ಉಸಿರುಗಟ್ಟಿಸುತ್ತಿದೆ ರಾಷ್ಟ್ರ ರಾಜಧಾನಿಯ ವಾತಾವರಣ: ಸತತ ನಾಲ್ಕನೇ ದಿನವೂ ಮಾಲಿನ್ಯದಿಂದ ಜನತೆ ಕಂಗಾಲು
ನವದೆಹಲಿ: ದೆಹಲಿಯಲ್ಲಿ ದಟ್ಟವಾದ ಮಬ್ಬು ಆವರಿಸಿದ್ದು, ಗಾಳಿಯ ಗುಣಮಟ್ಟವು ‘ತೀವ್ರ’ ವಿಭಾಗದಲ್ಲಿ ಉಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸೋಮವಾರದ ಅಂಕಿಅಂಶಗಳನ್ನು ತೋರಿಸಿದೆ. ಇದು ಸತತ ನಾಲ್ಕನೇ ದಿನವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ‘ತೀವ್ರ’ ಗಾಳಿಯ ಗುಣಮಟ್ಟ ದಾಖಲಾಗಿದೆ. CPCB ಡೇಟಾ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 437 ದಾಖಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಮಾಲಿನ್ಯ ಬಿಕ್ಕಟ್ಟಿನ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. […]
ಆತಿಥೇಯ ಜಪಾನ್ ಅನ್ನು ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡ
ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡವು ಜಪಾನ್ ಅನ್ನು ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾನುವಾರ ರಾಂಚಿಯಲ್ಲಿ ನಡೆದ ಫೈನಲ್‌ನಲ್ಲಿ ಆತಿಥೇಯರು 4-0 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿದರು. ಇದಕ್ಕೂ ಮುನ್ನ 2016 ರಲ್ಲಿ ಸಿಂಗಾಪುರದಲ್ಲಿ ಗೆದ್ದಿದ್ದ ಭಾರತ ಎರಡನೇ ಬಾರಿಗೆ ಕಾಂಟಿನೆಂಟಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು. ಜನ್ನೆಕೆ ಸ್ಕೋಪ್‌ಮನ್ ತರಬೇತುದಾರ ತಂಡವು ಪ್ರೊ ಲೀಗ್‌ಗೆ ಅರ್ಹತೆ ಪಡೆಯಲು ವೆಲೆನ್ಸಿಯಾದಲ್ಲಿ ನಡೆದ ಎಫ್‌ಐಹೆಚ್ ನೇಷನ್ಸ್ ಕಪ್ ಅನ್ನು ಗೆದ್ದ ಬಳಿಕ, ಡಿಸೆಂಬರ್ 2022 ರ ನಂತರ ಇದು […]
ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ: ಕನಿಷ್ಠ 129 ಸಾವು; ಭಾರತದ ಗಡಿ ಜಿಲ್ಲೆಗಳಲ್ಲೂ ಕಂಪನದ ಅನುಭವ
ಕಾಠ್ಮಂಡು: ನೇಪಾಳದ ವಾಯುವ್ಯ ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ 6.4 ತೀವ್ರತೆಯ ಭೂಕಂಪನದ ನಂತರ ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಜಜರ್ಕೋಟ್ ಉಪಮೇಯರ್ ಸೇರಿದಂತೆ ಸುಮಾರು 129 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನೇಪಾಳದ ದೂರದರ್ಶನ ತಿಳಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಜಾಜರ್‌ಕೋಟ್ ಜಿಲ್ಲೆಯ ಲಾಮಿಡಾಂಡ ಪ್ರದೇಶದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ. ಭೂಕಂಪನದ ಪರಿಣಾಮ ದೆಹಲಿ […]
ಎಲೆಕ್ಟ್ರಿಕ್, ಸಿಎನ್‌ಜಿ, ಬಿಎಸ್-VIಗೆ ಮಾತ್ರ ಅನುಮತಿ : ದೆಹಲಿಯಲ್ಲಿ ಹಳೆಯ ಬಸ್‌ಗಳಿಗಿಲ್ಲ ಅವಕಾಶ
ನವದೆಹಲಿ: ಸರ್ಕಾರದ ನಿರ್ದೇಶನದಂತೆ ಇಂದಿನಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹಳೆಯ ಡೀಸೆಲ್ ಬಸ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.ರಾಷ್ಟ್ರ ರಾಜದಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀರಾ ಕಳಪೆಯಾಗಿದೆ. ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು ನಗರಕ್ಕೆ ಬರುವ ರಾಸಾಯನಿಕಸಮೇತ ಹೊಗೆ ಸೂಸುವ ಬಸ್ಗಳಿಗೆ ಇದೀಗ ನಿರ್ಬಂಧ ಹೇರಿದೆ. ಸಾರಿಗೆ ಇಲಾಖೆಯ ಪ್ರಕಾರ, ಮುಂದಿನ ವರ್ಷ ಜುಲೈ 1 ರಿಂದ ಯಾವುದೇ ನಗರದಿಂದ ದೆಹಲಿಗೆ ಬರುವ ಎಲ್ಲಾ […]
ಪತ್ರಕರ್ತರ ಹತ್ಯೆ: 30 ವರ್ಷದಲ್ಲಿ ವಿಶ್ವದಾದ್ಯಂತ 1,600ಕ್ಕೂ ಅಧಿಕ ಜನ ಹತ್ಯೆ
ಹೈದರಾಬಾದ್: ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ, ಹತ್ತರ ಪೈಕಿ ಒಂಬತ್ತು ಪತ್ರಕರ್ತರ ಹತ್ಯೆ ಪ್ರಕರಣ ಬಗೆಹರಿದಿಲ್ಲ. ಪತ್ರಕರ್ತರ ಹತ್ಯೆ ಅಸ್ಪಷ್ಟವಾಗಿ ಉಳಿಯಬಾರದು. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ 2014ರಿಂದ ಪ್ರತಿ ವರ್ಷ ‘ಇಂಟರ್ನ್ಯಾಷನಲ್ ಡೇ ಟು ಎಂಡ್ ಇಂಪ್ಯೂನಿಟಿ ಫಾರ್ ಕ್ರೈಮ್ಸ್ ಅಗೈನ್ಸ್ಟ್ ಜರ್ನಲಿಸ್ಟ್ಸ್’ ಎಂಬ ದಿನವನ್ನು ನವೆಂಬರ್ 2ರಂದು ಆಚರಿಸಲಾಗುತ್ತದೆ. ಈ ವರ್ಷದ ದಿನದ ಕಾರ್ಯಕ್ರಮವನ್ನು ‘ಪತ್ರಕರ್ತರ ಮೇಲಿನ ಹಿಂಸಾಚಾರ, ಚುನಾವಣಾ ಸಮಗ್ರತೆ ಮತ್ತು ಸಾರ್ವಜನಿಕ ನಾಯಕತ್ವದ ಪಾತ್ರ’ ಎಂಬ ಘೋಷ ವಾಕ್ಯದೊಂದಿಗೆ ಚರ್ಚಿಸಲಾಗುತ್ತದೆ. ಮಾನವ […]