ಭಾರತೀಯರ ಮೆಚ್ಚಿನ ಆನ್ಲೈನ್​ ಪ್ಲಾಟ್​ಫಾರ್ಮ್ ಆದ ಯೂಟ್ಯೂಬ್

ನವದೆಹಲಿ: ಯೂಟ್ಯೂಬ್ ಭಾರತದಲ್ಲಿ ಪ್ರತಿ ಐವರ ಪೈಕಿ ನಾಲ್ವರ ಅತ್ಯಂತ ಮೆಚ್ಚಿನ ಆನ್ಲೈನ್ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಸ್ವತಃ ಯೂಟ್ಯೂಬ್ ಹೇಳಿಕೊಂಡಿದೆ. ಯೂಟ್ಯೂಬ್ ಭಾರತದಲ್ಲಿ ಮೆಚ್ಚಿನ ವೀಡಿಯೊ ವೀಕ್ಷಣೆಯ ತಾಣವಾಗಿ ಹೊರಹೊಮ್ಮಿದೆ.ಜಾಗತಿಕವಾಗಿ ಸರಾಸರಿ 70 ಬಿಲಿಯನ್ ದೈನಂದಿನ ವೀಕ್ಷಣೆ ಹೊಂದಿರುವ ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಯೂಟ್ಯೂಬ್​ ಶಾರ್ಟ್ಸ್​ನ ಸರಾಸರಿ ದೈನಂದಿನ ವೀಕ್ಷಣೆಗಳು ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ (ವೈಒವೈ) ಶೇಕಡಾ 120 ಕ್ಕಿಂತ ಹೆಚ್ಚಾಗಿದೆ. ಕಳೆದ 12 ತಿಂಗಳುಗಳಲ್ಲಿ 18-44 ವರ್ಷ ವಯಸ್ಸಿನವರಲ್ಲಿ 88 ಪ್ರತಿಶತದಷ್ಟು ಜನರು […]

ಸ್ಮಾರ್ಟ್​ ಸಿಟಿ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು : ಇಂದೋರ್​ ದೇಶದ ಅತ್ಯಂತ ಸ್ವಚ್ಛ ನಗರಿ

ಇಂದೋರ್​ (ಮಧ್ಯಪ್ರದೇಶ) : ಸತತ 6ನೇ ಬಾರಿ ದೇಶದ ‘ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿ ಮಧ್ಯಪ್ರದೇಶದ ಇಂದೋರ್​ ಪಾಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರಿಗೆ ಪ್ರಶಸ್ತಿಯನ್ನು ಬುಧವಾರ ನೀಡಿದರು.ಗುಜರಾತ್‌ನ ಸೂರತ್‌ ನಗರ ದ್ವಿತೀಯ, ಉತ್ತರಪ್ರದೇಶದ ಆಗ್ರ ತೃತೀಯ ಸ್ಥಾನ ಪ್ರಶಸ್ತಿ ಪಡೆಯಿತು. 2023 ನೇ ಸಾಲಿನ ದೇಶದ ಸ್ಮಾರ್ಟ್ ಸಿಟಿ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ರಾಜ್ಯವಾರು ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ.ಮಧ್ಯಪ್ರದೇಶದ ಇಂದೋರ್​ ದೇಶದ ಅತ್ಯಂತ […]

ಗುಜರಾತ್‌ನ ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಚಹಾ ಸವಿದ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಒಂದು ಕಪ್ ಚಹಾವನ್ನು ಆನಂದಿಸಿದರು. ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ, ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು. ರೋಬೋಟಿಕ್ಸ್ ಗ್ಯಾಲರಿಯು DRDO ರೋಬೋಟ್‌ಗಳು, ಮೈಕ್ರೋಬೋಟ್‌ಗಳು, ಕೃಷಿ ರೋಬೋಟ್, ವೈದ್ಯಕೀಯ ರೋಬೋಟ್‌ಗಳು, ಸ್ಪೇಸ್ ರೋಬೋಟ್ ಮತ್ತು ಹೆಚ್ಚಿನದನ್ನು ಪ್ರದರ್ಶಿಸುತ್ತದೆ. ಈ ಆಕರ್ಷಕ ಪ್ರದರ್ಶನಗಳ ಮೂಲಕ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ದೈನಂದಿನ ಜೀವನದಲ್ಲಿ […]

16 ಕೋಟಿ ನಿವ್ವಳ ಲಾಭ ಪ್ರಥಮ ಬಾರಿಗೆ ಗಳಿಸಿದ ಓಯೋ

ನವದೆಹಲಿ: ಜಾಗತಿಕ ಟ್ರಾವೆಲ್ ಟೆಕ್ ಬ್ರಾಂಡ್ ಓಯೋ ಇದೇ ಮೊದಲ ಬಾರಿಗೆ ಲಾಭ ಗಳಿಸಿರುವುದಾಗಿ ವರದಿ ಮಾಡಿದೆ. ಹೊಟೇಲ್​​ ಕೋಣೆಗಳ ಬುಕಿಂಗ್​ ಆಯಪ್​ ಕಂಪನಿ ಇದೇ ಮೊದಲ ಬಾರಿಗೆ ಲಾಭ ದಾಖಲಿಸಿದೆ.2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ತೆರಿಗೆ ನಂತರ 16 ಕೋಟಿ ರೂಲಾಭ ಮಾಡಿರುವುದಾಗಿ ಓಯೋ ಹೇಳಿದೆ. ಕಂಪನಿಯ ಉನ್ನತ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು 2024 ರ ಎರಡನೇ ತ್ರೈಮಾಸಿಕವು ಕಂಪನಿಯ ಮೊದಲ ಲಾಭದಾಯಕ […]

ರೈಲಿನಲ್ಲಿ ಪ್ರಯಾಣಿಸಿ ರಾಹುಲ್​ ಗಾಂಧಿ ಘೋಷಣೆ : ‘ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ’

ನವದೆಹಲಿ: ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಶೀಘ್ರವೇ ನಡೆಯಲಿದ್ದು, ಪಕ್ಷದ ನಾಯಕ ರಾಹುಲ್​ ಗಾಂಧಿ ಬಿಲಾಸ್​ಪುರದಲ್ಲಿ ಪ್ರಚಾರ ಕಾರ್ಯ ಮಾಡಿದರು. ಜಾತಿ ಗಣತಿ ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ಅದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು. . ಛತ್ತೀಸ್​​ಗಢದ ಬಿಲಾಸ್​ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ […]