ಪಂಚರಾಜ್ಯ ಚುನಾವಣೆ: “ಕೈ” ಹಿಡಿದ ಮತದಾರ

ನವದೆಹಲಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ಸೋಲಿಸಿ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಂದು ಮುಂಜಾನೆ ಆರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿತ್ತು. ಕೆಲವೇ ಕ್ಷಣಗಳ ನಂತರ ಟ್ರೆಂಡ್ ಬದಲಾಗಿ ಬಿಜೆಪಿ ಬಹುಮತದತ್ತ ನಡೆಯತೊಡಗಿತು. ಆದರೆ, ಮಧ್ಯಾಹ್ನದ ನಂತರ ಟ್ರೆಂಡ್ ಸಂಪೂರ್ಣ ಬದಲಾಗಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ. ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ ಒಟ್ಟು 230 – ಬಹುಮತಕ್ಕ ಅಗತ್ಯ ಸಂಖ್ಯೆ – 116, ಕಾಂಗ್ರೆಸ್114 +56, ಬಿಜೆಪಿ108 –57, […]
ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ

ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ತಕ್ಷಣ ಈ ಹುದ್ದೆ ತೊರೆಯುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಕೆಲ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಕೇಂದ್ರೀಯ ಬ್ಯಾಂಕ್‌ಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ಹಿಂದೆ ಯಾವತ್ತೂ ಬಳಸದ ಆರ್‌ಬಿಐ ಕಾಯ್ದೆ 1934ರ ಸೆಕ್ಷನ್ 7 ಬಳಸುವ ಸಂಬಂಧ ಚರ್ಚೆಗೆ ಅಕ್ಟೋಬರ್‌ನಲ್ಲಿ ಚಾಲನೆ ನೀಡಿತ್ತು. ಆರ್‌ಬಿಐ ಬಳಿ ಇರುವ ಮೀಸಲು […]
ಸರಕುಗಳ ಜಿಎಸ್‌ಟಿ ದರ ಇಳಿಕೆ ಸಾಧ್ಯತೆ

ಡಿ.22ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಶೇ 28ರ ಹಂತದಲ್ಲಿ ಇರುವ ಸರಕುಗಳನ್ನು ಶೇ 18ರ ವ್ಯಾಪ್ತಿಗೆ ತರುವ ಬಗ್ಗೆ ಸಮಿತಿ ಚಿಂತನೆ ನಡೆಸುತ್ತಿದೆ. ಏರ್ ಕಂಡೀಷನರ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡ್ಸ್, ವಾಷಿಂಗ್ ಮಷಿನ್ ಮತ್ತು ವಾಹನಗಳಿಗೆ ಗರಿಷ್ಠ ಜಿಎಸ್‌ಟಿ ಇದೆ. ಥರ್ಡ್ ಪಾರ್ಟಿ ಮೋಟರ್ ಇನ್ಯೂರೆನ್ಸ್ ಮೇಲಿನ ತೆರಿಗೆ ಸದ್ಯ ಶೇ […]