ಆ.31: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ
ಕುಂದಾಪುರ: ಕುಂದಾಪುರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ವಿನಾಯಕ ಚತುರ್ಥಿಯ ಪ್ರಯುಕ್ತ ಆ.31 ರಂದು ಅಷ್ಟೋತ್ತರ ಸಹಸ್ರ ನಾಲಿಕೇರ ಗಣಪತಿ ಯಾಗ ಜರಗಲಿದೆ. ಆ.30 ಮತ್ತು 31 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಪಾಲಕೃಷ್ಣನಾಗಿ ಅಲಂಕೃತಗೊಂಡ ದೊಡ್ಡಣ್ಣ ಗುಡ್ಡೆ ಆದಿಶಕ್ತಿ ದುರ್ಗಾದೇವಿ
ದೊಡ್ಡಣ್ಣಗುಡ್ಡೆ: ಪ್ರಥಮ ಸೋಣ ಶುಕ್ರವಾರದಂದು, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಪಾಲಕೃಷ್ಣನಾಗಿ ಅಲಂಕೃತಗೊಂಡು ಭಕ್ತರನ್ನು ಅನುಗ್ರಹಿಸಿದ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ಆನಂದ ಬಾಯರಿ ಸ್ವಸ್ತಿಕ ಆಚಾರ್ಯ, ಅನೀಶ್ ಆಚಾರ್ಯ ಈ ಮನಮೋಹಕ ಅಲಂಕಾರವನ್ನು ಮಾಡಿದ್ದರು.
ಶ್ರೀರಾಘವೇಂದ್ರ ಮಠದಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ 4 ನೇ ವರ್ಷದ ಆರಾಧನೆ
ಉಡುಪಿ ಶ್ರೀಶಿರೂರು ಮಠದ ಯತಿಗಳಾದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 4 ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಮಠದಲ್ಲಿ ಶಾಸ್ತ್ರೋಕ್ತವಾಗಿ ವೈಭವದಿಂದ ಜರಗಿತು. ಮುಂಜಾನೆ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಉದ್ದಿಶ್ಯ ಶ್ರೀಪಾದರ ಪೂರ್ವಾಶ್ರಮದ ಕುಟುಂಬಿಕರು ಹಾಗೂ ಭಕ್ತವೃಂದದ ವತಿಯಿಂದ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವೇದಮೂರ್ತಿ ಶ್ರೀಸುಬ್ರಹ್ಮಣ್ಯ ಆಚಾರ ಮತ್ತು ಬಳಗದವರಿಂದ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು. ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಮೃತ್ತಿಕಾವೃಂದಾವನಕ್ಕೆ ಶ್ರೀಕೃಷ್ಣಮುಖ್ಯ ಪ್ರಾಣದೇವರ ಹಾಗೂ ಶ್ರೀ ರಾಘವೇಂದ್ರಗುರುಗಳ ತೀರ್ಥ, ಪಂಚಾಮೃತ […]
ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಇಲಾಖೆ: ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಆಹ್ವಾನ
ಉಡುಪಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಸಂಸ್ಥೆಗಳ 7 ಅಧಿಸೂಚಿತ ಸಂಸ್ಥೆಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಸಾರ್ವಜನಿಕರು ಹಾಗೂ ಭಕ್ತಾಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚಿತ ಸಂಸ್ಥೆಗಳು: ಉಡುಪಿ ತಾಲೂಕು ಕುಂಜೂರು ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಮರ್ಣೆ ಶ್ರೀ ಅಬ್ಬಗದಾರಗ ಬೂತ ದೇವಸ್ಥಾನ, ಕುಂದಾಪುರದ ಹಾರ್ದಳ್ಳಿ- ಮಂಡಳ್ಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕಂಬದಕೋಣೆ ಶ್ರೀ ಕೊಕ್ಕೇಶ್ವರ […]
ಮರವಂತೆ: ಜುಲೈ 28ರಂದು ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ “ಕರ್ಕಾಟಕ ಅಮಾವಾಸ್ಯೆ ಜಾತ್ರೆ”
ಕುಂದಾಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಮರವಂತೆ ಬೈಂದೂರು ತಾಲೂಕುನಲ್ಲಿ ವರ್ಷಂಪ್ರತಿ ಶ್ರೀ ವರಾಹ ದೇವರ ಸನ್ನಿಧಿಯಲ್ಲಿ ನಡೆಯಲಿರುವ “ಕರ್ಕಾಟಕ ಅಮಾವಾಸ್ಯೆ ಜಾತ್ರೆ” ಯು ಇದೇ ತಾ.28-07-2022ನೇ ಗುರುವಾರ ಜರುಗಲಿರುವ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ, ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸಹಕರಿಸಿ, ಶ್ರೀದೇವರ ಸಿರಿಮುಡಿ ಗಂಧ- ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ ದೇವಸ್ಥಾನದ ಅರ್ಚಕರು ಉಪಾದಿವಂತರು, ನೌಕರ ವರ್ಗ ಮತ್ತು ಆಸುಪಾಸಿನ ಊರಿನ ಗ್ರಾಮಸ್ಥರು ಸತೀಶ ಎಂ. ನಾಯಕ ವ್ಯವಸ್ಥಾಪನಾ ಸಮಿತಿಯ […]