ಹಿರಿಯ ವಕೀಲ ‌ರಾಮ್ ಜೇಠ್ಮಲಾನಿ‌ ಇನ್ನಿಲ್ಲ

ದೆಹಲಿ: ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಪ್ರೀಂ‌ ಕೋರ್ಟ್ನ ಹಿರಿಯ ವಕೀಲ‌ ರಾಮ್ ಜೇಠ್ಮಲಾನಿ (96)ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದ ಇವರು ದೇಶದ ಪ್ರಸಿದ್ದ ಕ್ರಿಮಿನಲ್ ವಕೀಲರಲ್ಲಿ ಒಬ್ಬರಾಗಿದ್ದರು. ಬಿಜೆಪಿಯಿಂದ ರಾಜ್ಯಸಭಾ ಸಂಸದರೂ ಆಗಿದ್ದರು. ಕಳೆದ ಎರಡು ವಾರಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ಮಾಜಿ ‘ಪವರ್’ ಫುಲ್ ಮಿನಿಸ್ಟರ್, ರಾಜ್ಯದ ಪ್ರಭಾವಿ ರಾಜಕಾರಣಿ ಡಿಕೆಶಿ‌ ಬಂಧನ

ನವದೆಹಲಿ: ಕಳೆದ 3 ದಿನಗಳಿಂದ ವಿಚಾರಣೆ ಎದುರಿಸಿ 4ನೇ ದಿನದಂದು ಮಾಜಿ ಸಚಿವ, ಕನಕಪುರ ಕ್ಷೇತ್ರದ ಹಾಲಿ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮೂರು ದಿನಗಳಿಂದ ಇಡಿ ವಿಚಾರಣೆ ಎದುರಿಸಿರುವ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ 4ನೇ ದಿನವೂ ಸಹ ವಿಚಾರಣೆಗೆ ಬರುವಂತೆ ಸೋಮವಾರ ಸೂಚನೆ ನೀಡಿತ್ತು. ಮಂಗಳವಾರ ವಿಚಾರಣೆಗೆ ಡಿಕೆ ಶಿವಕುಮಾರ್ ಅವರು ನವದೆಹಲಿಯಲ್ಲಿರುವ ಇಡಿ ಕಚೇರಿ ತೆರಳಿದ್ದರು. ಸಂಜೆಯವರೆಗೂ‌ ವಿಚಾರಣೆ ನಡೆಸಿದ ಡಿಕೆಶಿ ಅಧಿಕಾರಿಗಳು, ರಾತ್ರಿ ಬಂಧಿಸಿದ್ದಾರೆ. […]

ಬ್ಯಾಂಕ್ ವಿಲೀನ ಪ್ರಕ್ರಿಯೆ, ಉದ್ಯೋಗ ಕಡಿತದ ಭೀತಿ ಬೇಡ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ಪೈಕಿ ಬ್ಯಾಂಕ್ ವಿಲೀನ ಪ್ರಕ್ರಿಯೆಯೂ ಸೇರಿದೆ. ಹೀಗಾಗಿ, ಸಾರ್ವಜನಿಕ ವಲಯದ ಬ್ಯಾಂಕ್’ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ಕಳೆದಕೊಳ್ಳುವ ಭಯ ಕಾಡುತ್ತಿದ್ದು, ಬ್ಯಾಂಕ್’ಗಳ ವಿಲೀನದಿಂದ ಉದ್ಯೋಗ ನಷ್ಟವಾಗುವುದಿಲ್ಲ. ಯಾವ ಉದ್ಯೋಗಿಯನ್ನೂ ಮನೆಗೆ ಕಳುಹಿಸುವುದಿಲ್ಲ ಎಂದು ವಿತ್ತ ಸಚಿವೆ ಭರವಸೆ ನೀಡಿದ್ದಾರೆ. ಈ ಹಿಂದೆ […]

ಹೊಸದಿಲ್ಲಿ: ವಾರ್ಷಿಕ ಆದಾಯ ತೆರಿಗೆ ಮತ್ತಷ್ಟು ಕಡಿತ?

ಹೊಸದಿಲ್ಲಿ: ದೇಶದಲ್ಲಿ ತೆರಿಗೆದಾರರಿಗೆ ಸಿಹಿ ಸುದ್ದಿಯೊಂದು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ. ವಾರ್ಷಿಕ 5 ಲಕ್ಷದಿಂದ 10 ಲಕ್ಷ ರೂ. ವಾರ್ಷಿಕ ಆದಾಯ ಗಳಿಸುತ್ತಿರುವವರಿಗೆ ಶೇ.10ರಷ್ಟುತೆರಿಗೆ ವಿಧಿಸುವಂತೆ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯೊಂದು ಶಿಫಾರಸು ಮಾಡಿದೆ. ಸದ್ಯ ಈ ಹಂತದ ತೆರಿಗೆದಾರರಿಗೆ ಶೇ.20 ತೆರಿಗೆ ವಿಧಿಸಲಾಗುತ್ತಿದ್ದು, ಅರ್ಧದಷ್ಟು ಕಡಿಮೆಯಾಗಲಿದೆ. ನೇರ ತೆರಿಗೆ ಸಂಹಿತೆ ಪರಿಷ್ಕರಣೆ ಸಂಬಂಧ ನೇಮಕ ಮಾಡಲಾಗಿದ್ದ ಸಿಬಿಡಿಟಿ ಅಧ್ಯಕ್ಷ ಅಖೀಲೇಶ್‌ ರಂಜನ್‌ ನೇತೃತ್ವದ ಕಾರ್ಯ ಪಡೆ ತನ್ನ ವರದಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ […]

ಮಾಜಿ ಪ್ರಧಾನಿ ಡಾ|ಮನಮೋಹನ್‌ ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ|ಮನಮೋಹನ್‌ ಸಿಂಗ್‌ಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ)ಯ ಭದ್ರತೆಯನ್ನು ಕೇಂದ್ರ ಸರ್ಕಾರ ಸೋಮವಾರ ವಾಪಸ್‌ ಪಡೆದಿದೆ. ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ, ಮಾಜಿ ಪ್ರಧಾನಿ ಡಾ. ಸಿಂಗ್‌ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ ಎಸ್‌ಪಿಜಿ ಭದ್ರತೆ ಇರುವುದಿಲ್ಲ. ಆದರೆ ಅವರಿಗೆ ಸಿಆರ್‌ಪಿಎಫ್‌ ಸಿಬ್ಬಂದಿಗಳ ಮೂಲಕ  ಝೆಡ್‌ ಪ್ಲಸ್‌ ಭದ್ರತೆ ಮುಂದುವರಿಯಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ ಕೊಲೆಗೀಡಾದ ಕಾರಣಕ್ಕಾಗಿ 1985ರಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಎಸ್‌ಪಿಜಿ ವ್ಯವಸ್ಥೆ […]