ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವ: ಫೆ.13ಕ್ಕೆ ಮನ್ಮಹಾರಥೋತ್ಸವ, ಫೆ‌.14ಕ್ಕೆ ದೀಪೋತ್ಸವ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವ ನಾಳೆಯಿಂದ ಫೆ.15ರ ವರೆಗೆ ದೇವಳದ ಸನ್ನಿಧಿಯಲ್ಲಿ ನಡೆಯಲಿದೆ. ಫೆ.12ರಂದು ಕುಂಭ ಸಂಕ್ರಮಣ, ಕೆಂಡಸೇವೆ. ಫೆ.13ರಂದು ಮನ್ಮಹಾರಥೋತ್ಸವ, ಫೆ. 14ರಂದು ದೀಪೋತ್ಸವ, ಐದು ಮೇಳದವರಿಂದ ಯಕ್ಷಗಾನ ಸೇವೆ ಆಟ ಜರುಗಲಿದೆ. ಸೂಚನೆ: ಫೆ. 12ರ ಶನಿವಾರ ರಾತ್ರಿ ಗಂಟೆ 8 ರ ವರೆಗೆ ಮಾತ್ರ ದೇವರ ದರ್ಶನ ಹಾಗೂ ಸೇವೆಗಳಿಗೆ ಅವಕಾಶ ಇರುತ್ತದೆ. ಕೆಂಡಸೇವಾ ನಂತರ ಸೇವೆಗಳಿಗೆ ಅವಕಾಶವಿರುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ. ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ, […]

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ನಾಣ್ಯ ತುಲಾಭಾರ

ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರು ಆಗಿರುವ ಉಡುಪಿ ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಮಂಡ್ಯ ಮದ್ದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಭಕ್ತರು ಅಭಿಮಾನಿಗಳು ನಾಣ್ಯ ತುಲಾಭಾರ ನೆರವೇರಿಸಿ ಅಭಿವಂದಿಸಿದರು. ಇದಕ್ಕೂ ಮೊದಲು ಶ್ರೀಗಳು ಮಠದ ಪಟ್ಟದ ದೇವರ ಪೂಜೆ ಹಾಗೂ ಹೊಳೆ ಆಂಜನೇಯನಿಗೆ ಪಂಚಾಮೃತ ಅಭಿಷೇಕ ಸಹಿತ ಪೂಜೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಎರಡು ವರ್ಷಗಳಿಂದ ನಿತ್ಯ ಯಾಗ; ದೇಶದ ಸುಭಿಕ್ಷೆ ಸಮೃದ್ಧಿಗಾಗಿ ಋಗ್ವೇದ ಸಂಹಿತಾ ಯಾಗ

ಉಡುಪಿ ಜಿಲ್ಲೆಯ ಕಾಪು ಹೋಬಳಿ ವ್ಯಾಪ್ತಿಯ ಅಡ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ವೇದ ವಿದ್ವಾಂಸರೊಬ್ಬರು ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ದೇಶಕ್ಕೆ ಕ್ಷೇಮ‌ ಸುಭಿಕ್ಷೆ ಸಮೃದ್ಧಿ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತ್ಯಂತ ಶ್ರದ್ಧೆಯಿಂದ ಋಗ್ವೇದ ಸಂಹಿತಾ ಯಾಗವು ಶುಕ್ರವಾರ ಸಂಪನ್ನಗೊಂಡಿದೆ. ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃವಾಗಿದ್ದು ಈಗಾಗಲೇ ಬಾರಿ ಲೋಕದ ಒಳಿತಿಗಾಗಿ ಒಂಭತ್ತು ಬಾರಿ ಋಕ್ ಸಂಹಿತಾಯಾಗವನ್ನು ನಡೆಸಿದ್ದು ಈ ಬಾರಿ […]

ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಮಂಗಳೂರಿನಂತಹ ತೆಂಕು ತಿಟ್ಟಿನ ಯಕ್ಷ ಕ್ಷೇತ್ರದಲ್ಲಿ ಬಡಗಿನ ಯಕ್ಷಗಾನ ಅಭ್ಯಾಸಕ್ಕೆ ವೇದಿಕೆ ಒದಗಿಸುವ ಮೂಲಕ, ಮಂಗಳೂರಿನ ಯಕ್ಷಾಭಿನಯ ಬಳಗ ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನಾರ್ಹ ಎಂದು ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಮಂಗಳೂರು ಪುರಭವನದಲ್ಲಿ ಇದೇ ಜನವರಿ 13ರಂದು ನಡೆದ ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಇಷ್ಟು ಜನ ಆಸಕ್ತರಿಗೆ ಯಕ್ಷಾಭ್ಯಾಸ ನೀಡುವ […]

ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ಪ್ರಮುಖ ಯೋಜನೆಗಳ ಕೇಂದ್ರಕಾರ್ಯಾಲಯ ಉದ್ಘಾಟನೆ.

ಉಡುಪಿ: ಬರುವ 2024-25 ರಲ್ಲಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ನಿಮಿತ್ತವಾಗಿ ಸಂಕಲ್ಪಿಸಿರುವ ಪ್ರಮುಖ ಯೋಜನೆಗಳ ಕಾರ್ಯಾಲಯ “ಅಂತರ್ಯಾಮಿ” ಕೇಂದ್ರವನ್ನು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪರ್ಯಾಯದ ಪ್ರಮುಖ ಯೋಜನೆಯಾದ ಕೋಟಿಗೀತಾಲೇಖನ ಯಜ್ಞದ ಅಭಿಯಾನಕ್ಕೂ ಪೂಜ್ಯ ಶ್ರೀಪಾದರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ನಾಗರಾಜ ಆಚಾರ್ಯ, ಶ್ರೀ ಪ್ರಸನ್ನ ಆಚಾರ್ಯ, ಶ್ರೀರತೀಶ್ ತಂತ್ರಿ, […]