’14 ನಿಮಿಷಗಳ ಮಿರಾಕಲ್’ ಸ್ವಚ್ಛತೆ ಆರಂಭ : ವಂದೇ ಭಾರತ್ ರೈಲು

ನವದೆಹಲಿ: ಭಾರತೀಯ ರೈಲ್ವೆಯು ಇಂದಿನಿಂದ ರೈಲುಗಳ ತ್ವರಿತ ಶುಚಿಗೊಳಿಸುವಿಕೆಗಾಗಿ ’14 ನಿಮಿಷಗಳ ಮಿರಾಕಲ್’ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಅಧಿಕೃತವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿದ್ದಾರೆ. ದೇಶಾದ್ಯಂತ 29 ವಂದೇ ಭಾರತ್ ರೈಲುಗಳಲ್ಲಿ ಅವುಗಳ ನಿಗದಿತ ನಿಲ್ದಾಣದಲ್ಲಿ ಈ ಕಾರ್ಯ ಆರಂಭವಾಗಲಿದೆ.ವಂದೇ ಭಾರತ್ ರೈಲುಗಳಲ್ಲಿ ಇಂದಿನಿಂದ 14 ನಿಮಿಷದ ಮಿರಾಕಲ್ ಸ್ವಚ್ಛತಾ ಪರಿಕಲ್ಪನೆ ಆರಂಭ. ಈಗಾಗಲೇ ಈ ಚಟುವಟಿಕೆಯಲ್ಲಿ ತೊಡಗಿರುವ ಮುಂಚೂಣಿಯಲ್ಲಿರುವ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸದೆ ಸ್ವಚ್ಛತಾ ವ್ಯಕ್ತಿಗಳ ದಕ್ಷತೆ, ಕೌಶಲ್ಯ […]
ಅ.1 ರಿಂದ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ ವರ್ಕ್ ಫ್ರಂ ಹೋಮ್ ನಿಲ್ಲಿಸಿದ ಟಿಸಿಎಸ್

ಬೆಂಗಳೂರು : ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್ ಕೆಲಸವನ್ನು ಅಂತ್ಯಗೊಳಿಸಲಾಗಿದೆ ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಇಮೇಲ್ನಲ್ಲಿ ಕಂಪನಿ ತಿಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದಾಗ್ಯೂ ತೀರಾ ಅಗತ್ಯದ ಸಂದರ್ಭಗಳಲ್ಲಿ ಹೈಬ್ರಿಡ್ ಮಾದರಿಯ ಕೆಲಸಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್ ಮಾದರಿಯ ಕೆಲಸವನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಅಕ್ಟೋಬರ್ 1 ರಿಂದ ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ […]
ಹೋಟೆಲ್ ಉದ್ಯಮಿಗಳಿಗೆ ಶಾಕ್ , ವಾಣಿಜ್ಯ ಸಿಲಿಂಡರ್ ಬೆಲೆ 209 ರೂ ಏರಿಕೆ

ನವದೆಹಲಿ : ವಾಣಿಜ್ಯ ಅಡುಗೆ ಅನಿಲ (ಎಲ್‌ಪಿಜಿ) ದರ 19 ಕೆಜಿ ಸಿಲಿಂಡರ್‌ಗೆ 209 ರೂ. ಗಳಷ್ಟು ಹೆಚ್ಚಿಸಲಾಗಿದೆ.ಇದರಿಂದ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಸದ್ಯ ಗೃಹಬಳಕೆಯ ಎಲ್‌ಪಿಜಿಯ ಬೆಲೆ ಪ್ರತಿ 14.2 ಕೆಜಿ ಸಿಲಿಂಡರ್‌ಗೆ ರೂ. 903 ರಷ್ಟಿದೆ.ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಏರಿಕೆ ಕಂಡಿದೆ. ಮತ್ತೊಂದೆಡೆ ಕಚ್ಚಾ ತೈಲ ದುಬಾರಿ ಪರಿಣಾಮ ವಾಯು ಇಂಧನ ಬೆಲೆಯಲ್ಲಿ (ಎಟಿಎಫ್) ತೀವ್ರ ಏರಿಕೆ ಮಾಡಲಾಗಿದೆ. ಸರ್ಕಾರಿ […]
ಆರ್ಬಿಐ: ಅಕ್ಟೋಬರ್ 7 ಕೊನೆ ದಿನ, 2000 ನೋಟುಗಳ ವಿನಿಮಯದ ಅವಧಿ ವಿಸ್ತರಿಣೆ

ನವದೆಹಲಿ: ಇಂದೇ (ಸೆ.30)ಕೊನೆಯಾಗಿದ್ದ ಗಡುವನ್ನು ಅಕ್ಟೋಬರ್ 7ರ ವರೆಗೆ ಕಾಲಾವಕಾಶ ನೀಡುವ ನಿರ್ಧಾರ ಕೈಗೊಂಡಿದೆ.2 ಸಾವಿರದ ನೋಟುಗಳ ಬದಲಿಸಿಕೊಳ್ಳುವ ಅವಧಿಯನ್ನು ಆರ್ಬಿಐ ವಿಸ್ತರಿಸಿದೆ. ಬಾಕಿ ಉಳಿದಿರುವ ಮತ್ತು ಜನರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಿಂಪಡೆಯಲಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ, ಠೇವಣಿ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇನ್ನಷ್ಟು ಕಾಲ ವಿಸ್ತರಿಸಿದೆ. ಇನ್ನೂ ಯಾರ ಬಳಿಯಾದರೂ 2000 ರೂಪಾಯಿ ನೋಟುಗಳಿದ್ದರೆ, ಅಂಥವರು ಸಾಧ್ಯವಾದಷ್ಟು ಬೇಗ ಅವುಗಳನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು ಅಥವಾ […]
ಚೆನ್ನೈ: ಸಕಲ ಸರ್ಕಾರಿ ಗೌರವಗಳೊಂದಿಗೆ ಎಂ ಎಸ್ ಸ್ವಾಮಿನಾಥನ್ ಸ್ವಾಮಿನಾಥನ್ ಅಂತ್ಯಕ್ರಿಯೆ

ಚೆನ್ನೈ (ತಮಿಳುನಾಡು): ಹಸಿರು ಕ್ರಾಂತಿಯ ಪಿತಾಮಹ ಹಾಗೂ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಚೆನ್ನೈನ ಬೀಸಂಟ್ ನಗರದ ಚಿತಾಗಾರದಲ್ಲಿ ನೆರವೇರಿತು.ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಚೆನ್ನೈನ ಬೀಸಂಟ್ ನಗರದಲ್ಲಿ ನೆರವೇರಿತು. ಇದಕ್ಕೂ ಮುನ್ನ ಕೇರಳದ ಕೃಷಿ ಸಚಿವ ಪಿ.ಪ್ರಸಾದ್ ಮತ್ತು ಇಂಧನ ಸಚಿವ ಕೃಷ್ಣನ್ ಕುಟ್ಟಿ ಅವರು ಸ್ವಾಮಿನಾಥನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ […]