ಗುಜರಾತ್‌ನ ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಚಹಾ ಸವಿದ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಒಂದು ಕಪ್ ಚಹಾವನ್ನು ಆನಂದಿಸಿದರು. ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ, ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು. ರೋಬೋಟಿಕ್ಸ್ ಗ್ಯಾಲರಿಯು DRDO ರೋಬೋಟ್‌ಗಳು, ಮೈಕ್ರೋಬೋಟ್‌ಗಳು, ಕೃಷಿ ರೋಬೋಟ್, ವೈದ್ಯಕೀಯ ರೋಬೋಟ್‌ಗಳು, ಸ್ಪೇಸ್ ರೋಬೋಟ್ ಮತ್ತು ಹೆಚ್ಚಿನದನ್ನು ಪ್ರದರ್ಶಿಸುತ್ತದೆ. ಈ ಆಕರ್ಷಕ ಪ್ರದರ್ಶನಗಳ ಮೂಲಕ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ದೈನಂದಿನ ಜೀವನದಲ್ಲಿ […]

16 ಕೋಟಿ ನಿವ್ವಳ ಲಾಭ ಪ್ರಥಮ ಬಾರಿಗೆ ಗಳಿಸಿದ ಓಯೋ

ನವದೆಹಲಿ: ಜಾಗತಿಕ ಟ್ರಾವೆಲ್ ಟೆಕ್ ಬ್ರಾಂಡ್ ಓಯೋ ಇದೇ ಮೊದಲ ಬಾರಿಗೆ ಲಾಭ ಗಳಿಸಿರುವುದಾಗಿ ವರದಿ ಮಾಡಿದೆ. ಹೊಟೇಲ್​​ ಕೋಣೆಗಳ ಬುಕಿಂಗ್​ ಆಯಪ್​ ಕಂಪನಿ ಇದೇ ಮೊದಲ ಬಾರಿಗೆ ಲಾಭ ದಾಖಲಿಸಿದೆ.2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ತೆರಿಗೆ ನಂತರ 16 ಕೋಟಿ ರೂಲಾಭ ಮಾಡಿರುವುದಾಗಿ ಓಯೋ ಹೇಳಿದೆ. ಕಂಪನಿಯ ಉನ್ನತ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು 2024 ರ ಎರಡನೇ ತ್ರೈಮಾಸಿಕವು ಕಂಪನಿಯ ಮೊದಲ ಲಾಭದಾಯಕ […]

ರೈಲಿನಲ್ಲಿ ಪ್ರಯಾಣಿಸಿ ರಾಹುಲ್​ ಗಾಂಧಿ ಘೋಷಣೆ : ‘ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ’

ನವದೆಹಲಿ: ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಶೀಘ್ರವೇ ನಡೆಯಲಿದ್ದು, ಪಕ್ಷದ ನಾಯಕ ರಾಹುಲ್​ ಗಾಂಧಿ ಬಿಲಾಸ್​ಪುರದಲ್ಲಿ ಪ್ರಚಾರ ಕಾರ್ಯ ಮಾಡಿದರು. ಜಾತಿ ಗಣತಿ ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ಅದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು. . ಛತ್ತೀಸ್​​ಗಢದ ಬಿಲಾಸ್​ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ […]

₹60,000 ಕೋಟಿ ‘ಗೃಹ ಸಾಲ ಸಬ್ಸಿಡಿ ಯೋಜನೆ’ಗೆ ಸರ್ಕಾರ ಗ್ರೀನ್ ಸಿಗ್ನಲ್: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ : ಕಳೆದ ತಿಂಗಳು, ಚುನಾವಣೆಗೆ ಮುಂಚಿತವಾಗಿ ಹಣದುಬ್ಬರವನ್ನ ನಿಯಂತ್ರಿಸಲು ಸರ್ಕಾರವು ಕುಟುಂಬಗಳಿಗೆ ಅಡುಗೆ ಅನಿಲ ಬೆಲೆಯನ್ನ ಸುಮಾರು 18 ಪ್ರತಿಶತದಷ್ಟು ಕಡಿತಗೊಳಿಸಿತು.ಈ ವರ್ಷದ ಕೊನೆಯಲ್ಲಿ ಪ್ರಮುಖ ರಾಜ್ಯ ಚುನಾವಣೆಗಳು ಮತ್ತು 2024ರ ಮಧ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬ್ಯಾಂಕುಗಳು ಒಂದೆರಡು ತಿಂಗಳಲ್ಲಿ ಈ ಯೋಜನೆಯನ್ನ ಹೊರತರುವ ಸಾಧ್ಯತೆಯಿದೆ. ಮುಂದಿನ ಐದು ವರ್ಷಗಳಲ್ಲಿ ಸಣ್ಣ ನಗರ ವಸತಿಗಳಿಗೆ ಸಬ್ಸಿಡಿ ಸಾಲಗಳನ್ನ ಒದಗಿಸಲು 60,000 ಕೋಟಿ (7.2 ಬಿಲಿಯನ್ ಡಾಲರ್) ಖರ್ಚು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ […]

ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ: ಹೈದರಾಬಾದ್-ಬೆಂಗಳೂರು ಮಾರ್ಗಕ್ಕೂ ರೈಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ರೈಲುಗಳ ಪ್ರಾರಂಭವು 11 ರಾಜ್ಯಗಳ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುತ್ತದೆ. ಪ್ರಧಾನಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ಇವು ವಂದೇ ಭಾರತ್ ರೈಲುಗಳ ಪ್ರಾರಂಭದಿಂದ ಪ್ರಯೋಜನ ಪಡೆಯುವ ರಾಜ್ಯಗಳು. ಈ ವಂದೇ […]