ಅ.15-24: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 15 ರಿಂದ 24ರ ವರೆಗೆ ಪಾಡಿಗಾರ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಅ.15 ರಿಂದ ಪ್ರತಿ ದಿನ ಬೆಳಿಗ್ಗೆ 05:30 ಸುಪ್ರಭಾತ ಚಂಡಿಕಾ ಯಾಗ ರಾತ್ರಿ 7.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಾತ್ರಿ 8.00ಕ್ಕೆ ಕಲ್ಪೋಕ್ತಪೂಜೆ, ನವರಾತ್ರಿ ಉತ್ಸವ, ರಥೋತ್ಸವ. ಅ.16 ರಂದು ಬೆಳಿಗ್ಗೆ 7ಕ್ಕೆ ಕದಿರು ಕಟ್ಟುವುದು, ಅ.19 ರಂದು ಲಲಿತಾ ಪಂಚಮಿ, ಅ.20 ರಂದು ಶಾರದಾ ಪೂಜೆ ಆರಂಭ, ಅ. 22ರಂದು […]

ದಸರಾ ಹಬ್ಬದ ಪ್ರಯುಕ್ತ ಬಸ್ರೂರು ಮಹಾಲಸಾ ನಾರಾಯಣೀ ದೇವಾಲಯದಲ್ಲಿ ನವರಾತ್ರಿ ಮಹೋತ್ಸವ

ಬಸ್ರೂರು : ಇತಿಹಾಸ ಪ್ರಸಿದ್ಧ ಬಸ್ರೂರಿನ ಶ್ರೀ ಮಹಾಲಸಾ ನಾರಾಯಣಿ ದೇವಾಲಯದಲ್ಲಿ ಇದೇ ತಿಂಗಳ 15 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಇದೇ ತಿಂಗಳು ದಿ. 15.10.2023 ರಿಂದ ದಿ. 24.10.2023 ಮಂಗಳವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ವಿಜೃಂಭಣೆಯಿಂದ ನಡೆಯಲಿವೆ. ನವರಾತ್ರಿ ಕಾರ್ಯಕ್ರಮದ ಅಂಗವಾಗಿ ತಾ.22.10 2023 ರವಿವಾರ ಸಂಜೆ ದುರ್ಗಾಷ್ಟಮಿ ಪ್ರಯುಕ್ತ ದುರ್ಗಾನಮಸ್ಕಾರ ಸೇವೆ, 23ರಂದು ಮಹಾನವಮಿ, 24ರಂದು ವಿಜಯದಶಮಿ ಪ್ರಯುಕ್ತ ಸಂಜೆ ರಜತ ಪಲ್ಲಕ್ಕಿ ಉತ್ಸವ ಇರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ […]

ಕಿನ್ನಿಮೂಲ್ಕಿ ಕನ್ನರ್ಪಾಡಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ

ಉಡುಪಿ: ಕಿನ್ನಿಮೂಲ್ಕಿ ಕನ್ನರ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಗಣೇಶೋತ್ಸವವು ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಿತು. ಸೆ. 24ರಂದು ಗಣೇಶನ ವಿಸರ್ಜನಾ ಮೆರವಣಿಗೆಯ ಶೋಭಾ ಯಾತ್ರೆಯು ವಿವಿಧ ವೇಷಭೂಷಣ, ವೇದ ಘೋಷಗಳೊಂದಿಗೆ ಫಯರ್ ಸ್ಟೇಷನ್ ರಸ್ತೆ, ಅಜ್ಜರಕಾಡು ಪಾರ್ಕ್, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಕಿನ್ನಿಮುಲ್ಕಿ ಮುಖ್ಯ ರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರದಿಂದ ಮೂಲಕ ಸಾಗಿ ಬಂದು […]

ಅ.31ರವರೆಗೆ ವಿಸ್ತರಣೆ: ಫಾರ್ಮ್ 10ಬಿ, 10 ಬಿಬಿ, ಐಟಿಆರ್ -7 ಸಲ್ಲಿಕೆ ಗಡುವು

ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಸೋಮವಾರ (ಸೆಪ್ಟೆಂಬರ್ 18) 2022-23ರ ಹಣಕಾಸು ವರ್ಷಕ್ಕೆ ಫಾರ್ಮ್ 10 ಬಿ ಮತ್ತು ಫಾರ್ಮ್ 10 ಬಿಬಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಿದೆ. ಈ ಫಾರ್ಮ್​ಗಳು ಮೂಲತಃ ಸೆಪ್ಟೆಂಬರ್ 30, 2023 ರಂದೇ ಬರಬೇಕಿದ್ದವು. ಫಾರ್ಮ್ 10 ಬಿ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಟ್ರಸ್ಟ್​ಗಳಿಗೆ ಅನ್ವಯಿಸುತ್ತದೆ. ಇನ್ನು ಫಾರ್ಮ್ 10 ಬಿಬಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.ಫಾರ್ಮ್​ 10 ಬಿ ಮತ್ತು […]