ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಹಾಗೆ: ಟ್ರಂಪ್!

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದಿದ್ದು, ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಂತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಅನೇಕ ಭಿನ್ನಾಭಿಪ್ರಾಯಗಳ ಗೂಡಾಗಿದ್ದು, ಪರಸ್ಪರ ಅಪನಂಬಿಕೆ ಹಾಗೂ ಗೊಂದಲ ಮನೆ ಮಾಡಿತ್ತು. ಆದರೆ ಮೋದಿ ತಂದೆಯ ಸ್ಥಾನದಲ್ಲಿ ನಿಂತು ದೇಶವನ್ನು ಒಗ್ಗೂಡಿಸಿದ್ದಾರೆ. ಮೋದಿ ಅವರ ಕೈಯಲ್ಲಿ ಭಾರತ ಸುರಕ್ಷಿತವಾಗಿದ್ದು, ಭವಿಷ್ಯದತ್ತ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ […]

ಬಾಕ್ಸಿಂಗ್: ಒಂದೇ ಏಟಿಗೆ ಕುಸಿದು ಬಿದ್ದು ಬಾಕ್ಸರ್ ಸಾವು

ನವದೆಹಲಿ: ಬಾಕ್ಸರ್ ಒಬ್ಬ ಕಾದು ಹೊಡೆದ ಒಂದೇ ಒಂದು ಪವರ್ ಪಂಚ್‌ಗೆ ಎದುರಾಳಿ ಸಾವನ್ನಪ್ಪಿರುವ ಭಯಾನಕ ಘಟನೆ ನಡೆದಿದೆ. ಇದರೊಂದಿಗೆ ಬಾಕ್ಸಿಂಗ್ ರಿಂಗ್ ನಲ್ಲಿ ಬಲಿಯಾದ ಮೂರನೇ ಬಾಕ್ಸರ್ ಎಂದಾಗಿದೆ. ಬಾಕ್ಸಿಂಗ್ ರಿಂಗ್ ನಲ್ಲಿ ಅರ್ದಿತ್ ಮುರ್ಜಾ ಮತ್ತು ಬಲ್ಗೇರಿಯಾದ ಬಾಕ್ಸರ್ ಬೋರಿಸ್ ನಡುವೆ ರೋಚಕ ಕಾದಾಟ ನಡೆದಿತ್ತು. ಎದುರಾಳಿ ಸ್ವಲ್ಪ ವೀಕ್ ಆಗಿದ್ದನ್ನು ಕಂಡ ಮುರ್ಜಾ ಬೋರಿಸ್ ಫೆದರ್ ವೈಟ್ ಗೆ ಬಲವಾದ ಪಂಚ್ ನೀಡಿದ್ದಾರೆ. ಬೋರಿಸ್ ವೃತ್ತಿಪರ ಬಾಕ್ಸರ್ ಅಲ್ಲದಿದ್ದರು ತನ್ನ ಸೋದರ ಸಂಬಂಧಿಯ […]

ಜನಮೆಚ್ಚಿದ ನಾಯಕರು ಮೋದಿ ನಂ.1, ಧೋನಿ ನಂ.2 

ನವದೆಹಲಿ: ವಿಶ್ವ ನಾಯಕರ ಪೈಕಿ ಜನಮೆಚ್ಚಿನ ನಾಯಕರು ಯಾರು ಅನ್ನೋ ಕುತೂಹಲಕ್ಕೆ ಉತ್ತರ ದೊರೆತಿದೆ. ಯುಗೌ ಸಂಸ್ಥೆ 41 ದೇಶದ 42,000 ಮಂದಿಯನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿದ್ದು, ಫಲಿತಾಂಶ ಹೊರಬಿದ್ದಿದೆ. ಭಾರತೀಯರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದರೆ, ಎಂ.ಎಸ್.ಧೋನಿ 2ನೇ ಸ್ಥಾನ ಪಡೆದಿದ್ದಾರೆ. ಭಾರತದ ಜನಮೆಚ್ಚಿದ ನಾಯಕರ ಪೈಕಿ ನರೇಂದ್ರ ಮೋದಿ ಮೋದಿ 15.66% ಮತಗಳನ್ನು ಪಡೆದಿದ್ದಾರೆ. ವಿಶ್ವದ ಜನ ಮೆಚ್ಚಿದ ಪುರುಷ ಸೆಲೆಬ್ರೆಟಿ ಪೈಕಿ ಉದ್ಯಮಿ ಬಿಲ್‌ಗೇಟ್ಸ್ ಮೊದಲ ಸ್ಥಾನದಲ್ಲಿದ್ದರೆ, ಮಹಿಳಾ […]

ಬಾಲಿವುಡ್ ಅಮಿತಾಭ್‌ ಬಚ್ಚನ್‌ಗೆ ‘ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿ

ನವದೆಹಲಿ: ಬಾಲಿವುಡ್ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು 2019ನೇ ಸಾಲಿನ ‘ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿನಿ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗೆ ಅಮಿತಾಭ್‌ ಅವರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ವಿನೋದ್ ಖನ್ನ ಅವರಿಗೆ 2017ರಲ್ಲಿ ಈ ಪ್ರಶಸ್ತಿ ಸಿಕ್ಕಿದ್ದರೆ  ಡಾ. ರಾಜ್ ಕುಮಾರ್ ಅವರು 1995ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಅಮಿತಾಭ್‌ ಬಚ್ಚನ್‌ ಅವರನ್ನು ಪದ್ಮಭೂಷಣ, ಪದ್ಮವಿಭೂಷಣ […]

ನವದೆಹಲಿ: ಈರುಳ್ಳಿ ಕೆ.ಜಿಗೆ 80 ರೂ.

ನವದೆಹಲಿ: ದೆಹಲಿಯಲ್ಲಿ ಈರುಳ್ಳಿ ಬೆಲೆ  70 ರೂ. ರಿಂದ 80 ರೂ. ವರೆಗೆ ತಲುಪಿದ್ದು, ಕೇಂದ್ರ ಸರ್ಕಾರದ ಬೆಲೆ ನಿಯಂತ್ರಿಸಲು ಮುಂದಾಗಿದೆ. ದೇಶದ  ಹಲವು ಭಾಗಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ದೆಹಲಿಯಲ್ಲಿ ಕಳೆದ ವಾರ ಕೆ.ಜಿಗೆ 57 ರೂ. ಇತ್ತು. ಈ ವಾರ  70–80 ರೂ. ಕ್ಕೆ ಏರಿದೆ. 2-3 ದಿನಗಳಲ್ಲಿ ಬೆಲೆಯಲ್ಲಿ ಸ್ಥಿರತೆ ಮೂಡದೇ ಇದ್ದರೆ ಸರ್ಕಾರ ದಾಸ್ತಾನು ಮಿತಿ ಹೇರಲಿದೆ. ಈರುಳ್ಳಿ ಪೂರೈಕೆ ಹೆಚ್ಚಿಸುವ ಮೂಲಕ ಬೆಲೆಯನ್ನು ನಿಯಂತ್ರಣಕ್ಕೆ  ತರಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರದ […]