ಬ್ರಹ್ಮಾವರ: “ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ

ಬ್ರಹ್ಮಾವರ: ಬೈಕಾಡಿ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಮತ್ತು ಬ್ರಹ್ಮಾವರ ದಿಮ್ಸಾಲ್ ನಾಟಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಎಸ್. ಎಮ್. ಎಸ್ ಮಕ್ಕಳ ಮಂಟಪದಲ್ಲಿ, ಫೆ.26 ಶನಿವಾರ ಸಂಜೆ 6.15 ಕ್ಕೆ ರಂಗಾಯಣ ಶಿವಮೊಗ್ಗ ಪ್ರಸ್ತುತಪಡಿಸುವ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನ ಗೊಳ್ಳಲಿದೆ.

ಫೆ.25, 26, 27: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ

ಉಡುಪಿ: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ಡಾ. ನಿ. ಮುರಾರಿ ಬಲ್ಲಾಳ್ ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ಮುರಾರಿ-ಕೆದ್ಲಾಯ ರಂಗೋತ್ಸವವು ಫೆಬ್ರವರಿ 25, 26, 27 ಪ್ರತಿದಿನ ಸಂಜೆ ಗಂಟೆ 7ಕ್ಕೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿಲಿದೆ.ಫೆ. 25 ಶುಕ್ರವಾರ ಸಂಜೆ ಗಂಟೆ 6.15ಕ್ಕೆ ರಂಗೋತ್ಸವದ ಉದ್ಘಾಟನೆಯನ್ನು ಖ್ಯಾತ ಯುವ ರಂಗ ನಿರ್ದೇಶಕರಾದ ಶ್ರೀ ಲಕ್ಷಣ ಕೆ.ಪಿ. ನೆಲಮಂಗಲ ಇವರು ಮಾಡಲಿರುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. […]

ದೆಹಲಿ ಪೇಜಾವರ ಮಠದಲ್ಲಿ 17 ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ; ಪೇಜಾವರ ಶ್ರೀ ಭಾಗಿ

ನವದೆಹಲಿಯ ವಸಂತ್ ಕುಂಜ್ ನಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಉಡುಪಿ ಶ್ರೀ ಕೃಷ್ಣ ಧಾಮದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವು ಅತ್ಯಂತ ವೈಭವದಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು. ಉತ್ತರ ಭಾರತದಲ್ಲಿ ತತ್ವಜ್ಞಾನ ಪ್ರಸಾರಕ್ಕಾಗಿ ಸ್ಥಾಪಿತವಾದ ಗುರುಕುಲದಲ್ಲಿ ಸುಮಾರು 40ಕ್ಕೂ ಅಧಿಕ ವಿಪ್ರ ಬಾಲಕರುಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಹಲವು ಅಧ್ಯಾಪಕರು ಅಧ್ಯಾಪನವನ್ನು ನಡೆಸುತ್ತಿದ್ದಾರೆ. ಈ ಧಾರ್ಮಿಕ ವಿಧಿಯ ನೇತೃತ್ವವನ್ನು ಶ್ರೀ ಮಠದ ವ್ಯವಸ್ಥಾಪಕರಾದ ವಿದ್ವಾನ್ ದೇವಿಪ್ರಸಾದ ಆಚಾರ್ಯರು […]

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ

ಉಡುಪಿ:‌ ಕಲ್ಮಾಡಿ ಶ್ರೀ ಬ್ರಹ್ಮಬೈದೇರುಗಳ ಗರೋಡಿ ಇದರ 2021-24ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಆಮೀನ್ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರು: ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷರು: ಶಶಿಧರ ಎಂ. ಅಮೀನ್ ವಡಬಾಂಡೇಶ್ವರ ಮತ್ತು ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ: ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ: ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ: ಎ.ಶಿವಕುಮಾರ್ ಅಂಬಲಪಾಡಿ, ಜತೆ ಕಾರ್ಯದರ್ಶಿ: ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಜತೆ ಕೋಶಾಧಿಕಾರಿ: ವಿನಯ್ ಕುಮಾರ್ ಕಲ್ಮಾಡಿ, ಆಡಳಿತ […]

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ರಥೋತ್ಸವ ಸಂಭ್ರಮ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಕೆಂಡೋತ್ಸವ, ರವಿವಾರ ಶ್ರೀ ಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು. ಶನಿವಾರದಂದು ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ ನೆರವೇರಿತು. ರವಿವಾರ ಮಧ್ಯಾಹ್ನ ರಥಾವರೋಹಣ, ತಾಲೀಮು, ಸಂಜೆ ರಥೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ ನೆರವೇರಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾರು ಪಾಲ್ಗೊಂಡಿದರು. ಕೆಂಡಸೇವೆ ಮತ್ತು ರಥೋತ್ಸವ ಪ್ರಯುಕ್ತ ಮಹಾ ಅನ್ನಸಂತರ್ಪಣೆ ಜರಗಿತು. ಕಾರ್ಯನಿರ್ವಹಣ ಅಧಿಕಾರಿ ಎಸ್.ಪಿ.ಬಿ. ಮಹೇಶ, ಅನುವಂಶಿಕ ಮೊಕ್ತೇಸರರಾದ ಧನಂಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಎಚ್. ಶಂಭು […]