“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ

ಬ್ರಹ್ಮಾವರ: “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಹಾಗೂ ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡ ರಂಗಾಯಣ ಶಿವಮೊಗ್ಗ ಇವರ “ವಿ ದ ಪೀಪಲ್ ಆಫ್ ಇಂಡಿಯ” ನಾಟಕವು ಫೆ.26 ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಪ್ರದರ್ಶನಗೊಂಡಿತು. ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು “ಎರಡುವರೆ ಸಾವಿರ ವರ್ಷಗಳಿಂದ ನಾವು ಜಾತಿ, ಧರ್ಮ, ಭಾಷಾ ವ್ಯಕ್ತಿ, ಪ್ರಾದೇಶಿಕ ವ್ಯಕ್ತಿಗಳಾಗಿ ಬದುಕಿದ್ದೀವಿ ಇದೆಲ್ಲವನ್ನೂ […]
ಫೆ.27ರಂದು ‘ಅರೆಹೊಳೆ ಯಕ್ಷ ಸಂಜೆ’ -2022

ಅರೆಹೊಳೆ ಪ್ರತಿಷ್ಠಾನವು ಫೆಬ್ರವರಿ 27ರ ಭಾನುವಾರ ಸಂಜೆ 2.30ರಂದು ಕೆಂಜುರು ಸಮೀಪದ ಬಲ್ಲೇಬೈಲ್ಲಿನಲ್ಲಿ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಂದಗೋಕುಲ ಯಕ್ಷಗಾನ ತರಬೇತಿ ಕೇಂದ್ರದ ಅರೆಹೊಳೆ ಯಕ್ಷ ಸಂಜೆ 2022ರನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಶ್ರೀ ಐರೋಡಿ ಮಂಜುನಾಥ ಕುಲಾಲ್ ಯೆಡ್ತಾಡಿ ಇವರಿಗೆ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ ಪ್ರಧಾನಿಸಲಾಗುವುದು. ಈ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ ಲಂಕಿಣಿ ಮೋಕ್ಷ ಪ್ರಾತ್ಯಕ್ಷಿಕೆಗಳು ಯಕ್ಷಗಾನ ಗುರು ಮಿಥುನ ಹಂದಾಡಿ ಅವರ ನಿರ್ದೇಶನದಲ್ಲಿ […]
ಬ್ರಹ್ಮಾವರ: “ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ

ಬ್ರಹ್ಮಾವರ: ಬೈಕಾಡಿ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಮತ್ತು ಬ್ರಹ್ಮಾವರ ದಿಮ್ಸಾಲ್ ನಾಟಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಎಸ್. ಎಮ್. ಎಸ್ ಮಕ್ಕಳ ಮಂಟಪದಲ್ಲಿ, ಫೆ.26 ಶನಿವಾರ ಸಂಜೆ 6.15 ಕ್ಕೆ ರಂಗಾಯಣ ಶಿವಮೊಗ್ಗ ಪ್ರಸ್ತುತಪಡಿಸುವ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಪ್ರದರ್ಶನ ಗೊಳ್ಳಲಿದೆ.
ಫೆ.25, 26, 27: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ

ಉಡುಪಿ: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ಡಾ. ನಿ. ಮುರಾರಿ ಬಲ್ಲಾಳ್ ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ಮುರಾರಿ-ಕೆದ್ಲಾಯ ರಂಗೋತ್ಸವವು ಫೆಬ್ರವರಿ 25, 26, 27 ಪ್ರತಿದಿನ ಸಂಜೆ ಗಂಟೆ 7ಕ್ಕೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿಲಿದೆ.ಫೆ. 25 ಶುಕ್ರವಾರ ಸಂಜೆ ಗಂಟೆ 6.15ಕ್ಕೆ ರಂಗೋತ್ಸವದ ಉದ್ಘಾಟನೆಯನ್ನು ಖ್ಯಾತ ಯುವ ರಂಗ ನಿರ್ದೇಶಕರಾದ ಶ್ರೀ ಲಕ್ಷಣ ಕೆ.ಪಿ. ನೆಲಮಂಗಲ ಇವರು ಮಾಡಲಿರುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. […]
ದೆಹಲಿ ಪೇಜಾವರ ಮಠದಲ್ಲಿ 17 ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ; ಪೇಜಾವರ ಶ್ರೀ ಭಾಗಿ

ನವದೆಹಲಿಯ ವಸಂತ್ ಕುಂಜ್ ನಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಉಡುಪಿ ಶ್ರೀ ಕೃಷ್ಣ ಧಾಮದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವು ಅತ್ಯಂತ ವೈಭವದಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು. ಉತ್ತರ ಭಾರತದಲ್ಲಿ ತತ್ವಜ್ಞಾನ ಪ್ರಸಾರಕ್ಕಾಗಿ ಸ್ಥಾಪಿತವಾದ ಗುರುಕುಲದಲ್ಲಿ ಸುಮಾರು 40ಕ್ಕೂ ಅಧಿಕ ವಿಪ್ರ ಬಾಲಕರುಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಹಲವು ಅಧ್ಯಾಪಕರು ಅಧ್ಯಾಪನವನ್ನು ನಡೆಸುತ್ತಿದ್ದಾರೆ. ಈ ಧಾರ್ಮಿಕ ವಿಧಿಯ ನೇತೃತ್ವವನ್ನು ಶ್ರೀ ಮಠದ ವ್ಯವಸ್ಥಾಪಕರಾದ ವಿದ್ವಾನ್ ದೇವಿಪ್ರಸಾದ ಆಚಾರ್ಯರು […]