ನಂಚಾರು ಗೋಶಾಲೆಯಲ್ಲಿ ಗೋಗ್ರಾಸ ಸಮರ್ಪಣೆ

ಬ್ರಹ್ಮಾವರ: ಅನಾಥ, ರಕ್ಷಣೆಯಿಲ್ಲದ, ವಯಸ್ಸಾದ ಗೋವುಗಳ ರಕ್ಷಣೆ ನೋಡಿ ಹೃದಯ ತುಂಬಿ ಬಂದಿದೆ. ಆಶ್ರಮದಲ್ಲಿ 150ಕ್ಕೂ ಮಿಕ್ಕಿ ಹಸುಗಳು ನೆಮ್ಮದಿಯಾಗಿರುವುದನ್ನು ಕಂಡು ಸಂತುಷ್ಟನಾಗಿದ್ದೇನೆ. ಅನಾಥ ಗೋವುಗಳ ರಕ್ಷಣೆ, ಅವುಗಳಿಗೆ ಸಹಕಾರ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಂದು ಶೃಂಗೇರಿ ಶಾರದಾ ಪೀಠ ಕಿರಿಯ ಯತಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.ಬ್ರಹ್ಮಾವರ ತಾಲೂಕು ನೆಂಚಾರು ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಆಶ್ರಮಕ್ಕೆ ಭಾನುವಾರ ಭೇಟಿ, ಗೋ ಆಶ್ರಮ ಸಂದರ್ಶನ, ಗೋಗ್ರಾಸ ಸಮರ್ಪಣೆ ಬಳಿಕ ನಡೆದ […]

ಮಾ.22 ರಿಂದ 24: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧ್ವಜ ಪ್ರತಿಷ್ಠೆ ಮತ್ತು ಧೂಳಿ ಮಂಡಲ ಸೇವೆ: ಡಾ. ಕಟ್ಟೆ ರವಿರಾಜ ವಿ. ಆಚಾರ್ಯ

ಉಡುಪಿ: ಸುಮಾರು 1500 ವರ್ಷಗಳ ಇತಿಹಾಸವಿರುವ ಇತ್ತೀಚಿಗೆ ವೈಭವದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಸುಮಾರು 9 ಕೋಟಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾರ್ಚ್ 22 ರಿಂದ 24ರ ತನಕ ನೂತನ ಧ್ವಜ ಸ್ತಂಭ ಪ್ರತಿಷ್ಠೆ ಮತ್ತು ಧೂಳಿ ಮಂಡಲ ಸೇವೆ ಜರಗಲಿರುವುದು ಎಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ ವಿ ಆಚಾರ್ಯ ತಿಳಿಸಿದ್ದಾರೆ. ಮಾರ್ಚ್ 21 ಹಸಿರು ಹೊರಕಾಣಿಕೆ ಮಾರ್ಚ್ 21ರ ಮಂಗಳವಾರ […]

ಮಕ್ಕಳಲ್ಲಿ ಧಾರ್ಮಿಕ‌ ಭಕ್ತಿ, ಶ್ರದ್ಧೆ ಬೆಳೆಸಿ ಸನ್ಮಾರ್ಗದಲ್ಲಿ ಮುನ್ನಡೆಸಿ: ವಿಧುಶೇಖರ ಭಾರತೀ ಸ್ವಾಮೀಜಿ

ಬ್ರಹ್ಮಾವರ: ಮಕ್ಕಳಲ್ಲಿ ಧಾರ್ಮಿಕ ಭಕ್ತಿ, ಶ್ರದ್ಧೆ ಬೆಳೆಸಿ, ಸನ್ಮಾರ್ಗದಲ್ಲಿ ಮುನ್ನಡೆಸಿ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು. ಅವರು ಸೋಮವಾರ ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಮಕ್ಕಿತೋಟ ಮನೆಯ ಗೌರಿ ವಿಟ್ಠಲ್ ಶೆಟ್ಟಿ ಮತ್ತು ಕುಟುಂಬಸ್ಥರು ನೀಡಿದ ನೂತನ ಬ್ರಹ್ಮರಥವನ್ನು ಲೋಕಾರ್ಪಣೆಗೊಳಿಸಿ ವಿಶೇಷ ರಥೋತ್ಸವದಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು. ಶೃಂಗೇರಿ ಪೀಠದ ಆಡಳಿತಾಧಿಕಾರಿ ಡಾ| ಗೌರೀಶಂಕರ್, ಪ್ರಾಂತೀಯ ಅಧಿಕಾರಿಗಳಾದ ವಾಗೀಶ ಶಾಸ್ತ್ರಿ, ಲೋಕೇಶ ಅಡಿಗ, ನೀಲಾವರ ದೇವಳದ ವ್ಯವಸ್ಥಾಪನಾ […]

ಮಾ.20ರ ವರೆಗೆ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಾ.13 ರಿಂದ 20ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಮಾ.13 ಸೋಮವಾರ                                    ರಾತ್ರಿ ಭೇರಿತಾಡನ, ಮೃತ್ತಿಕಾ ಸಂಗ್ರಹ, ಅಂಕುರಾರೋಪಣ ಮಾ.14 ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ, ಅಗ್ನಿಜನನ, ಪ್ರಧಾನಹೋಮ, ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ಅನ್ನಸಂತರ್ಪಣೆಯ ಸೇವಾಕರ್ತರು: ದೇವಸ್ಥಾನದ ವ್ಯವಸ್ಥಾಪನಾ […]

“ಚಿತ್ರಾಪುರದ ದೇವಿ ಭಕ್ತಿ ಸುಗಿಪು ಬಿಡುಗಡೆ”

ಮಂಗಳೂರು : ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಶ್ರೀಖಾರ್ ಮ್ಯೂಸಿಕ್ ಪ್ರೊಡಕ್ಷನ್ಸ್ ಅರ್ಪಿಸುವ “ಚಿತ್ರಾಪುರದ ದೇವಿ” ಭಕ್ತಿ ಸುಗಿಪು ಚಿತ್ರಾಪುರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಧರ್ಭ ಬಿಡುಗಡೆಗೊಳಿಸಲಾಯಿತು. ಮಂಜುಶ್ರೀ ಕಾರ್ತಿಕೇಯ ಇವರ ಕಂಠದಲ್ಲಿ ಮೂಡಿಬಂದ ಸುಮಧುರ ಗೀತೆಯ ಸಾಹಿತ್ಯವನ್ನು ಅಶೋಕ್‌ ಪೂಜಾರಿ ಮುಂಬೈ ಬರೆದಿದ್ದು, ಕೆ. ರವಿಶಂಕರ್ ಮಂಗಳೂರು ಇವರು ರಾಗ ಸಂಯೋಜನೆ ಹಾಗೂ ಸಂಗೀತ ಸಂಯೋಜನೆಯನ್ನು ಶಿನೋಯ್‌ ವಿ ಜೋಸೆಫ್ ಮಾಡಿದ್ದಾರೆ. ವರುಣ್ ರಾವ್ ಇವರ ಕೊಳಲು ವಾದನ, ರಾಜೇಶ್ ಭಾಗವತ್‌ ತಬಲ ಹಾಗೂ ಸುಮುಖ್ ಆಚಾರ್ಯ […]