್ಣ ಮಠದಲ್ಲಿ ಅನಂತನ ಚತುರ್ದಶಿ ಅಲಂಕಾರ: ಸಂಭ್ರಮದ ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಅನಂತನ ವೃತದ ಪ್ರಯುಕ್ತ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನಂತಪದ್ಮನಾಭ ದೇವರ ಅಲಂಕಾರ ಮಾಡಿದರು,ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸಿದರು.  

ಶ್ರೀ ಕೃಷ್ಣ ಮಠದಲ್ಲಿ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ ಉದ್ಘಾಟನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ,ಇವರ ಆಶ್ರಯದಲ್ಲಿ ನೃತ್ಯನಿಕೇತನ,ಉಡುಪಿ ಇವರು ಅರ್ಪಿಸುವ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ – 2019 ವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥಶ್ರೀಪಾದರು ಮತ್ತು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟಿಸಿದರು,ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ,ನೃತ್ಯನಿಕೇತನದ ನಿರ್ದೇಶಕಿ ಲಕ್ಷ್ಮಿ ಗುರುರಾಜ್ ಕೊಡವೂರ್ ಮೊದಲಾದವರು ಉಪಸ್ಥಿತರಿದ್ದರು.