ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವಂತಿಲ್ಲ: ಕೇಂದ್ರದ ಪ್ರಸ್ತಾವಿತ ಉನ್ನತ ಅಧಿಕಾರ ಸಮಿತಿಗೆ ಜವಾಬ್ದಾರಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವಂತಿಲ್ಲ ಎಂದು 3-2 ಬಹುಮತದಿಂದ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ನಾಲ್ಕು ತೀರ್ಪುಗಳನ್ನು ನೀಡಿತು ಮತ್ತು ಹಲವಾರು ಅವಲೋಕನಗಳನ್ನು ಮಾಡಿತು. ಮೇ 11 ರಂದು, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರು 10 ದಿನಗಳ ಮ್ಯಾರಥಾನ್ ವಿಚಾರಣೆಯ […]

ಕೇಂದ್ರ ಸಶಸ್ತ್ರ ಪಡೆಗಳ 11 ಸಾವಿರ ಹಳೆಯ ವಾಹನ ಗುಜರಿಗೆ : ಹೊಸ ಅಟೊಮೊಬೈಲ್ ನೀತಿ

ನವದೆಹಲಿ: ಭಾರತ ಸರ್ಕಾರದ ‘ವೆಹಿಕಲ್ ಸ್ಕ್ರ್ಯಾಪಿಂಗ್ ಪಾಲಿಸಿ’ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳನ್ನು ವಿಲೇವಾರಿ ಮಾಡುವ ಕೇಂದ್ರ ಸರ್ಕಾರದ ನೀತಿಯ ಭಾಗವಾಗಿ ಬಿಎಸ್‌ಎಫ್, ಸಿಆರ್​ಪಿಎಫ್ ಮತ್ತು ಸಿಐಎಸ್‌ಎಫ್​ನಂಥ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಸೇರಿದ 11,000 ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರ ಸಶಸ್ತ್ರ ಪಡೆಗಳಿಗೆ ಸೇರಿದ 11 […]

ಮಾನವಸಹಿತ ‘ಗಗನಯಾನ’​ ಅಕ್ಟೋಬರ್ 21ಕ್ಕೆ ಮೊದಲ ಹಾರಾಟ ಪರೀಕ್ಷೆ: ಇಸ್ರೋ

ನವದೆಹಲಿ: ಚಂದ್ರಯಾನ, ಸೂರ್ಯಯಾನ ಯೋಜನೆಗಳ ಯಶಸ್ಸಿನ ಮೂಲಕ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಮಹತ್ವದ ಯೋಜನೆಗೆ ಸಜ್ಜಾಗುತ್ತಿದೆ.ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವಸಹಿತ ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಿದೆ ಎಂದು ಸೋಮವಾರ ತಿಳಿಸಿತು. ಮಾನವಸಹಿತ ಗಗನಯಾನ ಯೋಜನೆಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸುವುದಾಗಿ ಇಸ್ರೋ ಇಂದು ಪ್ರಕಟಿಸಿದೆ. ಇದರಲ್ಲಿ ಮೂವರು ಗಗನಯಾತ್ರಿಗಳು ಹಾರಾಟ ನಡೆಸಲಿದ್ದಾರೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ […]

ಮೌಲ್ಯದ 70 ಆಸ್ತಿಗಳ ಜಪ್ತಿ ಮಾಡಿದ ಇಡಿ : ಎನ್‌ಸಿಪಿ ಮಾಜಿ ಸಂಸದರಿಗೆ ಸೇರಿದ 315 ಕೋಟಿ ರೂ. !

ನವದೆಹಲಿ: ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ ಮತ್ತು ಕುಟುಂಬ ಹಾಗೂ ಇವರ ವ್ಯಾಪಾರಕ್ಕೆ ಸೇರಿದ 315 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ತಿಳಿಸಿದೆ.ಇದರಲ್ಲಿ ಜಾಮೀನು, ಪವನ ಘಟಕಗಳು, ಬೆಳ್ಳಿ, ಚಿನ್ನ ಮತ್ತು ವಜ್ರದ ಆಭರಣಗಳು ಸೇರಿವೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.ಎನ್‌ಸಿಪಿ ಮಾಜಿ ಸಂಸದ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ, ಕುಟುಂಬ ಹಾಗೂ […]

ಆದಿತ್ಯ ನೌಕೆ : ಜನವರಿಯಲ್ಲಿ ಎಲ್​1 ಪಾಯಿಂಟ್​ಗೆ ಆದಿತ್ಯ ನೌಕೆ

ಮಧುರೈ (ತಮಿಳುನಾಡು): ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್​ 1 ಯೋಜನೆ ಕುರಿತು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಅವರು ಮಾಹಿತಿ ಹಂಚಿಕೊಂಡಿದ್ದು, ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ಇಸ್ರೋ, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವು ಯಶಸ್ವಿಯಾಗಿದೆ ಎಂದು ಹೇಳಿತ್ತು. ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್​ […]