ಸಂಸತ್ತಿನಲ್ಲಿ ಭದ್ರತಾ ಲೋಪ: 6 ಬಂಧನ; ಆರೋಪಿಗಳ ಮೇಲೆ ಯುಎಪಿಎ ದಾಖಲು

ನವದೆಹಲಿ: ಸಂಸತ್ತಿನ ಲೋಕಸಭೆಯಲ್ಲಿ ಬುಧವಾರದಂದು ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಕೆಳಮನೆಗೆ ಧುಮುಕಿ ಹೊಗೆ ಕ್ಯಾನ್ ಗಳನ್ನು ಸಿಡಿಸಿ ರಂಪಾಟ ಮಾಡಿದ್ದು, ಸದನದಲ್ಲಿದ್ದ ಸಂಸದರೆಲ್ಲರೂ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ ತನಿಖೆ ಮುಂದುವರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಜನರನ್ನು ಬಂಧಿಸಲಾಗಿದೆ. ರಂಪಾಟ ನಡೆಸಿದವರು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದುಕೊಂಡು ಲೋಕಸಭೆಯ ಸದನದೊಳಗೆ ಪ್ರವೇಶಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಏಳನೇ […]
ಬಿಎಸ್‌ಇ ನಿಫ್ಟಿ 90 & ಸೆನ್ಸೆಕ್ಸ್ 377 ಅಂಕ ಕುಸಿತ

ಮುಂಬೈ : ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಕುಸಿತದೊಂದಿಗೆ ವಹಿವಾಟು ಕೊನೆಗೊಳಿಸಿವೆ ಚಿಲ್ಲರೆ ಹಣದುಬ್ಬರ ದತ್ತಾಂಶ ಪ್ರಕಟವಾಗುವ ಮುನ್ನ ಇಂಧನ ಷೇರುಗಳ ಮೌಲ್ಯ ಕುಸಿತದಿಂದಾಗಿ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಕೆಳಮಟ್ಟದಲ್ಲಿ ಕೊನೆಗೊಂಡವು.. ಇಂದು ಬಿಎಸ್‌ಇ ಸೆನ್ಸೆಕ್ಸ್ 377.50 ಪಾಯಿಂಟ್ಸ್ ಕುಸಿದು 69,551.03 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ-50 90 ಪಾಯಿಂಟ್ಸ್ ಕುಸಿದು 20,900 ಕ್ಕೆ ತಲುಪಿದೆ. ಹೆಚ್ಚಿನ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ಇತರ ವೈಯಕ್ತಿಕ ಷೇರುಗಳಲ್ಲಿ ಸ್ಪೈಸ್ ಜೆಟ್ ಷೇರುಗಳು […]
ಕದನ ವಿರಾಮಕ್ಕೆ ಒತ್ತಾಯಿಸುವ ಕರಡು ನಿರ್ಣಯದ ಪರ ಮತ ಚಲಾಯಿಸಿದ ಭಾರತ : ಇಸ್ರೇಲ್-ಹಮಾಸ್ ಯುದ್ಧ

ವಿಶ್ವಸಂಸ್ಥೆ: ಇಸ್ರೇಲ್- ಹಮಾಸ್ ಯುದ್ಧದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಈಜಿಪ್ಟ್ ಮಂಡಿಸಿದ ಕರಡು ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಕರಡು ನಿರ್ಣಯದ ಪರವಾಗಿ ಭಾರತ ಮತ ಹಾಕಿದೆ. ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ಟೈನ್ […]
ಸಂಸತ್ ಸದನದಲ್ಲಿ ಭದ್ರತಾ ಲೋಪ: ಹೊಗೆ ಕ್ಯಾನ್ ಹೊತ್ತಿದ್ದ ವ್ಯಕ್ತಿಗಳಿಂದ ಲೋಕಸಭೆಯಲ್ಲಿ ಆಟಾಟೋಪ

ಹೊಸದಿಲ್ಲಿ: ಸಂಸತ್ ಸದನದಲ್ಲಿಂದ ಭಾರೀ ಭದ್ರತಾ ಲೋಪದಲ್ಲಿ ಹೊಗೆ ಕ್ಯಾನ್ ಗಳನ್ನು ಹೊತ್ತಿದ್ದ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಪರಿಣಾಮ ಎಲ್ಲಾ ಸಂಸದರು ಗಲಿಬಿಲಿಗೊಂಡಿದ್ದಾರೆ. ಲೋಕಸಭೆಯ ನೇರ ಕಲಾಪದಲ್ಲಿ, ಒಬ್ಬ ವ್ಯಕ್ತಿ ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಮತ್ತು ಇನ್ನೊಬ್ಬರು ಸಂದರ್ಶಕರ ಗ್ಯಾಲರಿಯಿಂದ ತೂಗಾಡುತ್ತಾ ಹೊಗೆಯನ್ನು ಉಗುಳುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರೂ ಗ್ಯಾಸ್ ಕ್ಯಾನ್ ಗಳನ್ನು ಹೊತ್ತೊಯ್ದಿದ್ದು, ಸದನದಲ್ಲಿ ಹಳದಿ ಹೊಗೆ ತುಂಬಿರುವ ದೃಶ್ಯಗಳು ಹರಿದಾಡುತ್ತಿವೆ. ಸಂಸತ್ತಿನ ಶೂನ್ಯ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಬಳಿಕ […]
ಮಧ್ಯಪ್ರದೇಶ: ನೂತನ ಸಿಎಂ ಆಗಿ ಮೋಹನ್ ಯಾದವ್ ದೇವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ

ಭೋಪಾಲ್ (ಮಧ್ಯಪ್ರದೇಶ) : ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಹಾಜರಿದ್ದರು ಮಧ್ಯಪ್ರದೇಶದ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಮೋಹನ್ ಯಾದವ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಭೋಪಾಲ್‌ನ ಮೋತಿಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ.. ಮಧ್ಯಪ್ರದೇಶ ನೂತನ ಸಿಎಂ ಆಗಿ ಮೋಹನ್ ಯಾದವ್ ಅಧಿಕಾರ ವಹಿಸಿಕೊಂಡರು.ಪಟೇಲ್ ಅವರು ಪ್ರತಿಜ್ಞಾವಿಧಿ […]