ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ: ಉತ್ತರಾಖಂಡ ಸುರಂಗ ಕುಸಿತ
ರಕ್ಷಣಾ ಕಾರ್ಯಕ್ಕೆ ಪದೇ ಪದೆ ಅಡ್ಡಿ ಎದುರಾಗುತ್ತಿರುವ ಹಿನ್ನೆಲೆ ಅಮೆರಿಕದ ನಿರ್ಮಿತ ಆಗರ್ ಯಂತ್ರವು ಪೈಪ್‌ಗಳನ್ನು ಕೊರೆಯಲು ಮತ್ತು ತಳ್ಳಲು ನಿಯೋಜಿಸಲಾಗಿದೆ.ಉತ್ತರಕಾಶಿ, ಉತ್ತರಾಖಂಡ್: ಉತ್ತರಾಕಾಶಿಯ ಭಾಗಶಃ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಸುರಂಗದ ರಕ್ಷಣಾ ಕಾರ್ಯಾಚರಣೆ ವೇಳೆ ಭಾರಿ ಸದ್ದು ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ, ಶುಕ್ರವಾರ ಮಧ್ಯಾಹ್ನ ಈ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸುರಂಗದ 60 ಮೀಟರ್ ಪ್ರದೇಶದೊಳಗೆ ಹೆವಿ ಡ್ಯೂಟಿ ಆಗರ್ ಮಷಿನ್ […]
ಹಮಾಸ್ ಉಗ್ರ ದಾಳಿಯ ರಹಸ್ಯ ಬಯಲು: ಇಸ್ರೇಲ್ನ ಪ್ರಮುಖ ನಗರ ಟೆಲ್ ಅವೀವ್ ಮೇಲೂ ದಾಳಿಗೆ ಸಂಚು
ಟೆಲ್ ಅವೀವ್: ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಯಹೂದಿ ರಾಷ್ಟ್ರದ ಗಡಿ ಛೇದಿಸಿ ಒಳಬಂದು ಯಾದ್ ಮೊರ್ದೆಚೈ ವಸಾಹತು ಪ್ರದೇಶದಲ್ಲಿನ ಜನರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ಮಾಡಿ 1400 ಮಂದಿ ಬಲಿ ತೆಗೆದುಕೊಂಡಿದ್ದರು.ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಹಲವು ರೋಚಕ ಸುದ್ದಿಗಳು ಈಗ ಹೊರಬೀಳುತ್ತಿವೆ.ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಹಿಂದಿನ ಒಂದೊಂದು ಕತೆಗಳು ಇದೀಗ ಹೊರಬರುತ್ತಿವೆ. ಸೆರೆಸಿಕ್ಕ ಉಗ್ರರು ದಾಳಿಯ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಬಂಧಿತ ಹಮಾಸ್ ಉಗ್ರರನ್ನು ವಿಚಾರಣೆ ನಡೆಸಿದ ವೇಳೆ […]
ಗಾಜಾದಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಒತ್ತಾಯ
ಟೆಲ್ ಅವೀವ್ (ಇಸ್ರೇಲ್) : ಗಾಜಾ ಮತ್ತು ಉತ್ತರ ಸಮರಿಯಾದಲ್ಲಿ ಯಹೂದಿಗಳ ಪುನರ್ವಸತಿಗಾಗಿ ಹನ್ನೊಂದು ಪ್ರಮುಖ ಬಲಪಂಥೀಯ ಸಂಘಟನೆಗಳು ಒಗ್ಗೂಡಿವೆ. ಸಮರಿಯಾ ಪ್ರಾದೇಶಿಕ ಮಂಡಳಿ ಮತ್ತು ನಹಲಾ ಚಳವಳಿಯ ಮುಖ್ಯಸ್ಥ ಯೋಸಿ ದಗ್ಗನ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆಯುದ್ಧ ಮುಗಿದ ಬಳಿಕ ಗಾಜಾದಲ್ಲಿ ಯಹೂದಿಗಳ ನೆಲೆಗೆ ಅವಕಾಶ ನೀಡುವಂತೆ ಇಸ್ರೇಲ್ನ ಹಲವಾರು ಬಲಪಂಥೀಯ ಸಂಘಟನೆಗಳು ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿವೆ.ಯುದ್ಧದ ನಂತರ ಗಾಜಾ ಪಟ್ಟಿಯಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಇಸ್ರೇಲ್ನ ಬಲಪಂಥೀಯ ಸಂಘಟನೆಗಳು […]
51ಕ್ಕೆ ಏರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ : ಇಸ್ರೇಲ್ನ ಮತ್ತೊಬ್ಬ ಯೋಧ ಸಾವು
ಟೆಲ್ ಅವೀವ್ (ಇಸ್ರೇಲ್) : ಅಕ್ಟೋಬರ್ 27 ರಿಂದ ಗಾಜಾದಲ್ಲಿ ಇಸ್ರೇಲ್ ಭೂಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಮಾಸ್ ಜೊತೆಗಿನ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಐಡಿಎಫ್ ಸೈನಿಕರ ಸಂಖ್ಯೆ 51 ಕ್ಕೆ ಏರಿದೆ. ಬೆನ್ ನನ್ ಪ್ಯಾರಾ ಟ್ರೂಪ್ ಬ್ರಿಗೇಡ್ನ 202 ನೇ ಬೆಟಾಲಿಯನ್ನಲ್ಲಿ ಉಪ ಕಮಾಂಡರ್ ಆಗಿದ್ದರು. ಹಮಾಸ್ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಕ್ಯಾಪ್ಟನ್ ಶ್ಲೋಮೊ ಬೆನ್ ನನ್ (22) ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ಪ್ರಕಟಿಸಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಇಸ್ರೇಲ್ನ ಮತ್ತೊಬ್ಬ […]
ಶ್ರೀನಗರದಲ್ಲಿ ಬೃಹತ್ ಕಂದಕಕ್ಕೆ ಉರುಳಿದ ಬಸ್ 36 ಜನ ಸಾವು, 19 ಮಂದಿಗೆ ಗಾಯ
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಅಪಘಾತದಲ್ಲಿ ಕನಿಷ್ಠ 36 ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಓವರ್‌ಲೋಡ್‌ನಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ಅತಿಯಾದ ವೇಗದಿಂದ ನಿಯಂತ್ರಣ ಕಳೆದುಕೊಂಡು ಅವಘಡ ನಡೆದಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಇಲ್ಲಿನ ದೋಡಾ ಜಿಲ್ಲೆಯ ಅಸ್ಸರ್ ಎಂಬಲ್ಲಿ ಬಸ್ ಕಂದಕಕ್ಕೆ ಉರುಳಿದ್ದು, 55 ಮಂದಿ ಪ್ರಯಾಣಿಸುತ್ತಿದ್ದರು […]