ದೆಹಲಿ ಅಬಕಾರಿ ನೀತಿ ಅಕ್ರಮ: ಆಪ್ ಸಂಸದ ಸಂಜಯ್ ಸಿಂಗ್ ನಿವಾಸದಲ್ಲಿ ಇಡಿ ತನಿಖೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸಂಸದ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಬುಧವಾರ ಶೋಧ ನಡೆಸಿದೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಅಪ್ರೂವರ್ ಆಗಲು ನ್ಯಾಯಾಲಯವು ಅನುಮತಿಸಿದ ಒಂದು ದಿನದ ನಂತರ ಈ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದ ಜೊತೆ ಸಂಪರ್ಕ ಹೊಂದಿದ ಜನರ ಇತರ ಕೆಲವು ಆವರಣಗಳನ್ನು ಸಹ ಇದು ಒಳಗೊಂಡಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ […]

ಹೈಡ್ರೋಜನ್ ಬಸ್‌ ಟೆಸ್ಟ್​ ಡ್ರೈವ್​​​ ಮಾಡಿದ ಕೇಂದ್ರ ಸಚಿವರು : ಪ್ರಾಗ್​​ನಲ್ಲಿ ನಿತಿನ್​ ಗಡ್ಕರಿ

ಪ್ರಾಗ್​( ಜೆಕ್ ​​​​ರಿಪಬ್ಲಿಕ್​): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೆಕ್​ ರಿಪಬ್ಲಿಕ್​​​​​​ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಹೈಡ್ರೋಜನ್ ಬಸ್‌ನಲ್ಲಿ ಟೆಸ್ಟ್​ ಡ್ರೈವ್​ ಮಾಡಿದರು. ಈ ಮೂಲಕ ಹೈಡ್ರೋಜನ್​​​​​​​​​​ ಬಸ್​ಗಳ ಬಳಕೆ ಮಾಡಿಕೊಳ್ಳುವ ಕುರಿತಂತೆ ಅವರು ಮಾಹಿತಿ ಪಡೆದುಕೊಂಡರುನಿತಿನ್​ ಗಡ್ಕರಿ ಭಾನುವಾರ ಪ್ರಾಗ್​ಗೆ ಭೇಟಿ ನೀಡಿದ್ದು, ಇಲ್ಲಿ ನಡೆದ 27 ನೇ ವಿಶ್ವ ರಸ್ತೆ ಕಾಂಗ್ರೆಸ್‌ನಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ ಅವರು ಹೈಡ್ರೋಜನ್​ ಬಸ್​​ ಟೆಸ್ಟ್​ ಡ್ರೈವ್​ ಮಾಡಿ ಅದರ ಕಾರ್ಯದಕ್ಷತೆಯ ಬಗ್ಗೆ […]

ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಿಷಿ ಸುನಕ್​ : ಉದ್ಘಾಟನೆ ಹೊಸ್ತಿಲಲ್ಲಿರುವ ಅಮೆರಿಕದ ಅಕ್ಷರಧಾಮ

ವಾಷಿಂಗ್ಟನ್​: ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತೀ ದೊಡ್ಡ ದೇವಾಲಯ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಉದ್ಘಾಟನೆಗೆ ತಯಾರಾಗಿದೆ.ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಅಕ್ಟೋಬರ್​ 8 ರಂದು ಉದ್ಘಾಟನೆಯಾಗಲಿದೆ.ದೇವಾಲಯದ ಉದ್ಘಾಟನೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಶುಭಾಶಯಗಳನ್ನು ಕೋರಿದ್ದಾರೆ. ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪತ್ರ ಬರೆದಿರುವ ಪ್ರಧಾನಿ ಮೋದಿ ಅಕ್ಷರಧಾಮದಲ್ಲಿರುವ ಎಲ್ಲರಿಗೂ ಹಾಗೂ ಅದರಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಶುಭಾಶಯಗಳನ್ನು ಕಳುಹಿಸಿದ್ದಾರೆ. ಪತ್ರದಲ್ಲಿ […]

ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಹಲವು ಬಾರಿ ಅಮೆರಿಕ ಮನವಿ: ನಿಜ್ಜರ್​ ಹತ್ಯೆ

ವಾಷಿಂಗ್ಟನ್: ಅಮೆರಿಕ ಆಡಳಿತವು ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತ ಸರ್ಕಾರದೊಂದಿಗೆ ಹಲವಾರು ಸಂದರ್ಭಗಳಲ್ಲಿ ಒತ್ತಾಯಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕಳೆದ ವಾರ ಇಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಆಂಟೋನಿ ಬ್ಲಿಂಕೆನ್​ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ಅವರು ಸ್ಪಷ್ಟಪಡಿಸಿದಂತೆ, […]

ಉಗ್ರರನ್ನು ಬೆನ್ನಟ್ಟಿರುವ ಭದ್ರತಾ ಪಡೆ , ಕಣಿವೆ ನಾಡಲ್ಲಿ ಮತ್ತೆ ಗುಂಡಿನ ಸದ್ದು

ರಾಜೌರಿ, ಜಮ್ಮು ಮತ್ತು ಕಾಶ್ಮೀರ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದಿದೆ.ಕಲಕೋಟ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಉಗ್ರರು ಮತ್ತು ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿದೆ.ಕಲಕೋಟ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಲ್ಲಿ ಭದ್ರತಾ ಪಡೆ ಇಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಅಷ್ಟರಲ್ಲಿ […]