ಬಂಡುಕೋರರ ಗುಂಡಿನ ಚಕಮಕಿಯಲ್ಲಿ 13 ಜನರ ಹತ್ಯೆ : ಮಣಿಪುರದಲ್ಲಿ ಮತ್ತೆ ಸಂಘರ್ಷ

ಇಂಫಾಲ: ತೆಂಗನೌಪಾಲ್ ಜಿಲ್ಲೆಯ ಲೀತು ಎಂಬ ಗ್ರಾಮದಲ್ಲಿ ಸೋಮವಾರ ಈ ದಾಳಿ ನಡೆದಿದೆ. ಮ್ಯಾನ್ಮಾರ್ಗೆ ತೆರಳುತ್ತಿದ್ದ ಗುಂಪಿನ ಮೇಲೆ ಬಂಡುಕೋರರ ಪಡೆ ಗುಂಡಿನ ದಾಳಿ ಮಾಡಿದೆ. ಇದರಿಂದ ಸ್ಥಳದಲ್ಲೇ 13 ಮಂದಿ ಪ್ರಾಣ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೋಮವಾರ ನಡೆದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಯಿಂದ ಘಟನೆ ನಡೆದ ಗ್ರಾಮದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.ಜನಾಂಗೀಯ ಸಂಘರ್ಷಕ್ಕೀಡಾಗಿ ಹಿಂಸಾಚಾರ ಅನುಭವಿಸಿದ್ದ ಮಣಿಪುರದಲ್ಲಿ ಮತ್ತೆ ಗಲಾಟೆ ಮರುಕಳಿಸಿದೆ. ಕೆಲ ದಿನಗಳಿಂದ ಶಾಂತವಾಗಿದ್ದ ಗುಡ್ಡಗಾಡು ರಾಜ್ಯ ಮಣಿಪುರದಲ್ಲಿ ಮತ್ತೆ […]
ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ : ಅಂಚೆ ಕಚೇರಿ ಖಾಸಗೀಕರಣ ಇಲ್ಲ- ಕೇಂದ್ರ ಸರ್ಕಾರ

ನವದೆಹಲಿ: ಬದಲಿಗೆ ದೇಶಾದ್ಯಂತ ಸುಮಾರು 5 ಸಾವಿರ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 5746 ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.ದೇಶದ ಅತ್ಯಂತ ಹಳೆಯ ಸೇವೆಯಾದ ಅಂಚೆ ಕಚೇರಿಯನ್ನು ಖಾಸಗೀಕರಣ ಮಾಡುವುದಿಲ್ಲ.2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಅಂಚೆ ಸೇವೆಗಳು ವಿಸ್ತರಣೆ: ಅಂಚೆ ಸೇವೆಗಳು, ಕಚೇರಿಗಳು […]
ಟೀಮ್ ಇಂಡಿಯಾದ ಕೋಚ್ ದ್ರಾವಿಡ್ ನಿಂದ ಚಾಮುಂಡಿ ದೇವಿಯ ದರ್ಶನ

ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಸದ್ಯ ರಜೆಯ ಮೂಡ್‌ನಲ್ಲಿದ್ದಾರೆ. ಸದ್ಯ ಅವರು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಗಂಣದಲ್ಲಿ ಮೈಸೂರ ವಲಯ ಆಯೋಜಿಸಿದ್ದ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಗ ಸುಮೀತ್ ದ್ರಾವಿಡ್ ಆಟವನ್ನು ಕಣ್ಣು ತುಂಬಿಕೊಳ್ಳಲು ಆಗಮಿಸಿದ್ದರು. ಭಾರತ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ.ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು ದೇವಿಯ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನದ ವೇಳೆ ರಾಹುಲ್‌ಗೆ ಪತ್ನಿ […]
ಚಂದ್ರಯಾನ : ನಾಸಾದ ಮಾನವಸಹಿತ ಚಂದ್ರಯಾನ 2027ಕ್ಕೆ ಮುಂದೂಡಿಕೆ

ವಾಶಿಂಗ್ಟನ್ : ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಮೆರಿಕದ ನಾಯಕತ್ವವನ್ನು ಕಾಪಾಡಿಕೊಳ್ಳಲು ಮತ್ತು 2025 ರ ವೇಳೆಗೆ ಮಂಗಳ ಗ್ರಹದಲ್ಲಿ ಭವಿಷ್ಯದ ಕಾರ್ಯಾಚರಣೆಗಳಿಗೆ ತಯಾರಿ ನಡೆಸಲು ಚಂದ್ರನ ಮೇಲೆ ಮತ್ತೊಮ್ಮೆ ಮಾನವರನ್ನು ಕಳುಹಿಸುವ ಗುರಿಯನ್ನು ನಾಸಾ ಹೊಂದಿದೆ. ಆದರೆ ಅದರ ಮಾನವ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಸ್ಪೇಸ್ ಸೂಟ್ ವಿನ್ಯಾಸದಲ್ಲಿ ಹಲವಾರು ಸಮಸ್ಯೆಗಳನ್ನು ಜಿಎಒ ಪತ್ತೆ ಮಾಡಿದ್ದು, ಇವುಗಳನ್ನು 2027 ಕ್ಕಿಂತ ಮೊದಲು ಪರಿಹರಿಸಲು ಸಾಧ್ಯವಾಗದು ಎನ್ನಲಾಗಿದೆ. 1972ರ ನಂತರ ಮತ್ತೊಮ್ಮೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಲು ಯೋಜಿಸಲಾದ ನಾಸಾದ ಆರ್ಟೆಮಿಸ್-3 […]
ಕೇಂದ್ರಕ್ಕೆ ಭರ್ಜರಿ ತೆರಿಗೆ ಆದಾಯ: ನವೆಂಬರ್ ನಲ್ಲಿ 1.68 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ:ಇತ್ತೀಚಿನ ಜಿಎಸ್ಟಿ ದತ್ತಾಂಶವು 2023-24ರಲ್ಲಿ ಸರಾಸರಿ ಮಾಸಿಕ ಸಂಗ್ರಹವನ್ನು 1.67 ಲಕ್ಷ ಕೋಟಿ ರೂ.ಗೆ ಕೊಂಡೊಯ್ಯುತ್ತದೆ. ಮಾಸಿಕ ಜಿಎಸ್ಟಿ ಸಂಗ್ರಹವು ವರ್ಷಗಳಲ್ಲಿ ಹೆಚ್ಚಾಗಿದೆ. 2017-18ರಲ್ಲಿ ತಿಂಗಳಿಗೆ ಸರಾಸರಿ 1 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇದ್ದ ಸಂಗ್ರಹವು 2020-21ರ ಸಾಂಕ್ರಾಮಿಕ ಪೀಡಿತ ನಂತರ 2022-23ರಲ್ಲಿ ಸರಾಸರಿ 1.51 ಲಕ್ಷ ಕೋಟಿ ರೂ.ಗೆ ಏರಿದೆ. ಇದು ಸತತ ಒಂಬತ್ತನೇ ತಿಂಗಳು ಮಾಸಿಕ ಜಿಎಸ್ಟಿ ಸಂಗ್ರಹವು 1.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಸರ್ಕಾರದ ಸರಕು ಮತ್ತು ಸೇವಾ ತೆರಿಗೆ […]