ಭಯೋತ್ಪಾದಕತೆಯ ವಿರುದ್ದ ಗುಡುಗಿದ ಬೆಂಜಮಿನ್ ನೆತನ್ಯಾಹು: ಇಸ್ರೇಲ್-ಹಮಾಸ್ ಯುದ್ದ ಉಲ್ಬಣ; 1600 ರ ಗಡಿ ದಾಟಿದ ಸಾವಿನ ಸಂಖ್ಯೆ

ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ತಮ್ಮ ದೇಶವು “ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಅದನ್ನು ಮುಗಿಸುತ್ತದೆ” ಎಂದು ಹೇಳಿದ್ದಾರೆ. “ನಮಗೆ ಈ ಯುದ್ಧ ಬೇಕಾಗಿಲ್ಲ. ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ”ಎಂದು ಪ್ರಧಾನಿ ಹೇಳಿದ್ದಾರೆ. ಶನಿವಾರ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧವು ಮಂಗಳವಾರವೂ ಮುಂದುವರೆದಿದ್ದು ಸಾವಿನ ಸಂಖ್ಯೆ […]

ಅಮೇರಿಕಾದ ನ್ಯೂಜೆರ್ಸಿಯಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

ಯುನೈಟೆಡ್ ಸ್ಟೇಟ್ಸ್ ನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ಭಾನುವಾರ ತನ್ನ ಬಾಗಿಲನ್ನು ಭಕ್ತರಿಗಾಗಿ ತೆರೆದಿದೆ. ರಾಬಿನ್ಸ್‌ವಿಲ್ಲೆಯ ಸಣ್ಣ ಟೌನ್‌ಶಿಪ್‌ನಲ್ಲಿ 183-ಎಕರೆ ಜಾಗದಲ್ಲಿ BAPS ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ. ಅಕ್ಟೋಬರ್ 8 ರಂದು ದೇವಾಲಯ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಅ.18 ರಿಂದ ಸಾರ್ವಜನಿಕರಿಗೆ ಪ್ರವೇಶ ದೊರೆಯಲಿದೆ. ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರಿಗೆ, ಇದು ಒಂದು ದೊಡ್ಡ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. #WATCH | The largest Hindu temple in the US – BAPS […]

ಉಚಿತ ಫುಡ್​ ಡೆಲಿವರಿ ಮತ್ತು ಡಿಸ್ಕೌಂಟ್​ : ಕಡಿಮೆ ದರದ ಸ್ವಿಗ್ಗಿ ಒನ್ ಲೈಟ್​ ಮೆಂಬರ್​ಶಿಪ್

ನವದೆಹಲಿ: ಉಚಿತ ಆಹಾರ ಡೆಲಿವರಿ, ವಿಶೇಷ ಆಫರ್​ಗಳು ಮತ್ತು ಡಿಸ್ಕೌಂಟ್​ಗಳಂಥ ಪ್ರಯೋಜನಗಳನ್ನು ನೀಡುವ ಸ್ವಿಗ್ಗಿ ಒನ್ ಲೈಟ್ ಮೆಂಬರ್​ಶಿಪ್ ಯೋಜನೆಯನ್ನು ಸ್ವಿಗ್ಗಿ ಸೋಮವಾರ ಪ್ರಕಟಿಸಿದೆ.ಇದಕ್ಕೆ ಮೂರು ತಿಂಗಳಿಗೆ 99 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಸದಸ್ಯತ್ವದೊಂದಿಗೆ, ಬಳಕೆದಾರರು 149 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಫುಡ್​ ಡೆಲಿವರಿ ಮತ್ತು ಇನ್​ಸ್ಟಾಮಾರ್ಟ್​ನಲ್ಲಿ 199 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಡೆಲಿವರಿಗಳನ್ನು ಪಡೆಯುತ್ತಾರೆ. ಉಚಿತ ಫುಡ್​ ಡೆಲಿವರಿ ನೀಡುವ ಸ್ವಿಗ್ಗಿ ಒನ್ ಲೈಟ್​ […]

ಎಸ್&ಪಿ ವರದಿ : ಏಷ್ಯಾ-ಪೆಸಿಫಿಕ್​ ವಲಯದಲ್ಲಿ ಭಾರತದ ಸರ್ಕಾರಿ ಬ್ಯಾಂಕುಗಳ ಷೇರುಗಳೇ ಬೆಸ್ಟ್

ನವದೆಹಲಿ: ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಏಷ್ಯಾ-ಪೆಸಿಫಿಕ್ ಮೂಲದ ಬ್ಯಾಂಕ್​ಗಳಿಗಿಂತ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ವಹಿವಾಟು ನಡೆಸಿವೆ. ಇದು ಈ ಬ್ಯಾಂಕ್​ಗಳ ಮೇಲೆ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಮತ್ತು ಅವುಗಳ ಹಣಕಾಸು ದೃಢತೆಯನ್ನು ಬಿಂಬಿಸುತ್ತದೆ ಎಂದು ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತಿಳಿಸಿದೆ.ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ವರದಿ ಹೇಳಿದೆ. ಇಂಡೋನೇಷ್ಯಾದ ಪಿಟಿ ಬ್ಯಾಂಕ್ ನ್ಯಾಷನಲ್ ನೋಬು ಟಿಬಿಕೆ […]

7 ಮಂದಿ ದಾರುಣ ಸಾವು : ತಮಿಳುನಾಡಿನ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ

ಅರಿಯಲೂರು (ತಮಿಳುನಾಡು): ಕರ್ನಾಟಕದ ಅತ್ತಿಬೆಲೆಯಲ್ಲಿ ನಡೆದ ದುರ್ಘಟನೆ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಅಂತಹುದೇ ಘಟನೆಯೊಂದು ವರದಿಯಾಗಿದೆ.ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಬೆಳಗ್ಗೆ 9:30ರ ಸುಮಾರಿಗೆ ಪಟಾಕಿ ತಯಾರಿಸುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಅರಿಯಲೂರು ಜಿಲ್ಲೆಯ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ರಾಜೇಂದ್ರನ್​ ಎಂಬುವರು. ವೀರಕಲೂರು ಗ್ರಾಮದಲ್ಲಿ ಯಾಜ್ ಕ್ರ್ಯಾಕರ್ಸ್ ಎಂಬ ಅಂಗಡಿಯನ್ನು ನಡೆಸುತ್ತಿದ್ದು, […]